ಎಮ್ಮೆಯನ್ನು ಈಗ ಪ್ರಾಣಿ ಸಂಗ್ರಹಾಲಯದಲ್ಲಿ ಇಡಲಾಗುವುದು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಎಮ್ಮೆಯೊಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನಿಟ್ಟು, ಬಕ್ರೀದ್ ಹಬ್ಬದ ದಿನದಂದು ಬಲಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಈ ಎಮ್ಮೆಯ ಹೆಸರಿನಿಂದಾಗಿ ಜಗತ್ತಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಯಿತು. ಇದರಿಂದ ನಿರ್ಮಾಣವಾದ ಒತ್ತಡದ ಹಿನ್ನೆಲೆಯಲ್ಲಿ ಈಗ ಈ ಎಮ್ಮೆಯ ಪ್ರಾಣ ಉಳಿದಿದೆ. ಎಮ್ಮೆ ಬಲಿ ಕೊಡುವ ನಿರ್ಧಾರವನ್ನು ರದ್ದುಗೊಳಿಸಲಾಗಿದ್ದು, ಈಗ ಅದನ್ನು ಪ್ರಾಣಿ ಸಂಗ್ರಹಾಲಯದಲ್ಲಿಡಲು ನಿರ್ಧರಿಸಲಾಗಿದೆ. ಎಮ್ಮೆಯ ದೇಹದ ಮಧ್ಯಭಾಗದಲ್ಲಿರುವ ಬಿಳಿ ಬಣ್ಣ ಮತ್ತು ಅದರ ಹಣೆಯ ಮೇಲಿರುವ ಚಿನ್ನದ ಬಣ್ಣದ ಕೂದಲಿನಿಂದಾಗಿ, ಆ ಎಮ್ಮೆಯ ಹೆಸರನ್ನು ಟ್ರಂಪ್ ಎಂದಿಡಲಾಗಿತ್ತು.
ಬಾಂಗ್ಲಾದೇಶದ ಗೃಹ ಸಚಿವಾಲಯವು ಎಮ್ಮೆಯ ಬಲಿಯನ್ನು ರದ್ದುಗೊಳಿಸಿರುವುದಾಗಿ ಮೇ ೨೭ ರಂದೇ ಘೋಷಿಸಿದೆ. ೭೦೦ ಕಿಲೋ ತೂಕದ ಈ ಅಪರೂಪದ ಅಲ್ಬಿನೋ ತಳಿಯ ಎಮ್ಮೆಯನ್ನು ೩ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !