ಆರ್ಯಭಟರನ್ನು 'ಡೆಲಿವರಿ ಬಾಯ್' ರೂಪದಲ್ಲಿ ತೋರಿಸಲಾಗಿದೆ!

(ಇದು ಯಾರ ರಾಷ್ಟ್ರೀಯ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಈ ಚಿತ್ರವನ್ನು ಮಾಹಿತಿಗಾಗಿ ಪೋಸ್ಟ್ ಮಾಡಲಾಗಿದೆ !- ಸಂಪಾದಕರು)
ಮುಂಬಯಿ – ಜಗತ್ತಿಗೆ ‘ಶೂನ್ಯ’ದ ಕೊಡುಗೆಯನ್ನು ನೀಡಿದ ಮಹಾನ್ ಭಾರತೀಯ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟರನ್ನು ‘ಅಮೆಜಾನ್ ಇಂಡಿಯಾ’ ಸಂಸ್ಥೆಯು ತನ್ನ ಉತ್ಪನ್ನಗಳ ಮಾರಾಟಕ್ಕಾಗಿ ಅಪಮಾನಿಸಿದೆ. ಆರ್ಯಭಟರನ್ನು ‘ಡೆಲಿವರಿ ಬಾಯ್’ ತರಹ (ಸಾಮಗ್ರಿಗಳನ್ನು ವಿತರಣೆ ಮಾಡುವವನಂತೆ) ತೋರಿಸಿ ಅವರ ಮಹತ್ವವನ್ನು ಕುಗ್ಗಿಸುವುದು, ಅವರ ಬಾಯಲ್ಲಿ ವಿದೂಷಕನ ತರಹದ ಸಂಭಾಷಣೆಗಳನ್ನು ಇಡುವುದು ಮತ್ತು ಅವರನ್ನು ‘ಅಮೆಜಾನ್’ನ ವ್ಯಾವಸಾಯಿಕ ಸ್ವಾರ್ಥಕ್ಕಾಗಿ ಬಳಸುವುದು ಮುಂತಾದ ತಪ್ಪು ಸಂಗತಿಗಳನ್ನು ಇದರಲ್ಲಿ ತೋರಿಸಲಾಗಿದೆ. ಇದರಿಂದ ದೇಶಪ್ರೇಮಿಗಳು ಮತ್ತು ಇತಿಹಾಸಪ್ರೇಮಿಗಳು ಆಕ್ರೋಶಗೊಂಡಿದ್ದಾರೆ. ‘ಈ ಜಾಹೀರಾತಿನಿಂದ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಅಪಮಾನವಾಗಿದ್ದು, ಅಮೆಜಾನ್ ಈ ಜಾಹೀರಾತನ್ನು ತಕ್ಷಣವೇ ಹಿಂಪಡೆದು ಕ್ಷಮೆ ಕೇಳಬೇಕು, ಹಾಗೂ ಕೇಂದ್ರ ಸರಕಾರವು ಇದರ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು’, ಎಂದು ನಾಗರಿಕರು ಆಗ್ರಹಿಸಿದ್ದಾರೆ. (ಇಂತಹ ಆಗ್ರಹವನ್ನು ಏಕೆ ಮಾಡಬೇಕಾಗುತ್ತದೆ? ಸರಕಾರವು ಸ್ವತಃ ಯಾಕೆ ಕ್ರಮ ಕೈಗೊಳ್ಳುವುದಿಲ್ಲ? – ಸಂಪಾದಕರು)
🚨 INSULT To ARYABHATA IN AMAZON INDIA Advertisement! 🚨
The great Indian mathematician and astronomer Aryabhata, whose contributions transformed the fields of mathematics and astronomy, has been depicted as a "delivery boy" in an @amazonIN advertisement.
This comes amid… pic.twitter.com/YzpK1kkRIW
— Sanatan Prabhat (@SanatanPrabhat) June 10, 2026
1. ಜಾಹೀರಾತಿನಲ್ಲಿ ಆರ್ಯಭಟರು ಇಂದಿನ ಆಧುನಿಕ ಯುಗಕ್ಕೆ ಮರಳಿ ಬಂದಿರುವುದಾಗಿ ತೋರಿಸಲಾಗಿದೆ. ಕೆಲವು ಮಕ್ಕಳು ಅವರಿಗೆ ‘ಯಾರು ನೀನು?’ ಮತ್ತು ‘ಚಾಚಾ, ಯಾವ ಸಾಮಗ್ರಿ ತಂದಿದ್ದೀಯಾ?’ ಎಂದು ಕೇಳಿ ಅವರನ್ನು ಗೇಲಿ ಮಾಡುತ್ತಿದ್ದಾರೆ.
2. ಆರ್ಯಭಟರು ಮಾನವನ ದೃಷ್ಟಿಯಿಂದ ‘ಶೂನ್ಯ’ದ ಮಹತ್ವ ಹೇಗಿದೆ ಎಂಬುದನ್ನು ನೋಡಲು ಅತ್ಯಂತ ವ್ಯಾಕುಲರಾಗಿರುವುದನ್ನು ತೋರಿಸಲಾಗಿದೆ; ಆದರೆ ಈ ಮಹಾನ್ ಸಂಶೋಧನೆಯ ಸಂಬಂಧವನ್ನು ಅಮೆಜಾನ್ ತನ್ನ ‘ಝೀರೋ ಡೆಲಿವರಿ ಫೀ’ (ಶೂನ್ಯ ವಿತರಣಾ ಶುಲ್ಕ), ‘ಝೀರೋ ಸರ್ಚ್ ಫೀ’ (ಶೂನ್ಯ ಹುಡುಕಾಟ ಶುಲ್ಕ) ಮತ್ತು ‘ಝೀರೋ ಹ್ಯಾಂಡ್ಲಿಂಗ್ ಫೀ’ (ಶೂನ್ಯ ನಿರ್ವಹಣಾ ಶುಲ್ಕ) ಗಳೊಂದಿಗೆ ಜೋಡಿಸಿದೆ; ಆದರೆ ಇದು ಅತ್ಯಂತ ಖಂಡನೀಯವಾಗಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ