ಸರಕಾರಿ ಸಹಾಯ ಸಾಮಗ್ರಿಗಳ ಬೃಹತ್ ದಾಸ್ತಾನು ಮನೆಯಲ್ಲಿ ಪತ್ತೆಯಾದ ನಂತರ ಕ್ರಮ
ಸ್ಥಳೀಯರಿಂದ ‘ಚೋರ್-ಚೋರ್’ ಎಂದು ಘೋಷಣೆ

ವರ್ಧಮಾನ (ಬಂಗಾಳ) – ಪೊಲೀಸರು ಪೂರ್ವ ವರ್ಧಮಾನ ಜಿಲ್ಲೆಯ ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕರಾದ ತಪನ ಚಟರ್ಜಿಯವರ ಮನೆಯ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ಸರಕಾರಿ ಸಹಾಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಪಾಸಣೆಯ ವೇಳೆ ಮನೆಯಿಂದ ಬೃಹತ್ ಪ್ರಮಾಣದಲ್ಲಿ ಪ್ಲಾಸ್ಟಿಕ್ ಶೀಟುಗಳು(ಟಾರ್ಪಾಲು), ಕಂಬಳಿಗಳು, ಫುಟ್ ಬಾಲ್, ವಾಲಿಬಾಲ್ ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಇವುಗಳನ್ನು ಸಾಮಾನ್ಯವಾಗಿ ವಿಪತ್ತು ಪೀಡಿತ ಜನರು, ಯುವಕರ ಕ್ಲಬ್ ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ವಿತರಿಸಲು ಇಡಲಾಗಿರುತ್ತದೆ.
🚨 Relief Loot Exposed? TMC Leader Arrested Amid Public Outrage! 🚨
Former Trinamool Congress MLA Tapan Chatterjee has been arrested after a large stockpile of government relief materials was recovered from his residence.
📢 Angry locals raised slogans of "Chor! Chor!"
The… pic.twitter.com/wYZYRIQbw7
— Sanatan Prabhat (@SanatanPrabhat) May 31, 2026
1. ಪೊಲೀಸರು ತಪನ ಚಟರ್ಜಿಯವರನ್ನು ಬಂಧಿಸಿ ಕರೆದೊಯ್ಯುತ್ತಿದ್ದಾಗ, ಸ್ಥಳೀಯರು ಮಾಜಿ ಶಾಸಕರ ವಿರುದ್ಧ ‘ಚೋರ್-ಚೋರ್’ ಎಂದು ಘೋಷಣೆಗಳನ್ನು ಕೂಗಿದರು. ಮನೆಯ ಮೇಲಿನ ದಾಳಿಯ ನಂತರ ಈಗ ಪೊಲೀಸರು ಚಟರ್ಜಿಯವರಿಗೆ ಸಂಬಂಧಿಸಿದ ಹಲವಾರು ಗೋದಾಮುಗಳ ಮೇಲೂ ತಪಾಸಣೆ ನಡೆಸುತ್ತಿದ್ದಾರೆ.
2. ಇದಕ್ಕೂ ಮುನ್ನ ಪೊಲೀಸರು ಉತ್ತರ 24 ಪರಗಣ ಜಿಲ್ಲೆಯ ಬದುರಿಯಾ ನಗರಸಭೆಯ ಅಧ್ಯಕ್ಷರಾದ ದೀಪಾಂಕರ ಭಟ್ಟಾಚಾರ್ಯ ರವರನ್ನು ಬಂಧಿಸಿದ್ದರು, ಆಗ ಅವರ ಸ್ಥಳಗಳಿಂದ ಬೃಹತ್ ಪ್ರಮಾಣದಲ್ಲಿ ನಗದು ಹಣ ಮತ್ತು ಸಾವಿರಾರು ಸರಕಾರಿ ಪ್ಲಾಸ್ಟಿಕ್ ಶೀಟು(ಟಾರ್ಪಾಲು) ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದೇ ರೀತಿ ಪೂರ್ವ ಮೇದಿನಿಪುರದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕ ತರುಣ ಕುಮಾರ ಮೈತಿಯವರಿಗೆ ಸಂಬಂಧಿಸಿದ ಪರಿಸರದಿಂದಲೂ ಸಹಾಯ ಸಾಮಗ್ರಿಯಲ್ಲಿದ್ದ ಪ್ಲಾಸ್ಟಿಕ್ ಶೀಟುಗಳು(ಟಾರ್ಪಾಲು)ಗಳನ್ನು ಜಪ್ತು ಮಾಡಲಾಗಿತ್ತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”