ದಾಳಿಗಳಿಂದಾಗಿ ಅಮೆರಿಕ-ಇರಾನ್ ನಡುವಿನ ಕದನ ವಿರಾಮ ಒಪ್ಪಂದ ಮುರಿಯುವ ಭೀತಿ

ನ್ಯೂಯಾರ್ಕ್ / ಜೆರುಸಲೆಮ್ – ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಒಪ್ಪಂದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ದಕ್ಷಿಣ ಲೆಬನಾನ್ ಭಾಗದಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ಮಾಡುವಂತೆ ಇಸ್ರೇಲ್ ತನ್ನ ಸೇನೆಗೆ ಆದೇಶಿಸಿದೆ. ಇದರಿಂದಾಗಿ ‘ಕದನ ವಿರಾಮ ಒಪ್ಪಂದ ಅಪಾಯಕ್ಕೆ ಸಿಲುಕಬಹುದು’ ಎಂದು ಇರಾನ್‌ನ ಸರಕಾರಿ ವಾಹಿನಿ ವರದಿ ಮಾಡಿದೆ. ಒಪ್ಪಂದದ ಪ್ರಮುಖ ಷರತ್ತುಗಳಲ್ಲಿ ಒಂದೇನೆಂದರೆ, ಇಸ್ರೇಲ್ ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕು. ಈ ಕಾರಣದಿಂದಾಗಿ ಟ್ರಂಪ್ ಅವರು ನೆತನ್ಯಾಹು ಅವರ ಮೇಲೆ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ನಡುವೆ ತೀವ್ರ ವಾಕ್ಸಮರ ನಡೆದಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ‘ಆಕ್ಸಿಯೋಸ್’ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಈ ವರದಿಯ ಪ್ರಕಾರ, ಟ್ರಂಪ್ ಅವರು ನೆತನ್ಯಾಹು ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಾ, ‘ನೀವು ಏನು ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. ಇಸ್ರೇಲ್‌ನ ಭ್ರಷ್ಟಾಚಾರ ಪ್ರಕರಣದಲ್ಲಿ ನಾವು ಬೆಂಬಲ ನೀಡಿದ್ದರಿಂದಲೇ ನೀವು ಜೈಲಿಗೆ ಹೋಗುವುದರಿಂದ ಪಾರಾಗಿದ್ದೀರಿ ಎಂಬುದನ್ನು ಟ್ರಂಪ್ ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.
ವರದಿಯ ಪ್ರಕಾರ ಟ್ರಂಪ್ ಅವರು, “ನೀವು ಹುಚ್ಚರಾಗಿದ್ದೀರಿ. ನಾನಿರದಿದ್ದರೆ ನೀವು ಜೈಲಿನಲ್ಲಿರುತ್ತಿದ್ದಿರಿ. ನಾನು ನಿಮ್ಮನ್ನು ರಕ್ಷಿಸುತ್ತಾ ಬಂದಿದ್ದೇನೆ. ಪ್ರತಿಯೊಬ್ಬರೂ ನಿಮ್ಮನ್ನು ದ್ವೇಷಿಸುತ್ತಾರೆ. ನಿಮ್ಮ ಇಂತಹ ನಡೆಗಳಿಂದಾಗಿ ಈಗ ಪ್ರತಿಯೊಬ್ಬರೂ ಇಸ್ರೇಲ್ ಅನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ,” ಎಂದು ಹೇಳಿದ್ದಾರೆ.
ನೆತನ್ಯಾಹು ‘ ಸೇರಿಗೆ ಸವ್ವಾ ಸೇರು’ ಎಂಬ ನಿಲುವಿಗೆ ಬದ್ಧ!
ಟ್ರಂಪ್ ಅವರ ಆಕ್ಷೇಪಣೆಗಳಿಗೆ ನೆತನ್ಯಾಹು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ಒಂದು ವೇಳೆ ಹಿಜ್ಬುಲ್ಲಾ ಇಸ್ರೇಲ್ ಮೇಲಿನ ದಾಳಿಯನ್ನು ನಿಲ್ಲಿಸದಿದ್ದರೆ, ಇಸ್ರೇಲ್ ಕೂಡ ಬೈರುತ್‌ನಲ್ಲಿರುವ ಗುರಿಗಳ ಮೇಲೆ ದಾಳಿ ಮಾಡುತ್ತದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ,” ಎಂದು ಅವರು ಹೇಳಿದ್ದಾರೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’