ಗಾಜಿಯಾಬಾದ (ಉತ್ತರ ಪ್ರದೇಶ) ಇಲ್ಲಿ ನಡೆದ ಘಟನೆ

ಗಾಜಿಯಾಬಾದ (ಉತ್ತರ ಪ್ರದೇಶ) – ಇಲ್ಲಿನ ಖೋಡಾ ಪ್ರದೇಶದಲ್ಲಿ ಮೇ 28 ರಂದು ಬಕ್ರೀದ್ ದಿನದಂದು ಸಾಯಂಕಾಲ ಸೂರ್ಯ ಚೌಹಾಣ ಎಂಬ ಯುವಕನನ್ನು ಅವನದೇ ಕೆಲವು ಪರಿಚಯದ ಮುಸ್ಲಿಂ ಸ್ನೇಹಿತರು ಚಾಕುವಿನಿಂದ ಇರಿದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಹಳೆಯ ವೈಷಮ್ಯದ ಸೇಡು ತೀರಿಸಿಕೊಳ್ಳಲು ಆರೋಪಿಗಳು ಸೂರ್ಯನಿಗೆ ದೂರವಾಣಿ ಕರೆ ಮಾಡಿ ಚೌಧರಿ ಸ್ಕೂಲ್ ಹತ್ತಿರದ ಗಲ್ಲಿಗೆ ಕರೆಸಿಕೊಂಡಿದ್ದರು. ಅಲ್ಲಿ ಅಸದ, ನವಾಬ್, ಫರಹಾನ, ಆತಿಫ್ ಮತ್ತು ಸಾರಿಕ್ ಸೇರಿದಂತೆ ಇತರ ಯುವಕರು ಸೂರ್ಯನನ್ನು ಹಿಡಿದು ಅವನ ಮೇಲೆ ದೊಡ್ಡ ಚಾಕುವಿನಿಂದ ಅನೇಕ ಬಾರಿ ಇರಿದರು. ಅವನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದ್ದಾಗ ಮೃತಪಟ್ಟನು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಾಕುವಿನಿಂದ ಇರಿಯುವ ಮುನ್ನ ಆರೋಪಿ ಮುಸ್ಲಿಂ ಹುಡುಗರು ಸೂರ್ಯನನ್ನು ಹತ್ತಿರ ಕರೆದಿದ್ದರು. ತದನಂತರ ಆರೋಪಿಗಳು ಸೂರ್ಯನಿಗೆ, ‘ನೀನು ಎಂದಾದರೂ ಬಕ್ರಾ ಹಲಾಲ್ (ಕುರಿಯ ವಧೆಯನ್ನು) ಮಾಡುವುದನ್ನು ನೋಡಿದ್ದೀಯಾ?’ ಎಂದು ಕೇಳಿದರು. ಹೀಗೆ ಕೇಳಿದ ತಕ್ಷಣವೇ ಆರೋಪಿಗಳು ಅವನ ಮೇಲೆ ಚಾಕುವಿನಿಂದ ದಾಳಿ ಮಾಡಿ ರಕ್ತದ ಮಡುವಿನಲ್ಲಿ ಬೀಳಿಸಿದರು.

ಸೂರ್ಯನು ದಾಳಿಯ ಸಮಯದಲ್ಲಿ ಕಿರುಚಾಡಿದಾಗ, ಸೂರ್ಯನ ಸಹೋದರ ಯಶ ಚೌಹಾಣ್ ಮತ್ತು ಅವನ ತಾಯಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಕುಟುಂಬದವರು ಬರುವುದನ್ನು ನೋಡಿ ಎಲ್ಲಾ ಮುಸ್ಲಿಂ ಹುಡುಗರು ಸೂರ್ಯನನ್ನು ಗಂಭೀರ ಸ್ಥಿತಿಯಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾದರು. ಕುಟುಂಬದವರು ತರಾತುರಿಯಲ್ಲಿ ಗಾಯಾಳು ಯುವಕನನ್ನು ನೋಯ್ಡಾದ ಸೆಕ್ಟರ್-೬೨ ರಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ದರು; ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಚಿಕಿತ್ಸೆಯ ಅವಧಿಯಲ್ಲಿ ಸೂರ್ಯ ಮೃತಪಟ್ಟನು.
ಖೋಡಾ ಪ್ರದೇಶದಲ್ಲಿ ಭಾರಿ ಉದ್ವಿಗ್ನತೆ, ಬುಲ್ಡೋಜರ್ ಕ್ರಮಕ್ಕೆ ಆಗ್ರಹ

ಸೂರ್ಯನ ಸಾವಿನ ಸುದ್ದಿ ಹರಡುತ್ತಿದ್ದಂತೆ ಇಡೀ ಖೋಡಾ ಪ್ರದೇಶದಲ್ಲಿ ಭಾರಿ ಆಕ್ರೋಶ ಮತ್ತು ಉದ್ವಿಗ್ನತೆ ನಿರ್ಮಾಣವಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಖೋಡಾ ಪುರಸಭೆಯ ಮಾಜಿ ಅಧ್ಯಕ್ಷೆ ರೀನಾ ಭಾಟಿ ಮತ್ತು ವಿವಿಧ ಹಿಂದೂ ಸಂಘಟನೆಗಳ ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದರು. ಈ ಕೊಲೆಯ ಕುರಿತು ಹಿಂದೂ ಸಂಘಟನೆಗಳ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಎಲ್ಲಾ ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಬಂಧಿಸುವುದರ ಜೊತೆಗೆ ಅವರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಬೇಕು’, ಎಂದು ಅವರು ಆಗ್ರಹಿಸಿದ್ದಾರೆ.
ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜನೆ
ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ ಶ್ರೀವಾಸ್ತವ ಅವರು ಮಾತನಾಡಿ, ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ನಿರಂತರ ಕಣ್ಗಾವಲು ಇಡಲಾಗಿದೆ, ಎಂದು ಹೇಳಿದರು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !