
ಪುಣೆ – ‘ಆಪರೇಷನ್ ಸಿಂದೂರ್’ ಇನ್ನೂ ಮುಗಿದಿಲ್ಲ. ಸಧ್ಯಕ್ಕೆ ಕೇವಲ ಕದನ ವಿರಾಮದಂತಹ ಪರಿಸ್ಥಿತಿ ಇದೆ. ಅಗತ್ಯ ಬಿದ್ದರೆ ಭಾರತೀಯ ಸೈನ್ಯದ ಮೂರೂ ವಿಭಾಗಗಳು ‘ಆಪರೇಷನ್ ಸಿಂದೂರ್ 2’ಗಾಗಿ ಸಂಪೂರ್ಣವಾಗಿ ಸನ್ನದ್ಧವಾಗಿವೆ ಎಂದು ಸೈನ್ಯದಳ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್.ಡಿ.ಎ. – ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ) 150 ನೇ ‘ಪಾಸಿಂಗ್ ಔಟ್ ಪರೇಡ್’ನಲ್ಲಿ ರಿವ್ಯೂಯಿಂಗ್ ಆಫೀಸರ್ (ಪುನರ್ವಿಮರ್ಶನಾ ಅಧಿಕಾರಿ) ಆಗಿ ಜನರಲ್ ದ್ವಿವೇದಿ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ‘ಸುಖೋಯ್ 30 ಎಂ.ಕೆ.ಐ.’ ಯುದ್ಧ ವಿಮಾನಗಳು, ಮತ್ತು ಚೇತಕ್ ಹಾಗೂ ಸಾರಂಗ್ ಹೆಲಿಕಾಪ್ಟರ್ ತಂಡಗಳು ರೋಮಾಂಚನಕಾರಿ ಸಾಹಸ ಪ್ರದರ್ಶನಗಳನ್ನು ನೀಡಿದವು. ಪಥಸಂಚಲನದಲ್ಲಿ 12 ಮಿತ್ರ ರಾಷ್ಟ್ರಗಳ 24 ವಿದೇಶಿ ಕೆಡೆಟ್ ಸೈನಿಕರು ಸಹ ಪಾಲ್ಗೊಂಡಿದ್ದರು.
ಭವಿಷ್ಯದ ಯುದ್ಧಗಳ ಸ್ವರೂಪ ಮತ್ತು ತಂತ್ರಜ್ಞಾನ ವಿಷಯದ ಕುರಿತು ಮಾತನಾಡಿದ ಸೈನ್ಯದಳ ಮುಖ್ಯಸ್ಥರು, ಭವಿಷ್ಯದ ಯುದ್ಧಗಳು ಕೇವಲ ಭೂಮಿ, ವಾಯು ಮತ್ತು ಸಮುದ್ರಕ್ಕೆ ಮಾತ್ರ ಸೀಮಿತವಾಗಿರದೆ, ಅವು ಸೈಬರ್, ಬಾಹ್ಯಾಕಾಶ ಮತ್ತು ಆಧುನಿಕ ತಂತ್ರಜ್ಞಾನದ ಕ್ಷೇತ್ರಗಳಲ್ಲೂ ನಡೆಯಲಿವೆ ಎಂದು ಹೇಳಿದರು.
ಸೈನ್ಯದಳ ಮುಖ್ಯಸ್ಥರು ತಿಳಿಸಿದ ಪ್ರಮುಖ ಅಂಶಗಳು
1. ಆಧುನಿಕ ಯುದ್ಧವು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಶತ್ರುಗಳ ಪ್ರತಿಯೊಂದು ಚಲನವಲನದ ಮೇಲೆ 24 ಗಂಟೆಗಳ ಕಾಲ ನಿಗಾ ಇಡಲಾಗುತ್ತಿದೆ.
2. ಭಾರತೀಯ ಸೇನೆಯು ‘ಡಿಕೇಡ್ ಆಫ್ ಟ್ರಾನ್ಸ್ಫಾರ್ಮೇಶನ್’ (2023 ರಿಂದ 2032 ರ ದಶಕದಲ್ಲಿ ಭಾರತೀಯ ಸೈನ್ಯವನ್ನು ಹೆಚ್ಚು ಆಧುನಿಕ, ಚುರುಕು ಮತ್ತು ತಂತ್ರಜ್ಞಾನ ಸಜ್ಜಿತವಾಗಿ ಮಾಡುವ ಕಾರ್ಯ ನಡೆಯುತ್ತಿದೆ.) ಈ ಉಪಕ್ರಮದ ಅಡಿಯಲ್ಲಿ ಭವಿಷ್ಯದ ಸವಾಲುಗಳಿಗಾಗಿ ಆಧುನಿಕ ಸೈನಿಕ ಸಂರಚನೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ.
3. ಮಾಹಿತಿ ಯುದ್ಧವನ್ನು ಗೆಲ್ಲಲು ದೇಶದ ನಾಗರಿಕರು ಮತ್ತು ಸಂಸ್ಥೆಗಳ ನಡುವಿನ ಪರಸ್ಪರ ನಂಬಿಕೆ ಅತ್ಯಂತ ಅವಶ್ಯಕವಾಗಿದೆ.
4. ‘ಆಪರೇಷನ್ ಸಿಂದೂರ್’ ಒಂದು ಮಾನದಂಡವನ್ನು ನಿಗದಿಪಡಿಸಿದ್ದು, ಭಾರತವು ಯಾವುದೇ ಪ್ರಚೋದನೆಗೆ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂಬುದನ್ನು ಅದು ಜಗತ್ತಿಗೆ ತೋರಿಸಿಕೊಟ್ಟಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !