ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ
ಮತಾಂತರಕ್ಕಾಗಿ ಒತ್ತಡ ಹೇರಿದ!

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಪಿ.ಜಿ.ಐ. ವಲಯದಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಇರ್ಷಾದ್ ಅಲಿ ಹೆಸರಿನ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಅಪಹರಿಸಿದ್ದಾನೆ. ಆಕೆಯನ್ನು ಸಿರಿಯಾಕ್ಕೆ ಕರೆದೊಯ್ಯುವುದಾಗಿ ಆತ ಬೆದರಿಕೆ ಹಾಕಿದ್ದಲ್ಲದೆ, ಆಕೆಯನ್ನು ಮತಾಂತರಗೊಳಿಸಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ‘ಎಸ್.ಜಿ.ಪಿ.ಜಿ.ಐ.’ ವಸತಿ ಸಂಕೀರ್ಣದಲ್ಲಿ ವಾಸಿಸುವ ಕುಟುಂಬವೊಂದು ತಮ್ಮ 21 ವರ್ಷದ ಮಗಳು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದೆ.
1. ಸಂತ್ರಸ್ತ ಹಿಂದೂ ಯುವತಿ ಮೇ 21 ರಂದು ಕೆಲಸದ ನಿಮಿತ್ತ ತೇಲಿಬಾಗ್ ಗೆ ಹೋಗಿದ್ದಳು; ಆದರೆ ಮನೆಗೆ ಮರಳಿ ಬರಲಿಲ್ಲ.
2. ಯುವತಿಯ ಕುಟುಂಬಸ್ಥರು, ಇರ್ಷಾದ್ ಅಲಿ ಎಂಬ ಮುಸ್ಲಿಂ ಯುವಕ ತಮ್ಮ ಮಗಳನ್ನು ಪುಸಲಾಯಿಸಿ ಅಪಹರಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಇರ್ಷಾದ್ ಆ ಕುಟುಂಬಕ್ಕೆ ಮೊದಲಿನಿಂದಲೂ ಪರಿಚಿತನಾಗಿದ್ದ ಮತ್ತು ಅವರ ಮನೆಗೆ ಬಂದು ಹೋಗುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
3. ಇರ್ಷಾದ್ ಆಕೆಯ ನಂಬಿಕೆಯನ್ನು ಗಳಿಸಿ, ನಂತರ ಅವಳನ್ನು ತನ್ನ ಬಲೆಯಲ್ಲಿ ಸಿಲುಕಿಸಿ ಕಿರುಕುಳ ನೀಡಲು ಪ್ರಾರಂಭಿಸಿದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
4. ಆರೋಪಿಯು ಸಂತ್ರಸ್ತ ಯುವತಿಯ ಅಶ್ಲೀಲ ಚಿತ್ರಗಳನ್ನು ತೆಗೆದಿದ್ದನು ಮತ್ತು ಅವಳು ವಿರೋಧಿಸಿದರೆ ಅವಳನ್ನು ಸಿರಿಯಾಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದನು.
5. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಯುವತಿಯ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಜುಬೇರ್ ತನ್ನ ಗುರುತು ಮರೆಮಾಚಿ ಹಿಂದೂ ಯುವತಿಯನ್ನು ಬಲೆಯಲ್ಲಿ ಸಿಲುಕಿಸಿದ ಪ್ರಕರಣ: ಕಲ್ಮಾ ಮತ್ತು ನಮಾಜ್ ಮಾಡಲು ಒತ್ತಡ!
ಲಕ್ಷ್ಮಣಪುರಿಯ ಪಾರಾ ವಲಯದಲ್ಲಿ ‘ಲವ್ ಜಿಹಾದ್’ನ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜುಬೇರ್ ಅನ್ಸಾರಿ ಎಂಬ ಮುಸ್ಲಿಂ ಯುವಕ ತನ್ನ ನಿಜವಾದ ಗುರುತನ್ನು ಮರೆಮಾಚಿ ಹಿಂದೂ ಯುವತಿಯೊಬ್ಬಳನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದ್ದಾನೆ. ತದನಂತರ ಮದುವೆಯ ಆಮಿಷ ತೋರಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಸಂತ್ರಸ್ತ ಯುವತಿಯ ಅಶ್ಲೀಲ ವಿಡಿಯೋ ಮಾಡಿ ಆಕೆಗೆ ಬೆದರಿಕೆ ಹಾಕಲಾರಂಭಿಸಿದ್ದಾನೆ. ಅಲ್ಲದೆ ಆಕೆಯಿಂದ ಆರ್ಥಿಕವಾಗಿಯೂ ಸುಲಿಗೆ ಮಾಡಿದ್ದಾನೆ. ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಆಕೆಯ ಮೇಲೆ ಒತ್ತಡ ಹೇರಲಾಗಿತ್ತು. ಕಲ್ಮಾ ಪಠಿಸಲು ಮತ್ತು ನಮಾಜ್ ಮಾಡಲು ಆಕೆಯನ್ನು ಬಲವಂತಪಡಿಸಲಾಗಿತ್ತು. ಸಂತ್ರಸ್ತ ಯುವತಿಯು ಜುಬೇರ್ ಅನ್ಸಾರಿ ಮತ್ತು ಆತನ ಕುಟುಂಬದ ಕೆಲವು ಸದಸ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !