ಮುಖ್ಯಾಂಶಗಳು..
|

ಭಾರತದ ಇತಿಹಾಸದಲ್ಲಿ ಅನೇಕ ರಾಜ-ಮಹಾರಾಜರು, ಸಂಘಟನೆಗಳು, ಸಂತರು ಮತ್ತು ವ್ಯಕ್ತಿಗಳು ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ಉಳಿಸಲು ಹೋರಾಡಿದ್ದಾರೆ. ಅವರಿಂದಲೇ ಇಂದು ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯು ಉಳಿದುಕೊಂಡಿದೆ. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರೊಂದಿಗೆ ‘ಪ್ರಾಚ್ಯಮ್ ಈ ‘ಒಟಿಟಿ ಪ್ಲಾಟ್‌ಫಾರ್ಮ್ನ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯದರ್ಶಿ ಕ್ಯಾಪ್ಟನ್ ಪ್ರವೀಣ್ ಚತುರ್ವೇದಿ (ನಿವೃತ್ತ) ಇವರು ‘ಚೇಂಜ್ ಮೇಕರ್ಸ್ ಕಾರ್ಯ ಕ್ರಮದ ಅಡಿಯಲ್ಲಿ ಸಂವಾದ ನಡೆಸಿದರು. ಆಗ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ‘ಭಾರತದ ತಥಾಕಥಿತ ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ ಈ ಬಗ್ಗೆ ಮಂಡಿಸಿದ ಪ್ರಖರ ವಿಚಾರಗಳನ್ನು ಈ ಲೇಖನದ ಮೂಲಕ ಪ್ರಕಟಿಸುತ್ತಿದ್ದೇವೆ.
ಧರ್ಮಕ್ಕೆ ಸಂಬಂಧಿಸಿದ ಕಾನೂನುಗಳನ್ನು ಮಾಡಲು ಧರ್ಮಕ್ಕೆ ಸಂಬಂಧಿಸಿದ ತಜ್ಞರ ಸಹಭಾಗಿತ್ವ ಆವಶ್ಯಕ !
ಹಿಂದೂ ಕಾನೂನಿನ ತಜ್ಞರು ಇರಬಹುದು, ಅವರು ಜಾತ್ಯತೀತರಾಗಿರಬಹುದು ಮತ್ತು ಅವರು ಹಿಂದೂವಿರೋಧಿಗಳೂ ಆಗಿರಬಹುದು, ಇದು ಭಾರತದ ನ್ಯಾಯಾಂಗ ವ್ಯವಸ್ಥೆಯ ಸಮಸ್ಯೆಯಾಗಿದೆ. ನ್ಯಾಯಾಂಗದಲ್ಲಿ ಅಥವಾ ಸಂಸತ್ತಿನಲ್ಲಿ ಯಾವುದೇ ಕಾನೂನನ್ನು ಮಾಡಬೇಕಾದಾಗ, ಸಂಸದರಾಗಿ ಆಯ್ಕೆಯಾದವರಿಗೆ ಧರ್ಮದ ಬಗ್ಗೆ ಜ್ಞಾನ ಇದ್ದೇ ಇರುತ್ತದೆ ಮತ್ತು ಅವರು ಧರ್ಮಕ್ಕೆ ಸಂಬಂಧಿಸಿದ ಕಾನೂನುಗಳನ್ನು ಮಾಡಬಹುದು ಎಂದೇನಿಲ್ಲ. ಪಾಕಿಸ್ತಾನದ ಇಸ್ಲಾಮಿಕ್ ರಾಷ್ಟ್ರದ ನಿರ್ಮಾಣದ ಬಗ್ಗೆ ಭಾರತಕ್ಕಾಗಲಿ ಅಥವಾ ಜಗತ್ತಿಗಾಗಲಿ ಯಾವುದೇ ಅಡ್ಡಿ ಇರಲಿಲ್ಲ, ಹಾಗೆಯೇ ಬಾಂಗ್ಲಾದೇಶದ ಇಸ್ಲಾಮಿಕ್ ರಾಷ್ಟ್ರದ ನಿರ್ಮಾಣದ ಬಗ್ಗೆಯೂ ಭಾರತಕ್ಕಾಗಲಿ ಅಥವಾ ಜಗತ್ತಿಗಾಗಲಿ ಯಾವುದೇ ತೊಂದರೆ ಇರಲಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರದ ನಿರ್ಮಾಣದ ಬಗ್ಗೆ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಜಗತ್ತಿಗೆ ಯಾವುದೇ ಆಕ್ಷೇಪವಿರಬಾರದು. – ಸದ್ಗುರು ಡಾ. ಪಿಂಗಳೆ |
೧. ಧರ್ಮ ಎಂದರೆ ಏನು ?
ನಮ್ಮಲ್ಲಿ ಧರ್ಮ, ಪಂಥ ಮತ್ತು ಸಂಪ್ರದಾಯಗಳಿವೆ. ಆದುದರಿಂದಲೇ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಅರ್ಥೈಸಲು ಮೊಟ್ಟಮೊದಲು ಹಿಂದೂ ಧರ್ಮ ಅಥವಾ ಧರ್ಮವನ್ನು ತಿಳಿದುಕೊಳ್ಳಬೇಕು. ಪಾಶ್ಚಾತ್ಯ ದೇಶಗಳ ಭಾಷೆಗಳ ಶಿಷ್ಟಾಚಾರಗಳು ಬೇರೆ ಆಗಿವೆ. ನಮ್ಮ ಸಂಸ್ಕೃತ ಭಾಷೆಯ ಮೇಲೆ ಆಧಾರಿತ ಹಿಂದಿ, ಮರಾಠಿ ಅಥವಾ ಸಂಸ್ಕೃತಕ್ಕೆ ಹೋಲಿಸಿದರೆ ಅವರ ಶಬ್ದಕೋಶವು ಅತ್ಯಂತ ಸೀಮಿತವಾಗಿದೆ. ಆಂಗ್ಲ ಭಾಷೆಗೆ ಮಿತಿ ಇರುವುದರಿಂದ, ‘ರಿಲಿಜನ್ (ಖeಟigioಟಿ) ಅಂದರೇನೆ ಧರ್ಮ ಎಂಬ ಸುಳ್ಳು ನಿರೂಪಣೆಯು ಹಲವು ವರ್ಷಗಳಿಂದ ನಡೆಯುತ್ತಿದೆ. ಇದು ಕೇವಲ ನಮ್ಮ ಭಾಷೆಯ ಮೇಲೆ ಮಾತ್ರವಲ್ಲದೆ, ನಮ್ಮ ವಿಚಾರಗಳ ಅಭಿವ್ಯಕ್ತಿಯ ಮೇಲೂ ಎಲ್ಲಕ್ಕಿಂತ ದೊಡ್ಡ ಆಘಾತವನ್ನು ಮಾಡಿದೆ.
‘ಯಾವುದರಿಂದ ಅಭ್ಯುದಯ ಮತ್ತು ನಿಃಶ್ರೇಯಸ ಆಗುತ್ತದೆಯೋ, ಅದನ್ನು ಧರ್ಮ ಎನ್ನುತ್ತಾರೆ. ಇದು ಧರ್ಮದ ಮೂಲಭೂತ ವ್ಯಾಖ್ಯೆಯಾಗಿದೆ. ‘ಯಾವುದು ಸಮಾಜವನ್ನು ಧಾರಣೆ ಮಾಡುತ್ತದೆಯೋ, ಅದು ಧರ್ಮ. ಎಂಬ ಆದಿ ಶಂಕರಾಚಾರ್ಯರ ಪರಿಪೂರ್ಣ ವ್ಯಾಖ್ಯೆ ಇದೆ. ಅವರ ಪ್ರಕಾರ, ‘ಯಾವುದರಿಂದ ವ್ಯಕ್ತಿಯ ಐಹಿಕ ಮತ್ತು ಪಾರಲೌಕಿಕ ಉನ್ನತಿ ಆಗುತ್ತದೆಯೋ ಮತ್ತು ಸಮಾಜ ವ್ಯವಸ್ಥೆಯು ಉತ್ತಮವಾಗಿರುತ್ತದೆಯೋ, ಅದುವೇ ಧರ್ಮ. ಅದರಲ್ಲಿ ಉತ್ತಮ ಸಮಾಜ ವ್ಯವಸ್ಥೆ ಹಾಗೂ ವ್ಯಕ್ತಿಯ ಆಧ್ಯಾತ್ಮಿಕ ಮತ್ತು ಭೌತಿಕ ಉನ್ನತಿಯ ಬಗ್ಗೆ ವಿಚಾರ ಮಾಡಲಾಗಿದೆ.
೨. ಯಾರನ್ನು ಹಿಂದೂ ಎನ್ನಬೇಕು ?
‘ಹಿಂದೂ ಶಬ್ದದ ಅರ್ಥ ಹೀಗಿದೆ – ‘ಹೀನಾನ್ ಗುಣಾನ್ ದೂಷಯತಿ ಇತಿ ಹಿಂದೂ !
‘ಮೇರುಮಂತ್ರ ಗ್ರಂಥದಲ್ಲಿ ನೀಡಿರುವ ವಿವರಣೆಯ ಪ್ರಕಾರ, ‘ಯಾವನು ತನ್ನಲ್ಲಿರುವ ಹೀನ ಗುಣಗಳನ್ನು ಸತತವಾಗಿ ದೂರ ಮಾಡಿ ತನ್ನ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸುತ್ತಾನೋ, ಅವನೇ ಹಿಂದೂ. ಹೀನ ಗುಣಗಳು, ಎಂದರೆ ನಮ್ಮಲ್ಲಿರುವ ಕೆಟ್ಟ ಪ್ರವೃತ್ತಿಗಳು, ದೋಷಗಳು ಮತ್ತು ಅಹಂಕಾರ. ಇವುಗಳನ್ನು ಆಧ್ಯಾತ್ಮಿಕ ಭಾಷೆಯಲ್ಲಿ ‘ರಜ-ತಮ ಎಂದು ಕರೆಯುತ್ತಾರೆ. ಅವುಗಳನ್ನು ಜಯಿಸಿ ಸತ್ತ್ವಗುಣಿಯಾಗಲು ಪ್ರಯತ್ನಿಸಿ, ನಂತರ ಸತ್ತ್ವಗುಣದ ಆಚೆಗೂ ಹೋಗಬೇಕು. ಅದಕ್ಕಾಗಿ ಶುದ್ಧೀಕರಣದ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಈ ಗ್ರಂಥದಲ್ಲಿ ಯಾವುದೇ ಉಪಾಸನಾಪದ್ಧತಿಯ ಉಲ್ಲೇಖವಿಲ್ಲ. ಸ್ವಾರ್ಥಿ ಮತ್ತು ದ್ವೇಷಪೂರಿತ ವಿಚಾರಗಳನ್ನು ನಶಿಸಿ ಧಾರ್ಮಿಕ ಪ್ರವೃತ್ತಿಯನ್ನು ಅಳವಡಿಸಿ ಮತ್ತು ಎಲ್ಲರನ್ನೂ ಪ್ರೀತಿಸುವ ಒಂದು ಉತ್ತಮ ಸಾಮಾಜಿಕ ವ್ಯವಸ್ಥೆಗಾಗಿ ಪ್ರಯತ್ನಿಸಬೇಕು. ಇದು ಧರ್ಮದ ಸಂದರ್ಭವಾಗಿದೆ.
ನಮ್ಮ ಸಂವಿಧಾನದಲ್ಲಿ , ಡಾ. ಅಂಬೇಡ್ಕರ್ ಇವರು ನಮ್ಮ ಸಂಸತ್ ಭವನದಲ್ಲಿ ‘ಹಿಂದೂ ಶಬ್ದದ ಅರ್ಥವನ್ನು ಸ್ಪಷ್ಟಪಡಿಸುವಾಗ, ‘ಭಾರತೀಯ ಉಪಖಂಡದಲ್ಲಿ ಯಾವ ಬೌದ್ಧ, ಸಿಕ್ಖ್, ಜೈನ್ ಅಥವಾ ಅಂತಹ ಉಪಾಸನಾ ಪಂಥಗಳು ನಿರ್ಮಾಣವಾಗಿವೆಯೋ ಅವೆಲ್ಲವೂ ‘ಹಿಂದೂ ಎಂಬ ಸಂಜ್ಞೆಯ ಅಡಿಯಲ್ಲಿ ಬರುತ್ತವೆ. ಕ್ರೈಸ್ತ ಮತ್ತು ಇಸ್ಲಾಂ ಪಂಥವು ಹೊರಗೆ ನಿರ್ಮಾಣವಾಗಿವೆ. ಆದ್ದರಿಂದ ಅವರನ್ನು ಹೊರತು ಪಡಿಸಿ ಉಳಿದವರೆಲ್ಲರೂ ಹಿಂದೂಗಳಾಗಿದ್ದಾರೆ, ಎಂದಿದ್ದಾರೆ.

೩. ಸಂಕ್ಷಿಪ್ತದಲ್ಲಿ ಹಿಂದೂ ರಾಷ್ಟ್ರದ ಕಲ್ಪನೆ
ಹಿಂದೂ ರಾಷ್ಟ್ರದಲ್ಲಿ ಪರಸ್ಪರರ ಬಗ್ಗೆ ಪ್ರೇಮ, ಪರಸ್ಪರರ ಬಗ್ಗೆ ಗೌರವ ಮತ್ತು ಪರಸ್ಪರರಲ್ಲಿ ಸಹೋದರಭಾವ ಇರುವುದು. ಪರಸ್ಪರರ ಧರ್ಮದ ಬಗ್ಗೆ ಗೌರವ ಇರುವುದು. ಪ್ರತಿಯೊಬ್ಬರನ್ನೂ ಸಮಾನವಾಗಿ ನಡೆಸಿಕೊಳ್ಳಲಾಗುವುದು, ಯಾರ ಓಲೈಕೆಯೂ ಇರುವುದಿಲ್ಲ ಮತ್ತು ಯಾರಿಗೂ ವಿಶೇಷ ಸವಲತ್ತುಗಳು ಇರುವುದಿಲ್ಲ. ಯಾವ ಸತ್ಯವನ್ನು ಹೇಳಲಾಗುತ್ತದೆಯೋ, ಅದನ್ನು ನ್ಯಾಯಾಂಗ ವ್ಯವಸ್ಥೆಯ ಮೂಲಕ ಪೂರ್ಣಗೊಳಿಸ ಲಾಗುವುದು. ಇದರೊಂದಿಗೆ ಪ್ರತಿಯೊಬ್ಬರೂ ಕಾನೂನು ಮತ್ತು ಸುವ್ಯವಸ್ಥೆ ಪಾಲಿಸಬೇಕು ಎಂಬುದರತ್ತ ಗಮನವಿರುವುದು.
೪. ಜಾತ್ಯತೀತವಾದದ ಮಕ್ಕಳಾಟ

ಭಾರತದಲ್ಲಿ ‘ಧರ್ಮನಿರಪೇಕ್ಷತೆ ಎಂಬ ಶಬ್ದಕ್ಕೆ ವ್ಯಾಖ್ಯೆಯನ್ನೇ ಮಾಡಿಲ್ಲ. ನಮ್ಮ ಸಂವಿಧಾನವು ಹೇಳುವಂತೆ, ವಿಜ್ಞಾನದ ವಿದ್ಯಾರ್ಥಿಯಾಗಿ ನಮ್ಮ ಸಂವಿಧಾನವು ವೈಜ್ಞಾನಿಕ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ. ವಿಜ್ಞಾನ ಹೇಳುವುದೇನೆಂದರೆ, ನಿಮ್ಮ ಎದುರಿಗಿರುವ ಯಾವುದೇ ಶಬ್ದವಿರಲಿ ಮೊದಲು ಅದರ ವ್ಯಾಖ್ಯೆಯನ್ನು ಮಾಡಿರಿ; ಆ ಮೂಲಕ ನೀವು ಆ ಶಬ್ದದ ದೃಷ್ಟಿಕೋನದಿಂದ ಮುಂದೆ ಹೋಗಬಹುದು. ಯಾವ ಸಂಸತ್ತು ಕಲಂ ೭೬ ರಲ್ಲಿ ‘ಧರ್ಮನಿರಪೇಕ್ಷ ಎಂಬ ಶಬ್ದವನ್ನು ತಂದಿತೋ, ಅದು ೧೯೫೦ ರಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ ಮತ್ತು ಸಂವಿಧಾನದಲ್ಲಿ ಅದರ ವ್ಯಾಖ್ಯೆಯನ್ನೂ ಮಾಡಲಾಗಿಲ್ಲ. ಸಂಸತ್ತಿಗೂ ತಿಳಿದಿಲ್ಲದ ಮತ್ತು ನ್ಯಾಯಾಂಗಕ್ಕೂ ಸ್ಪಷ್ಟತೆಯಿಲ್ಲದ ಒಂದು ಸಂಜ್ಞೆಯಿದು. ಆದ್ದರಿಂದ ಪ್ರತಿಯೊಬ್ಬರೂ ವಿವಿಧೆಡೆ ಅದಕ್ಕೆ ಬೇರೆ ಬೇರೆ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಕೇವಲ ಒಂದು ಆಟ ನಡೆಯುತ್ತಿದೆ. ಒಂದೋ ಎಲ್ಲಾ ಧರ್ಮಗಳಿಂದ ಸಮಾನ ಅಂತರವನ್ನು ಇಡಬೇಕು ಅಥವಾ ಎಲ್ಲಾ ಧರ್ಮಗಳಿಗೂ ಸಮಾನ ಹಕ್ಕುಗಳನ್ನು ನೀಡಬೇಕು. ಇದೇ ಧರ್ಮನಿರಪೇಕ್ಷತೆ ಆಗಿದೆ. ಸದ್ಯಕ್ಕಂತೂ ಅವರು ಧರ್ಮನಿರಪೇಕ್ಷತೆಗೆ ಯಾವ ಅರ್ಥವನ್ನು ನೀಡಿದ್ದಾರೋ, ಅದರಂತೆ ಅದರ ಸಂಪೂರ್ಣ ಹೊರೆಯನ್ನು ಕೇವಲ ಹಿಂದೂಗಳ ಮೇಲೆಯೇ ಹಾಕಲಾಗಿದೆ. ಆದುದರಿಂದ ನಾವು ಕೇವಲ ಧರ್ಮನಿರಪೇಕ್ಷತೆಯನ್ನು ಪಾಲಿಸಬೇಕಾಗಿದೆ. ಧರ್ಮನಿರಪೇಕ್ಷತೆಯ ಸದ್ಯದ ಅರ್ಥವು ಹಿಂದೂವಿರೋಧಿ ಮತ್ತು ಅಲ್ಪಸಂಖ್ಯಾತರ ಪರವಾಗಿದೆ. ಅದರಿಂದ ಭಾರತದಲ್ಲಿ ಧರ್ಮನಿರಪೇಕ್ಷತೆಯು ಒಂದು ಪಕ್ಷಪಾತದ ವಿಷಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೊಟ್ಟಮೊದಲು ‘ಧರ್ಮನಿರಪೇಕ್ಷತೆ ಎಂಬ ಶಬ್ದದ ವ್ಯಾಖ್ಯೆ ಮಾಡುವುದು ಆವಶ್ಯಕವಾಗಿದೆ.
‘ಈ ವ್ಯಾಖ್ಯೆಯನ್ನು ಮಾಡುವವವರೆಗೆ ಸರಕಾರ ಅಥವಾ ನ್ಯಾಯಾಂಗವು ಈ ಆಧಾರದ ಮೇಲೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸ್ಪಷ್ಟಪಡಿಸಬೇಕು. ಇದರೊಂದಿಗೆ ಧರ್ಮನಿರಪೇಕ್ಷತೆ ಹೆಸರಿನಲ್ಲಿ ನಿರ್ಧಾರ ತೆಗೆದು ಕೊಳ್ಳುವಾಗ ತಾರತಮ್ಯ ನಡೆಯುತ್ತಿದೆಯೇ ಎಂಬ ಬಗ್ಗೆ ವಿಶ್ಲೇಷಣೆ ನಡೆಯಬೇಕಿದೆ. ಪ್ರಸ್ತುತ ದೇಶದಲ್ಲಿ ನೌಕರಶಾಹಿ ಮತ್ತು ನ್ಯಾಯಾಂಗಕ್ಷೇತ್ರದಲ್ಲಿ ಭೇದಭಾವ ನಡೆಯುತ್ತಿದೆ. ಸಂವಿಧಾನದತತ್ತ್ವವು ಸಮಾನತೆ ಯಾಗಿದ್ದು, ಇವೆಲ್ಲಾ ನಿರ್ಣಯಗಳು ನಮ್ಮ ಮೂಲಭೂತ ತತ್ತ್ವ ಮತ್ತು ಮೌಲ್ಯಗಳಿಗೆ ಸವಾಲು ಹಾಕುತ್ತಿವೆ; ಇಂತಹ ಸ್ಥಿತಿಯಲ್ಲಿ ನೌಕರಶಾಹಿ ಅಥವಾ ನ್ಯಾಯಾಂಗವು ಸಂವಿಧಾನದ ಪಾಲನೆಯ ದೃಷ್ಟಿಯಿಂದ ಧರ್ಮನಿರಪೇಕ್ಷತೆಗೆ ವ್ಯಾಖ್ಯೆ ಮಾಡದಿರುವುದು ವ್ಯವಸ್ಥೆಯ ಜವಾಬ್ದಾರಿಯಾಗಿದೆ.
೫. ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಸೇರಿಸಿದ ‘ಧರ್ಮನಿರಪೇಕ್ಷತೆಯು ಸಂವಿಧಾನಬಾಹಿರವಾಗಿದೆ !
‘ಸಂವಿಧಾನದ ಪ್ರಸ್ತಾವನೆ ಅಥವಾ ಸಂವಿಧಾನದ ಮೂಲ ತತ್ತ್ವಗಳನ್ನು ಬದಲಾಯಿಸಲು ಬರುವುದಿಲ್ಲ; ಆದರೆ ಆ ಒಂದು ಪುಟದ ಬರಹಕ್ಕೆ ಮುಖ್ಯ ಆಧಾರವೆಂದರೆ, ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಗಳು. ಸಂವಿಧಾನ ರಚನಾ ಪ್ರಕ್ರಿಯೆಯ ಸಮಯದಲ್ಲಿ ‘ಧರ್ಮನಿರಪೇಕ್ಷತೆ ಎಂಬ ಶಬ್ದವನ್ನು ಸೇರಿಸುವ ಪ್ರಸ್ತಾವನೆ ಬಂದಾಗಲೆಲ್ಲ ಅದನ್ನು ತಿರಸ್ಕರಿಸಲಾಯಿತು, ಅಷ್ಟೇ ಅಲ್ಲ ಅದನ್ನು ಯಾವುದೇ ಕಾರಣಕ್ಕೂ ಸೇರಿಸಬಾರದು ಎಂಬ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿತ್ತು. ಅಲ್ಪಸಂಖ್ಯಾತರ ಮೇಲೆ ಬಲವಂತ ಅಥವಾ ಅವರ ಶೋಷಣೆಯಾಗಬಹುದು ಎಂಬುದು ಧರ್ಮನಿರಪೇಕ್ಷತೆಯ ಬಗ್ಗೆ ಅವರಿಗಿದ್ದ ಆತಂಕವಾಗಿತ್ತು. ಇದನ್ನು ತಪ್ಪಿಸಲು ಕಲಮ್ ೨೮, ೨೯ ಮತ್ತು ೩೦ ರಲ್ಲಿ ವಿಶೇಷ ವ್ಯವಸ್ಥೆಯ ಮೂಲಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಾಯಿತು.
ಇದರ ಅರ್ಥ, ಇಲ್ಲಿ ಹಿಂದೂಗಳದ್ದೇ ರಾಜ್ಯವಿರುವುದು. ಆದುದರಿಂದ ‘ಧರ್ಮನಿರಪೇಕ್ಷತೆ ಎಂಬ ಶಬ್ದದ ಬಳಕೆಯು ಸಂವಿಧಾನಶಿಲ್ಪಿಗಳ ವಿಚಾರಗಳ ಹತ್ಯೆಯಾಗಿದೆ, ಹಾಗೆಯೇ ಸಾಕ್ಷಾತ್ ಸಂವಿಧಾನದ ಹತ್ಯೆಯೂ ಆಗಿದೆ. ಧರ್ಮನಿರಪೇಕ್ಷತೆಯನ್ನು ಬೆಂಬಲಿಸುವುದು, ಸಂವಿಧಾನಶಿಲ್ಪಿಗಳ ವಿಚಾರಧಾರೆಗೆ ವಿರುದ್ಧವಾಗಿದೆ. ನಮಗೆ ಇದು ಅರ್ಥವಾಗುವವರೆಗೆ ನಾವು ಮುಂದೆ ಸಾಗಲು ಸಾಧ್ಯವಿಲ್ಲ. ವಾಸ್ತವದಲ್ಲಿ ನಮ್ಮ ಮೂಲಭೂತ ಹಕ್ಕುಗಳು ನಮ್ಮದೇ ಮೂಲಭೂತ ಹಕ್ಕುಗಳ ವಿರುದ್ಧವಾಗಿದ್ದವು. ತದನಂತರ ೧೯೫೦ ರಲ್ಲಿ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲಿಲ್ಲ; ಆದರೆ ಅಂದಿನ ಕಾಂಗ್ರೆಸ್ ಸರಕಾರವು ಅಘೋಷಿತ ಧರ್ಮನಿರಪೇಕ್ಷತೆಯನ್ನು ಜಾರಿಗೆ ತಂದಿತು. ನೆಹರೂ ಅವರೂ ‘ಧರ್ಮನಿರಪೇಕ್ಷತೆ ಎಂಬ ಶಬ್ದವನ್ನು ಬಳಸಬೇಡಿ ಎಂದು ಹೇಳಿದ್ದರು, ಹಾಗೆಯೇ ಡಾ. ಅಂಬೇಡಕರ ಇವರೂ ಹೇಳಿದ್ದರು; ಆದರೆ ೧೯೭೬ ರಲ್ಲಿ ಎರಡೂ ಕಡೆಯ ವಿಚಾರಧಾರೆಗಳಿಗೆ ವಿಶ್ವಾಸದ್ರೋಹ ಬಗೆಯಲಾಯಿತು. ಈ ಸಂವಿಧಾನ ತಿದ್ದುಪಡಿಗೆ ಯಾವುದೇ ಬಹುಮತದ ಬೆಂಬಲ ಸಿಗಲಿಲ್ಲ. ಆದ್ದರಿಂದ ಈ ತಿದ್ದುಪಡಿ ಸಂವಿಧಾನಬಾಹಿರವಾಗಿದೆ ಮತ್ತು ಇದನ್ನು ರದ್ದುಗೊಳಿಸಬೇಕು. ತುರ್ತುಪರಿಸ್ಥಿತಿಯ ಸಮಯದಲ್ಲಿ ಜನರು ಕಾರಾಗೃಹದಲ್ಲಿದ್ದಾಗ ನಡೆಸಲಾದ ಈ ಸಂವಿಧಾನ ತಿದ್ದುಪಡಿಯ ಪ್ರಕ್ರಿಯೆಯು ಅಸಂವಿಧಾನಿಕವಾಗಿದೆ.
೬. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕ !
ಮೊದಲು ಅವರು ಧರ್ಮನಿರಪೇಕ್ಷತೆ ಎಂಬ ಶಬ್ದದ ವ್ಯಾಖ್ಯೆ ಯನ್ನು ಮಾಡಲಿ ಮತ್ತು ನಂತರ ನ್ಯಾಯಾಂಗ, ಕಾರ್ಯಾಂಗ ಹಾಗೂ ಎಲ್ಲಾ ರಾಜಕಾರಣಿಗಳು ಆ ವ್ಯಾಖ್ಯೆಯಂತೆ ನಡೆದು ಕೊಳ್ಳಲಿ. ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಹತ್ತಿಕ್ಕಬಹುದು ಎಂಬ ಭಯದಿಂದ ಧರ್ಮನಿರಪೇಕ್ಷತೆಯನ್ನು ಹೇರಲಾಯಿತು. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿಲ್ಲವೇ ? ಒಂದು ವೇಳೆ ನಡೆಯುತ್ತಿದ್ದರೆ, ಭಾರತ ಸರಕಾರ ಮತ್ತು ವಿಶ್ವಸಂಸ್ಥೆಯು ಮೊದಲು ಆ ಎಲ್ಲಾ ದೇಶಗಳು ಧರ್ಮನಿರಪೇಕ್ಷತೆಯನ್ನು ಸ್ವೀಕರಿಸುವಂತೆ ಒತ್ತಾಯಿಸಬೇಕು; ಏಕೆಂದರೆ ಅಲ್ಲಿ ಅಲ್ಪಸಂಖ್ಯಾತರಿಗೆ ಅಪಾಯವಿದೆ. ಒಂದು ವೇಳೆ ಯಾವುದೇ ಇಸ್ಲಾಮಿಕ್ ರಾಷ್ಟ್ರದಲ್ಲಿ ಯಾವುದೇ ಅಪಾಯವಿಲ್ಲ ಎಂದಾದರೆ ಮತ್ತು ಕ್ರೈಸ್ತ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಅಪಾಯವಿಲ್ಲವೆಂದು ನೀವು ನಂಬುವುದಾದರೆ, ಹಿಂದೂ ರಾಷ್ಟ್ರದಲ್ಲಿಯೂ ಯಾರಿಗೂ ಅಪಾಯವಿರುವುದಿಲ್ಲ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.
ಬಹುಮತವೇ ಕಾನೂನು ಆಗಿರುತ್ತದೆ ಮತ್ತು ಆಡಳಿತವು ಬಹುಮತಕ್ಕನುಸಾರವೇ ನಡೆಯಬೇಕು ಎಂಬುದು ಪ್ರಜಾಪ್ರಭುತ್ವದ ಮೂಲಭೂತ ಆಶಯವಾಗಿದೆ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ಅವರಿಗೆ ಶಾಲಾ ಶಿಕ್ಷಣದಲ್ಲಿ ಧರ್ಮಶಿಕ್ಷಣದ ಹಕ್ಕಿಲ್ಲ. ಆದ್ದರಿಂದ ಇದು ಪ್ರಜಾಪ್ರಭುತ್ವವಲ್ಲ. ಅಲ್ಪಸಂಖ್ಯಾತರಿಗೆ ನೀಡಲಾದ ಹಕ್ಕುಗಳನ್ನು ಬಹುಸಂಖ್ಯಾತರಿಗೆ ನಿರಾಕರಿಸಲಾಗುತ್ತಿದೆ, ಇದು ಅಸಮಾನತೆಯಾಗಿದೆ. ಆದುದರಿಂದ ಅಲ್ಪಸಂಖ್ಯಾತರಿಗೆ ನೀಡಿದ ಹಕ್ಕುಗಳನ್ನು ಎಲ್ಲಾ ಹಿಂದೂಗಳಿಗೂ ನೀಡುವ ಮೂಲಕ ಸಮಾನತೆಯ ಮಟ್ಟವನ್ನು ತಲುಪಬೇಕು. ಇದರಲ್ಲಿ ಹಿಂದೂ ಧರ್ಮವು ಸರ್ವಸಮಾವೇಶಕ ಮತ್ತು ಅದು ಪ್ರತಿಯೊಬ್ಬರ ಉತ್ಕರ್ಷವನ್ನು ಮಾಡುತ್ತದೆ ಎಂಬ ವಿಶ್ವಾಸ ನಿಮಗಿರಬೇಕು. ಇದಕ್ಕೂ ಮೊದಲು ನಾವು ಭಾರತಕ್ಕೆ ಬಂದ ಯಹೂದಿಗಳು (ಜ್ಯೂ), ಶಕರು, ಹೂಣರು, ಕುಶಾಣರಂತಹ ಪ್ರತಿಯೊಬ್ಬರನ್ನೂ ಗೌರವಿಸಿದ್ದೇವೆ, ಅವರ ಪರಂಪರೆಗಳನ್ನು ರಕ್ಷಿಸಿದ್ದೇವೆ ಮತ್ತು ಭವಿಷ್ಯದಲ್ಲಿಯೂ ಅದನ್ನು ಮಾಡಬಲ್ಲೆವು. ಒಂದು ವೇಳೆ ಬಹುಮತವೇ ಕಾನೂನಾಗಿದ್ದರೆ ಮತ್ತು ಭಾರತವು ಧಾರ್ಮಿಕ ಆಧಾರದಲ್ಲಿ ವಿಭಜನೆಯಾಗಿದ್ದರೆ, ಭಾರತವನ್ನು ‘ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಆವಶ್ಯಕವಾಗಿದೆ.
೭. ಬ್ರಿಟನ್‌ನಲ್ಲಿ ಧರ್ಮಗುರುಗಳಿಗಿರುವ ಧಾರ್ಮಿಕ ಕಾನೂನುಗಳನ್ನು ರೂಪಿಸುವ ಅಧಿಕಾರ
ಧರ್ಮ ಮತ್ತು ರಾಷ್ಟ್ರ, ಹಾಗೆಯೇ ರಾಜ ಮತ್ತು ಧರ್ಮದ ನಡುವಿನ ಅದ್ವೈತಕ್ಕೆ ಮಾನ್ಯತೆ ನೀಡಿ, ರಾಜನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಿ ‘ನೇಷನ್ ಸ್ಟೇಟ್ನ ಏಕೀಕರಣವಾಯಿತು. ಎರಡೂ ಧರ್ಮನಿಷ್ಠವಾಗಿದ್ದವು. ಇದರ ಪರಿಣಾಮವಾಗಿ ಅದು ಹಿಂದೂ ರಾಷ್ಟ್ರವಾಗಿತ್ತು. ೧೫ ಮತ್ತು ೧೬ ನೆಯ ಶತಮಾನದಲ್ಲಿ ಯುರೋಪ್‌ನಲ್ಲಿ ರಾಜ ಮತ್ತು ಚರ್ಚ್ ನಡುವೆ ಸಂಘರ್ಷ ಉಂಟಾದಾಗ, ‘ರಾಷ್ಟ್ರ ನಮ್ಮದು ಮತ್ತು ರಾಜ್ಯ ನಿಮ್ಮದು ಎಂದು ನಿರ್ಧರಿಸಲಾಯಿತು. ಇಂಗ್ಲೆಂಡ್ ಧರ್ಮನಿರಪೇಕ್ಷವಾಗಿದೆ, ಆದರೂ ೨೦ ಬಿಷಪ್‌ರನ್ನು ಅಧಿಕೃತವಾಗಿ ‘ಹೌಸ್ ಆಫ್ ಲಾರ್ಡ್ಸ್ಗೆ ನಾಮನಿರ್ದೇಶನ ಮಾಡಲಾಗುತ್ತದೆ; ಆದರೆ ಅವರು ಚುನಾಯಿತರಾಗುವುದಿಲ್ಲ. ಅಲ್ಲಿನ ಬಿಷಪ್‌ರು ಧಾರ್ಮಿಕ ಕಾನೂನುಗಳನ್ನು ಮಾಡುತ್ತಾರೆ. ಯಾವುದಾದರೂ ಧಾರ್ಮಿಕ ಕಾನೂನನ್ನು ‘ಹೌಸ್ ಆಫ್ ಕಾಮನ್ಸ್ ಅಂಗೀಕರಿಸದಿದ್ದರೂ ಅದು ಕಾನೂನಾಗಿ ಜಾರಿಯಾಗುತ್ತದೆ; ಏಕೆಂದರೆ ಧಾರ್ಮಿಕ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಕೇವಲ ಬಿಷಪ್‌ರಿಗೆ ಮಾತ್ರ ನೀಡಲಾಗಿದೆ. ಹೀಗಾಗಿ ಧರ್ಮನಿರಪೇಕ್ಷವಾಗಿದ್ದರೂ ಇಂಗ್ಲೆಂಡ್‌ನಲ್ಲಿ ಈ ರೀತಿಯ ನಿಬಂಧನೆ ಇದೆ.
ಒಂದು ವೇಳೆ ಭಾರತದ ಸಂವಿಧಾನದಲ್ಲಿ ಸನಾತನ ಧರ್ಮದ ಪರಂಪರೆಗೆ ಆಧಾರಿತವಾದ ಕಾನೂನುಗಳನ್ನು ಮಾಡಲು ಬ್ರಿಟಿಷ್ ಪದ್ಧತಿಯನ್ನು ಅನುಸರಿಸಿದ್ದರೆ, ನಮ್ಮ ಸಂವಿಧಾನದಲ್ಲಿ ಧರ್ಮಾಚಾರ್ಯರೇ ಧಾರ್ಮಿಕ ಕಾನೂನುಗಳನ್ನು ರೂಪಿಸಬಹುದಿತ್ತು. ಅಂತಹ ವ್ಯವಸ್ಥೆಯನ್ನು ಮಾಡದಿರುವುದು ಒಂದು ಪಿತೂರಿಯಾಗಿದೆ. ಬ್ರಿಟಿಷರು ತಮಗಾಗಿ ಲಿಖಿತ ಸಂವಿಧಾನವನ್ನು ಇಟ್ಟುಕೊಳ್ಳಲಿಲ್ಲ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡರು; ಆದರೆ ನಮಗೆ ಮಾತ್ರ ಅದನ್ನು ಬರೆಯುವಂತೆ ಒತ್ತಾಯಿಸಿದರು. ಅವರು ನಮಗೆ ಸಂವಿಧಾನವನ್ನು ಬರೆಯುವಂತೆ ಮಾಡಿದರು. ಇದು ಬ್ರಿಟಿಷರ ಎಷ್ಟು ದೊಡ್ಡ ಸಂಚು. ಆದ್ದರಿಂದ ನಾವು ಕೆಲವು ವಿಷಯಗಳ ಬಗ್ಗೆ ವಿಚಾರ ಮಾಡಬೇಕಾದ ಅವಶ್ಯಕತೆ ಇದೆ. ಅಲ್ಲಿ ಅವರ ಧರ್ಮಗುರುಗಳು ಮತ್ತು ಬಿಷಪ್‌ರು ಅಧಿಕೃತವಾಗಿ ‘ಚರ್ಚ್ ಆಫ್ ಇಂಗ್ಲೆಂಡನ್ನು ನಡೆಸುತ್ತಿದ್ದಾರೆ. ಒಂದು ವೇಳೆ ಅದರಲ್ಲಿ ಯಾವುದೇ ತೊಂದರೆ ಇಲ್ಲ ಎಂದಾದರೆ, ಭಾರತದಲ್ಲಿ ಹಿಂದೂ ರಾಷ್ಟ್ರವಿರಲು ಏನು ತೊಂದರೆ ಇದೆ ? (ಮುಂದುವರಿಯುವುದು)
– ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.
ಹಿಂದೂ ಧರ್ಮವೇ ಧರ್ಮನಿರಪೇಕ್ಷ ! – ಸದ್ಗುರು ಡಾ. ಚಾರುದತ್ತ ಪಿಂಗಳೆ
‘ಹಿಂದೂ ಧರ್ಮ ಎಂಬುದು ಒಂದು ಜೀವನಶೈಲಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಭಾರತದ ಅಜ್ಞಾನಿ ಜನರು, ಅವರು ಪತ್ರಕರ್ತರಾಗಲಿ, ರಾಜಕಾರಣಿಗಳಾಗಲಿ, ಧರ್ಮನಿರಪೇಕ್ಷ ಪ್ರಗತಿಪರರಾಗಲಿ ಅಥವಾ ಸಾಮ್ಯವಾದಿಗಳಾಗಲಿ, ಅವರೆಲ್ಲರೂ ‘ಧರ್ಮ ಎಂದರೆ ‘ರಿಲಿಜನ್ (Religion) ಎಂದು ವಾದಿಸುತ್ತಾರೆ. ಹಾಗಾದರೆ ಧರ್ಮದಲ್ಲಿ ಒಂದು ಉತ್ತಮ ಸಾಮಾಜಿಕ ವ್ಯವಸ್ಥೆಯ ವೈಶಿಷ್ಟ್ಯ ಎಲ್ಲಿ ಕಂಡುಬರುತ್ತದೆ ? ನೀವು ಆಧುನಿಕ ಪ್ರಗತಿಯನ್ನು ಸಾಧಿಸಬೇಕೆಂದಿದ್ದರೆ, ನಿಮ್ಮ ಉಪಾಸನಾ ಪಂಥದ ಮೂಲಕ ಆಧ್ಯಾತ್ಮಿಕ ಪ್ರಗತಿಯನ್ನು ಹೊಂದಬೇಕೆಂದಿದ್ದರೆ ಅದಕ್ಕೆ ಯಾವುದೇ ಅಭ್ಯಂತರವಿಲ್ಲ; ಆದರೆ ಇಲ್ಲಿ ಒಂದು ಉತ್ತಮ ಸಾಮಾಜಿಕ ವ್ಯವಸ್ಥೆಯ ಪ್ರಶ್ನೆ ಉದ್ಭವಿಸುತ್ತದೆ. ಅವರಿಗೆ ತಮ್ಮ ಪಂಥವೇ ಶ್ರೇಷ್ಠವಾದುದು ಮತ್ತು ನೀವು ಅದನ್ನು ಸ್ವೀಕರಿಸಲೇಬೇಕು ಎಂದು ಅನಿಸುತ್ತದೆ. ಇಲ್ಲವಾದರೆ ಯಾವುದಾದರೂ ಆಮಿಷ ತೋರಿಸಿ ಅಥವಾ ಹೆದರಿಸಿ ನಿಮ್ಮನ್ನು ಬಲೆಗೆ ಬೀಳಿಸುತ್ತಾರೆ. ಆದ್ದರಿಂದ ಇಲ್ಲಿ ಉತ್ತಮ ಸಾಮಾಜಿಕ ವ್ಯವಸ್ಥೆಯ ಗುಣಧರ್ಮಗಳು ಅನ್ವಯವಾಗುವುದಿಲ್ಲ. ಇಸ್ಲಾಂ ಬಗ್ಗೆ ಅಧ್ಯಯನ ಮಾಡುವುದು ಸರಿಯೇ ಇದೆ. ನಿಮಗೆ ಭೌತಿಕ ಪ್ರಗತಿ ಬೇಕೋ ಅಥವಾ ಬೇಡವೋ ಎಂಬುದು ನಿಮ್ಮ ಇಚ್ಛೆ. ನೀವು ಆಧ್ಯಾತ್ಮಿಕ ಸಾಧನೆ ಮಾಡಬೇಕೋ ಅಥವಾ ಬೇಡವೋ ಎಂಬುದು ಕೂಡ ಸರಿಯೇ ಇದೆ; ಆದರೆ ಈ ಜಗತ್ತಿನಲ್ಲಿ ಕೇವಲ ಇಸ್ಲಾಂ ಮಾತ್ರ ಉಳಿಯುತ್ತದೆ ಮತ್ತು ಇಸ್ಲಾಂ ಹೊರತುಪಡಿಸಿ ಇಲ್ಲಿ ಇತರ ಯಾರಿಗೂ ಬದುಕಲು ಅನುಮತಿ ನೀಡುವುದಿಲ್ಲ, ಆದ್ದರಿಂದ ಪ್ರತಿಯೊಬ್ಬರು ಮತಾಂತರ ಗೊಳ್ಳಲೇಬೇಕು ಮತ್ತು ಹಾಗೆ ಮಾಡದಿದ್ದರೆ ಅವರ ಧರ್ಮಗ್ರಂಥ ದಲ್ಲಿ ಬರೆದಿರುವಂತೆಯೇ ಅವರು ನಿಮ್ಮೊಂದಿಗೆ ವರ್ತಿಸುತ್ತಾರೆ ಎಂಬ ವಿಚಾರಧಾರೆ ಸರಿಯಲ್ಲ. ಇದು ಉತ್ತಮ ಸಾಮಾಜಿಕ ವ್ಯವಸ್ಥೆಯ ಗುಣಧರ್ಮಗಳನ್ನು ತೋರಿಸುವುದಿಲ್ಲ. ಆದುದರಿಂದಲೇ ಇಂದಿಗೂ ನಾವು ಒಂದು ಉತ್ತಮ ಸಾಮಾಜಿಕ ವ್ಯವಸ್ಥೆ, ಸರ್ವಸಮಾವೇಶಕತೆ, ಎಲ್ಲರಿಗೂ ಸಮಾನ ಗೌರವ ಅಥವಾ ಎಲ್ಲರಿಗೂ ಸಮಾನ ಲಾಭಕ್ಕಾಗಿ ಧರ್ಮನಿರಪೇಕ್ಷತೆಯ ಸಂಕಲ್ಪನೆಯನ್ನು ಸ್ವೀಕರಿಸಿದ್ದೇವೆ. ಹಿಂದೂ ಧರ್ಮವೇ ಧರ್ಮನಿರಪೇಕ್ಷವಾದುದು ಮತ್ತು ಅದು ಎಲ್ಲರ ಪ್ರಗತಿಗಾಗಿ ಕೆಲಸ ಮಾಡಬಲ್ಲದು. ಈ ಆಧಾರದ ಮೇಲೆಯೇ ನಾವು ಹಿಂದೂ ರಾಷ್ಟ್ರದ ಕಲ್ಪನೆಯನ್ನು ಮಾಡುತ್ತಿದ್ದೇವೆ. – ಸದ್ಗುರು ಡಾ. ಚಾರುದತ್ತ ಪಿಂಗಳೆ |


‘ಸ್ಮಾರ್ಟ್’ ಮತ್ತು ಅಭೇದ್ಯ ಭಾರತ ?
ಅಮೆರಿಕದ ದಾಳಿಯಲ್ಲಿ ಮೂರು ಭಾರತೀಯರ ಸಾವು !
ಬಲಿಷ್ಠ ಚೀನಾದಿಂದ ‘ಅಪರೂಪದ ಖನಿಜಗಳ’ ಸಂಸ್ಕರಣೆಯ ಮೇಲಿನ ಕಠಿಣ ನಿರ್ಬಂಧ ಮುಂದುವರಿಕೆ!
‘ಅಮೆಜಾನ್ ಇಂಡಿಯಾ’ದ ಜಾಹೀರಾತಿನಲ್ಲಿ ಶ್ರೇಷ್ಠ ವಿಜ್ಞಾನಿ ಆರ್ಯಭಟರಿಗೆ ಅಪಮಾನ!
ಚೀನಾ ಸಹಾಯದಿಂದ ಮುನ್ನಡೆಯುತ್ತಿರುವ ಪಾಕಿಸ್ತಾನದ ಬಾಹ್ಯಾಕಾಶ ಯೋಜನೆ!
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಮಾನವ ಹಕ್ಕುಗಳ ಉಲ್ಲಂಘನೆ ! – ಭಾರತ