‘ಇ-ಕೆವೈಸಿ’ ಮಾಡಿದ ನಂತರ 81 ಲಕ್ಷ ನಕಲಿ ಫಲಾನುಭವಿಗಳ ಹೆಸರುಗಳು ರದ್ದು !
ಸಂಬಂಧಪಟ್ಟವರಿಂದ ಹಣ ವಸೂಲಿ ಮಾಡಲು ಆದೇಶ !
(‘ಇ-ಕೆವೈಸಿ’ ಎಂದರೆ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಗುರುತು ಪತ್ತೆಹಚ್ಚುವುದು)

ಮುಂಬಯಿ, ಜೂನ್ ೨ (ಸುದ್ದಿ) – ‘ಇ-ಕೆವೈಸಿ’ ನಂತರ ‘ಮುಖ್ಯಮಂತ್ರಿ ಮಾಝಿ ಲಾಡಕಿ ಬಹೀಣ್ ಯೋಜನೆ’ಯನ್ನು 5 ಲಕ್ಷ ಸರಕಾರಿ ನೌಕರರು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಸರಕಾರಿ ನೌಕರರ ಹೆಸರುಗಳನ್ನು ಯೋಜನೆಯಿಂದ ಕೈಬಿಡಲಾಗಿದೆ. ಈ ನೌಕರರು ಸರಕಾರಕ್ಕೆ ವಂಚನೆ ಮಾಡಿ ಪಡೆದ ಹಣವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ಆಯಾ ಸರಕಾರಿ ಇಲಾಖೆಗಳಿಗೆ ವಹಿಸಲಾಗಿದೆ. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಈ ನೌಕರರ ಹೆಸರುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿದೆ.
ಸರಕಾರಿ ನೌಕರರು ಸೇರಿದಂತೆ ಇತರ 81 ಲಕ್ಷ ಜನರು ಈ ಯೋಜನೆಯ ದುರುಪಯೋಗ ಪಡಿಸಿಕೊಂಡಿದ್ದಾರೆ. ಜುಲೈ 2024 ರಲ್ಲಿ ‘ಮುಖ್ಯಮಂತ್ರಿ ಮಾಝಿ ಲಾಡಕಿ ಬಹೀಣ್’ ಯೋಜನೆ ಆರಂಭವಾದಾಗಿನಿಂದ ಗರಿಷ್ಠ 2 ಕೋಟಿ 47 ಲಕ್ಷ ಜನರು ಯೋಜನೆಯ ಲಾಭ ಪಡೆದಿದ್ದರು. ಈ ಯೋಜನೆಯ ದುರುಪಯೋಗವನ್ನು ಕೆಲವು ಸರಕಾರಿ ನೌಕರರು ಪಡೆದುಕೊಳ್ಳುತ್ತಿರುವುದು, ಹಾಗೂ ಇತರ ಕೆಲವು ಅಪಾತ್ರರು ಯೋಜನೆಯ ಲಾಭ ಪಡೆಯುತ್ತಿರುವುದು ಗಮನಕ್ಕೆ ಬಂದ ನಂತರ ಫಲಾನುಭವಿಗಳ ‘ಇ-ಕೆವೈಸಿ’ ಪರಿಶೀಲನೆ ಆರಂಭಿಸಲಾಯಿತು. ‘ಇ-ಕೆವೈಸಿ’ ಮಾಡಿದ ನಂತರ ಪ್ರಸ್ತುತ ಜೂನ್ 2026 ರವರೆಗೆ 1 ಕೋಟಿ 66 ಲಕ್ಷ ಜನರು ಯೋಜನೆಯ ಲಾಭ ಪಡೆಯುತ್ತಿದ್ದಾರೆ.
🚨 Massive Irregularities Exposed in the ‘Mukhyamantri Majhi Ladki Bahin’ Scheme!
▪️ Over 5 lakh government employees found to have wrongfully availed scheme benefits
▪️ 81 lakh ineligible/duplicate beneficiaries removed after eKYC verification
▪️ 1400 men too availed scheme… pic.twitter.com/0nrBCr8uDA
— Sanatan Prabhat (@SanatanPrabhat) June 2, 2026
ಸುಳ್ಳು ಮಾಹಿತಿ ನೀಡಿ 1 ಸಾವಿರದ 200 ಕೋಟಿ ರೂಪಾಯಿ ವಂಚನೆ !
ಸರಕಾರಿ ಮತ್ತು ಇತರ ವ್ಯಕ್ತಿಗಳು ಸುಳ್ಳು ಮಾಹಿತಿ ನೀಡಿ ಈ ಯೋಜನೆಯಿಂದ ಸರಕಾರದ 1 ಸಾವಿರದ 200 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ವಂಚಿಸಿದ್ದಾರೆ. ಮೇ 30 ರವರೆಗೆ ‘ಇ-ಕೆವೈಸಿ’ ಪರಿಶೀಲನೆಯ ಅವಧಿಯಾಗಿತ್ತು; ಆದರೆ ಇದರ ನಂತರವೂ ಸುಳ್ಳು ಮಾಹಿತಿ ನೀಡಿ ಲಾಭ ಪಡೆಯುವವರ ಪತ್ತೆ ಕಾರ್ಯ ಮುಂದುವರಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!