ಟಿಸಿಎಸ್ ನಂತರ ಇದೀಗ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದಲ್ಲಿ ‘ಕಾರ್ಪೊರೇಟ್ ಜಿಹಾದ್’ ?

  • ಮುಂಬಯಿನಲ್ಲಿ 'ಎಸ್‌ಬಿಐ'ನ ಹಿಂದೂ ಮಹಿಳಾ ಉದ್ಯೋಗಿಯ ಮತಾಂತರದ ಸಂಚು ಬಹಿರಂಗ!

  • ಮಹಿಳೆಯನ್ನು ಬ್ಯಾಂಕಿನ ಉದ್ಯೋಗಿ ಸಾಫಿನ್ ಗೋಡಲ್ 'ಲವ್ ಜಿಹಾದ್‌'ನಲ್ಲಿ ಸಿಲುಕಿಸಿದ್ದಾನೆ

  • ಮಹಿಳೆಯ ಪತಿಯೇ ತನ್ನ ಪತ್ನಿ ಹಾಗೂ ಲವ್ ಜಿಹಾದಿಗಳ ವಿರುದ್ಧ ದೂರು ನೀಡಿದ ನಂತರ ಪ್ರಕರಣ ದಾಖಲಾಗಿದೆ

  • ಲವ್ ಜಿಹಾದಿ ಸಾಫಿನ್ ಗೋಡಲ್ ಮತ್ತು ಮಹಮ್ಮದ್ ಆದಿಲ್ ಪತಿಗೆ ಜೀವ ಬೆದರಿಕೆ ಹಾಕಿದ್ದಾರೆ

ಮುಂಬಯಿ – ನಾರಿಮನ್ ಪಾಯಿಂಟ್‌ನಂತಹ ಗಣ್ಯ ಪ್ರದೇಶದಲ್ಲಿರುವ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ(SBI) ‘ಬ್ಯಾಕ್‌ಬೇ ರಿಕ್ಲಮೇಶನ್’ ಶಾಖೆಯಲ್ಲಿ ಇಸ್ಲಾಮಿಕ್ ಮತಾಂತರದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಕೆಲಸ ಮಾಡುತ್ತಿರುವ ಹಿಂದೂ ಮಹಿಳಾ ಉದ್ಯೋಗಿಯನ್ನು ಇಸ್ಲಾಂಗೆ ಮತಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ವತಃ ಆಕೆಯ ಪತಿ ಆರೋಪಿಸಿದ್ದಾರೆ. ಪತಿಯು ಸ್ಟೇಟ್ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಪ್ರಕಾಶ್ ಭಾರತಿ ಅವರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ಅಲ್ಲದೆ ನೊಂದ ಪತಿ ರಾಜಸ್ಥಾನದ ಉದಯಪುರದ ಸುಖೇರ್ ಎಂಬ ತಮ್ಮ ಹುಟ್ಟೂರಿನಲ್ಲಿ ದೂರು ನೀಡಿದ ಬಳಿಕ ರಾಜಸ್ಥಾನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಸನಾತನ ಪ್ರಭಾತ’ವು ಸುಖೇರನ ಪೊಲೀಸ್ ಇನ್ಸ್‌ಪೆಕ್ಟರ್ ಭರತ ಯೋಗಿ ಅವರೊಂದಿಗೆ ಮಾತನಾಡಿದಾಗ, ಇದು ಲವ್ ಜಿಹಾದ್ ಪ್ರಕರಣ ಎಂಬುದು ತಿಳಿದುಬಂದಿದೆ. ಪೊಲೀಸರು ಮಹಿಳೆ ಹಾಗೂ ಸ್ಟೇಟ್ ಬ್ಯಾಂಕ್ ಉದ್ಯೋಗಿಗಳಾದ ಮಹಮ್ಮದ್ ಆದಿಲ್ ಮತ್ತು ಸಫಿನ್ ಗೋಡನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಇದು ‘ಟಿಸಿಎಸ್‌’ನ ಕಾರ್ಪೊರೇಟ್ ಜಿಹಾದ್‌ನಂತೆಯೇ ಇರುವ ಪ್ರಕರಣ ಎಂದು ಈಗ ಹೇಳಬೇಕಾಗಿದೆ.

ಪ್ರಥಮ ವರ್ತಮಾನ ವರದಿಯ (ಎಫ್‌ಐಆರ್) ಪ್ರತಿ ಮತ್ತು ಪತಿ ಸ್ಟೇಟ್ ಬ್ಯಾಂಕ್‌ಗೆ ಬರೆದ ಪತ್ರದ ಪ್ರತಿಯು ಸನಾತನ ಪ್ರಭಾತ ಬಳಿ ಲಭ್ಯವಿದೆ. ಈ ಕುರಿತು

ಪತ್ನಿಯ ಮತಾಂತರದ ಸಂಚು ಎಂದು ಪತಿಯ ಆರೋಪ!

ನೊಂದ ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ,

೧. ಕಳೆದ ಒಂದು ವರ್ಷದಿಂದ ಪತ್ನಿಯ ವರ್ತನೆಯಲ್ಲಿ ದಿಢೀರ್ ವಿಚಿತ್ರ ಬದಲಾವಣೆ ಕಂಡುಬರಲಾರಂಭಿಸಿತು. ಆಕೆ ಇಸ್ಲಾಂ ಧರ್ಮದ ಆಚರಣೆಗಳನ್ನು ಪಾಲಿಸಲು ಪ್ರಾರಂಭಿಸಿದಳು. ಇದರೊಂದಿಗೆ ಇಸ್ಲಾಮಿಕ್ ಗ್ರಂಥಗಳನ್ನು ಓದುವುದು, ರೋಜಾ (ಉಪವಾಸ) ಮತ್ತು ಇಸ್ಲಾಮಿಕ್ ಉಡುಗೆಯನ್ನು (ಹಿಜಾಬ್) ಅಳವಡಿಸಿಕೊಳ್ಳಲು ಶುರುಮಾಡಿದಳು.

೨. ಸುಮಾರು ೨ ತಿಂಗಳ ಹಿಂದೆ, ಆಕೆ ತನಗೆ ಸ್ಟೇಟ್ ಬ್ಯಾಂಕ್ ಉದ್ಯೋಗಿ ಸಾಫಿನ್ ಅಬ್ದುಲ್ ಖಾದರ್ ಗೋಡಲ್ ಜೊತೆ ಪ್ರೇಮ ಸಂಬಂಧವಿರುವುದಾಗಿ ನನಗೆ ಹೇಳಿದಳು. ಆಕೆ ನಮ್ಮ ೮ ವರ್ಷದ ಮಗಳ ಜೊತೆಗೆ ಇಸ್ಲಾಂಗೆ ಮತಾಂತರಗೊಳ್ಳುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಳು.

೩. ಘಟನೆಯ ತೀವ್ರತೆಯನ್ನು ಕಂಡು, ನಾನು ಮಾರ್ಚ್ ೩೦ ರಂದು ಅವರಿಬ್ಬರನ್ನು ರಾಜಸ್ಥಾನದ ಉದಯಪುರ ಜಿಲ್ಲೆಯ ನಮ್ಮ ಹುಟ್ಟೂರಾದ ಸುಖೇರ್‌ಗೆ ಕರೆತಂದೆ.

೪. ಆದಾಗ್ಯೂ ಏಪ್ರಿಲ್ ೧೮ ರಂದು ಸಾಫಿನ್ ನನ್ನ ಹೆಂಡತಿ ಮತ್ತು ಮಗಳನ್ನು ಅಪಹರಿಸಿದನು. ಅಂದಿನಿಂದ ಅವರಿಬ್ಬರ ಸುಳಿವು ಸಿಕ್ಕಿಲ್ಲ. ನನ್ನ ಹೆಂಡತಿಯ ಮೇಲೆ ತೀವ್ರ ಒತ್ತಡವಿದೆ ಎಂಬ ಖಚಿತತೆ ನನಗಿದೆ.

೫. ಇದಕ್ಕೂ ಮುನ್ನ ೨೦೨೦ ರಿಂದ ೨೦೨೨ ರ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್‌ನ ಉದ್ಯೋಗಿ ಮಹಮ್ಮದ್ ಆದಿಲ್ ಎಂಬಾತ ಆಕೆಗೆ ಆರ್ಥಿಕವಾಗಿ ವಂಚಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಆ ಸಮಯದಲ್ಲಿ ಆಕೆ ಗರ್ಭಿಣಿಯೂ ಆಗಿದ್ದಳು. ನಂತರ ನಾನು ಆಕೆಗೆ ಗರ್ಭಪಾತ ಮಾಡಿಸಿದೆ.

೬. ಹಿಂದೂ ಮಹಿಳೆಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಮತಾಂತರ ಮಾಡುವ ಆದಿಲ್ ಮತ್ತು ಸಾಫಿನ್ ಅವರ ದೊಡ್ಡ ಸಂಚು ಇದಾಗಿದೆ ಎಂದು ನನಗೆ ಅನ್ನಿಸುತ್ತಿದೆ. ಅವರಿಬ್ಬರೂ ಯಾವುದೋ ದೊಡ್ಡ ಇಸ್ಲಾಮಿಕ್ ಸಂಘಟನೆಗೆ ಸೇರಿರುವ ಸಾಧ್ಯತೆಯಿದೆ.

೭. ನನಗೆ ಪ್ರಸ್ತುತ ಉದ್ಯೋಗಕ್ಕಾಗಿ ಮುಂಬಯಿಗೆ ಹೋಗಲು ಸಹ ಸಾಧ್ಯವಾಗುತ್ತಿಲ್ಲ. ಮಹಮ್ಮದ್ ಮತ್ತು ಸಾಫಿನ್ ಇಬ್ಬರೂ ನನಗೆ ಹಲವು ಬಾರಿ ಜೀವ ಬೆದರಿಕೆ ಹಾಕಿದ್ದಾರೆ.

ಸಂಪಾದಕೀಯ ನಿಲುವು

  • ಕಾರ್ಪೊರೇಟ್ ಕಚೇರಿಗಳಲ್ಲಿ ಉನ್ನತ ಶಿಕ್ಷಣ ಪಡೆದ ಮುಸ್ಲಿಮರು ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಹೇಗೆ ಗುರಿಯಾಗಿಸುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ! ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!
  • 'ಸಂಸ್ಥೆಗಳಲ್ಲಿನ ಮುಸ್ಲಿಂ ಉದ್ಯೋಗಿಗಳಿಂದ ಹಿಂದೂ ಮಹಿಳಾ ಉದ್ಯೋಗಿಗಳು ನಾಲ್ಕು ಕೈ ದೂರವಿರಬೇಕು' ಎಂದು ಯಾರಾದರೂ ತೀವ್ರವಾದ ಕರೆ ನೀಡಿದರೆ, ಅದರಲ್ಲಿ ತಪ್ಪೇನಿದೆ ?
  • ರಾಜಾರೋಷವಾಗಿ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದರೆ, ಇದಕ್ಕೆ ಹಿಂದೂಗಳಲ್ಲಿ ಧರ್ಮಶಿಕ್ಷಣದ ಕೊರತೆಯೇ ಕಾರಣ! ಈ ರೀತಿ ಎಂದಾದರೂ ಮುಸ್ಲಿಂ ಮಹಿಳಾ ಉದ್ಯೋಗಿಗಳ ವಿಚಾರದಲ್ಲಿ ನಡೆಯುತ್ತದೆಯೇ ಎಂದು ಹಿಂದೂಗಳು ಅಂತರ್ಮುಖಗಳಾಗಿ ಯೋಚಿಸಬೇಕು!