
ಇಸ್ಲಾಮಾಬಾದ್ (ಪಾಕಿಸ್ತಾನ) – ಪತ್ರಕರ್ತ ಮೆಹ್ದಿ ಹಸನ್ ಅವರು, ‘ಬಹುತೇಕ ದೇಶಗಳಲ್ಲಿ ಸೇನಾ ಮುಖ್ಯಸ್ಥರು ರಕ್ಷಣಾ ಸಚಿವರಿಗೆ ಉತ್ತರದಾಯಿಯಾಗಿರುತ್ತಾರೆ; ಆದರೆ ಪಾಕಿಸ್ತಾನದಲ್ಲಿ ನೀವೇ, ಅಂದರೆ ರಕ್ಷಣಾ ಸಚಿವರೇ ಸೇನಾ ಮುಖ್ಯಸ್ಥರಿಗೆ ಉತ್ತರದಾಯಿಯಾಗಿದ್ದೀರಿ. ಇದು ನಿಜವೇ ?’ ಎಂಬ ಪ್ರಶ್ನೆಯನ್ನು ಕೇಳಿದ ತಕ್ಷಣ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಬ್ಬಿಬ್ಬಾದರು. ಮೊದಲು ಅವರು “ಇಲ್ಲ, ಹಾಗೇನೂ ಇಲ್ಲ” ಎಂದರು; ಆದರೆ ಹಸನ್ ಅವರಿಗೆ ನೇರ ಉತ್ತರ ಬೇಕಾಗಿತ್ತು. ಅವರು ಮತ್ತೊಮ್ಮೆ, “ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ನಿಮಗಿಂತ ಹೆಚ್ಚು ಶಕ್ತಿಶಾಲಿಯೇ ?” ಎಂದು ಕೇಳಿದರು. ಇದಕ್ಕೆ ಖ್ವಾಜಾ ಆಸಿಫ್ ತತ್ತರಿಸಿದರು. ‘ಇಲ್ಲ, ಹಾಗಿಲ್ಲ’; ಎಂದರು. ಹಸನ್ ಅವರಿಗೆ ನೇರ ಉತ್ತರ ಬೇಕಾಗಿತ್ತು. ಅವರು ಮತ್ತೆ ವಿಚಾರಿಸಿದರು, ಸೇನಾದಳ ಮುಖ್ಯಸ್ತ ಆಸಿಮ್ ಮುನೀರ್ ಅವರು ನಿಮಗಿಂತ ಹೆಚ್ಚು ಶಕ್ತಿಶಾಲಿಯೇ?’ ಇದಕ್ಕೆ ಖ್ವಾಜಾ ಆಸಿಫ್ ಪ್ರಶ್ನೆಯನ್ನು ತಪ್ಪಿಸಲು ಯತ್ನಿಸಿದರು ಮತ್ತು ತಾವು ‘ಒಬ್ಬ ರಾಜಕೀಯ ಕಾರ್ಯಕರ್ತ’ ಎಂದು ಕರೆದುಕೊಂಡರು. ಈ ಮೂಲಕ ಪಾಕಿಸ್ತಾನದ ನಿಜವಾದ ಅಧಿಕಾರ ವ್ಯವಸ್ಥೆ ಸಂಪೂರ್ಣವಾಗಿ ಬಹಿರಂಗವಾಯಿತು.
ಮೆಹ್ದಿ ಹಸನ್ ಅವರು ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುತ್ತಿದ್ದರು; ಆದರೆ ಪ್ರತಿ ಬಾರಿ ಖ್ವಾಜಾ ಆಸಿಫ್ ಅವರ ಉತ್ತರ ಸತ್ಯವನ್ನು ಮುಚ್ಚಿಡುವಂತದ್ದೇ ಆಗಿತ್ತು. ಪಾಕಿಸ್ತಾನದ ಸಂವಿಧಾನದ ಪ್ರಕಾರ, ದೇಶದ ಸರ್ವೋಚ್ಚ ಕಮಾಂಡರ್ ರಾಷ್ಟ್ರಪತಿಯಾಗಿದ್ದಾರೆ ಮತ್ತು ಸರಕಾರವು ನಾಗರಿಕ ನಾಯಕತ್ವದ ಅಧೀನದಲ್ಲಿದೆ; ಎಂದು ಹೇಳುತ್ತದೆ. ಆದರೆ ವಾಸ್ತವ ಮಾತ್ರ ಸಂಪೂರ್ಣ ಭಿನ್ನವಾಗಿದೆ. ಜನರಲ್ ಆಸಿಮ್ ಮುನೀರ್ ಅವರು ಪ್ರಸ್ತುತ ಪಾಕಿಸ್ತಾನದಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದಾರೆ, ಆದರೆ ಜಗತ್ತಿನ ಮುಂದೆ ಪಾಕಿಸ್ತಾನವು ಬಹಿರಂಗವಾಗಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ