ಸ್ಥಳೀಯ ಹಿಂದೂಗಳಿಂದ ಆಕ್ರೋಶ ವ್ಯಕ್ತ

ಭಾಗ್ಯನಗರ (ತೆಲಂಗಾಣ) – ಬಕ್ರೀದ್ ನಿಮಿತ್ತ ಭಾಗ್ಯನಗರದ ಮುಶೀರಾಬಾದ್ ನಲ್ಲಿ ಪ್ರಾಣಿಹತ್ಯೆ ಮಾಡಿದ್ದರಿಂದ ರಸ್ತೆಗಳಲ್ಲಿ ರಕ್ತದ ಕಾಲುವೆಗಳು ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಈ ರಕ್ತವು ಬಾಂಗ್ಲಾದೇಶ ಮಾರ್ಕೆಟ್ ನಿಂದ ಹಿಡಿದು ಸುತ್ತಮುತ್ತಲಿನ ಹಿಂದೂ ಕಾಲೋನಿಗಳ ರಸ್ತೆಗಳವರೆಗೂ ಹರಡಿತ್ತು. ಈ ಭೀಕರ ದೃಶ್ಯವನ್ನು ನೋಡಿ ಸ್ಥಳೀಯ ಹಿಂದೂಗಳಿಂದ ಆಕ್ರೋಶ ವ್ಯಕ್ತವಾಗಿದೆ. ಭಾಗ್ಯನಗರದಲ್ಲಿನ ಭಾಜಪದ ಲೀಗಲ್ ಸೆಲ್ ನ (ಕಾನೂನು ವಿಭಾಗದ) ವಕೀಲರಾದ ನೀಲಂ ಭಾರ್ಗವ ರಾಮ್ ಅವರು ಎಕ್ಸ್ ನಲ್ಲಿ ಈ ವಿಡಿಯೋ ಪ್ರಸಾರ ಮಾಡುವ ಮೂಲಕ ಈ ಘಟನೆಯನ್ನು ಬಹಿರಂಗಪಡಿಸಿದ್ದಾರೆ.
🚨 Bhagyanagar: Streets in some Hindu localities reportedly ran red with animal blood during Bakrid, triggering anger among local Hindus.
On other occasions, if a Hindu procession passes a mosque during a Hindu festival and a pinch of gulal accidentally lands near its premises,… pic.twitter.com/30ELNDGhez
— Sanatan Prabhat (@SanatanPrabhat) May 29, 2026
ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಘಟನೆಯಿಂದ ಪ್ರಾಣಿಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಪೇಟಾ ಇಂಡಿಯಾದಂತಹ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಕೇವಲ ಹಿಂದೂ ಹಬ್ಬಗಳ ಸಮಯದಲ್ಲಿ ಉಪದೇಶ ಮಾಡುವ ಈ ಸಂಘಟನೆಗಳು ಈಗ ಈ ಕ್ರೂರತೆ ಮತ್ತು ಅಸ್ವಚ್ಛತೆಯ ಬಗ್ಗೆ ಏಕೆ ಮೌನವಾಗಿವೆ?’, ಎಂದು ಜನರು ಪ್ರಶ್ನಿಸಿದ್ದಾರೆ. ಇದರೊಂದಿಗೆ ಈ ಕೃತ್ಯದಿಂದ ಸ್ಥಳೀಯ ಜನರ ಧಾರ್ಮಿಕ ಭಾವನೆಗಳು ಮತ್ತು ಸಾರ್ವಜನಿಕ ಸ್ವಚ್ಛತೆಯ ಉಲ್ಲಂಘನೆಯಾಗಿದೆ. ಧಾರ್ಮಿಕ ಸಂಪ್ರದಾಯಗಳ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮಾಜಕ್ಕೆ ಈ ರೀತಿ ತೊಂದರೆ ನೀಡಲು ಮುಕ್ತ ಅವಕಾಶ ನೀಡಲಾಗುವುದಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಪೊಲೀಸ್ ಆಡಳಿತದ ಮೌನ!
ಆಶ್ಚರ್ಯದ ಸಂಗತಿಯೆಂದರೆ, ಈ ಗಂಭೀರ ಪ್ರಕರಣದ ಬಗ್ಗೆ ಪೊಲೀಸ್ ಮತ್ತು ಸ್ಥಳೀಯ ಆಡಳಿತ ಮೌನ ವಹಿಸಿದ್ದು, ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath