ಶಿವಸೈನಿಕರು ಪೊಲೀಸರ ವಶಕ್ಕೆ!

ಕಲ್ಯಾಣ್ (ಠಾಣೆ ಜಿಲ್ಲೆ) – ಐತಿಹಾಸಿಕ ದುರ್ಗಾಡಿ ಕೋಟೆಯ ಮೇಲಿರುವ ದೇವಸ್ಥಾನದಲ್ಲಿ ಹಿಂದೂ ಭಕ್ತರಿಗೆ ಪ್ರವೇಶ ನೀಡಬೇಕು ಮತ್ತು ಹಿಂದೂ ಭಕ್ತರ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕಲ್ಯಾಣ್‌ನ ಲಾಲ್‌ಚೌಕಿ ಬಳಿ ಕೋಟೆಯ ಪ್ರವೇಶ ದ್ವಾರದಿಂದ ಸ್ವಲ್ಪ ದೂರದಲ್ಲಿ ಶಿವಸೇನೆ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳು ಘಂಟಾನಾದ ಆಂದೋಲನ ನಡೆಸಿದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು 200 ಪೊಲೀಸರ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದುರ್ಗಾಡಿಯ ಕಡೆಗೆ ಹೋಗುತ್ತಿದ್ದ ಶಿವಸೈನಿಕರನ್ನು ಪೊಲೀಸರು ಬ್ಯಾರಿಕೇಡ್‌ಗಳ (ತಡೆಬೇಲಿಗಳ) ಮೂಲಕ ತಡೆದರು. ನಮಾಜ್ ಸಮಯದಲ್ಲಿ ಪೊಲೀಸರು ಒಬ್ಬನೇ ಒಬ್ಬ ಶಿವಸೈನಿಕನನ್ನೂ ಅಲ್ಲಿಗೆ ಹೋಗಲು ಬಿಡಲಿಲ್ಲ. ಪೊಲೀಸರು ಆಂದೋಲನ ನಡೆಸುತ್ತಿದ್ದ ಶಿವಸೈನಿಕರನ್ನು ವಶಕ್ಕೆ ಪಡೆದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಠಾಣೆಗೆ ಕರೆದೊಯ್ದರು. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
🚨 Case registered against Shiv Sainiks who staged a Ghantanad protest near Durgadi Fort in Kalyan! 🔔
Several Shiv Sainiks are now in police custody
➡️ Namaz is allowed
➡️ But Hindus are opposed when they wish to visit temples
Restricting Hindus from entering the fort is an… https://t.co/4hl8rTF1LM pic.twitter.com/y4XOx00aTH
— Sanatan Prabhat (@SanatanPrabhat) May 28, 2026
ಈ ಸಮಯದಲ್ಲಿ ಹಿಂದೂಗಳು ‘ದುರ್ಗಾಡಿ ಕೋಟೆ ನಮ್ಮ ಹಕ್ಕು’ ಎಂದು ಘೋಷಣೆಗಳನ್ನು ಕೂಗಿದರು. (ಈ ಹಕ್ಕು ಹಿಂದೂ ರಾಷ್ಟ್ರದಲ್ಲೇ ಸಿಗಲಿದೆ ಎಂಬುದನ್ನು ಹಿಂದೂಗಳು ನೆನಪಿನಲ್ಲಿಟ್ಟುಕೊಂಡು ಅದಕ್ಕಾಗಿ ಕೃತಿಶೀಲರಾಗಬೇಕು! – ಸಂಪಾದಕರು) ‘ಹಿಂದೂ ಭಕ್ತರಿಗೆ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರವೇಶ ಸಿಗಲೇಬೇಕು, ಅದು ನಮ್ಮ ಹಿಂದೂಗಳ ಹಕ್ಕು’ ಎಂಬ ನಾಮಫಲಕಗಳನ್ನು ಎಲ್ಲರೂ ಕೈಯಲ್ಲಿ ಹಿಡಿದಿದ್ದರು. ಬಿಳಿ ಜುಬ್ಬಾ ಮತ್ತು ಕೇಸರಿ ಟೋಪಿಗಳಿಂದಾಗಿ ವಾತಾವರಣದಲ್ಲಿ ವೀರಶ್ರೀ ಸಂಚಾರವಾಗಿತ್ತು.
ಏನಿದು ಪ್ರಕರಣ ?ಬಕ್ರೀದ್ ಹಬ್ಬದ ದಿನದಂದು ದುರ್ಗಾದೇವಿ ದರ್ಶನಕ್ಕೆ ಜಿಲ್ಲಾಡಳಿತದಿಂದ ನಿಷೇಧ ಹೇರಲಾಗುತ್ತದೆ. ನಿಷೇಧದ ಈ ನಿರ್ಧಾರಕ್ಕೆ ಶಿವಸೇನಾ ಪ್ರಮುಖ ಬಾಳಾಸಾಹೇಬ್ ಠಾಕ್ರೆ ಅವರು ವಿರೋಧ ವ್ಯಕ್ತಪಡಿಸಿದ್ದರು. 1982 ರಿಂದ ಶಿವಸೇನಾ ಪ್ರಮುಖರ ಆದೇಶದಂತೆ ಶಿವಸೇನೆಯ ಅಂದಿನ ಜಿಲ್ಲಾ ಪ್ರಮುಖ ಆನಂದ ದಿಘೆ ಅವರು ಇಲ್ಲಿ ಘಂಟಾನಾದ ಆಂದೋಲನವನ್ನು ಪ್ರಾರಂಭಿಸಿದ್ದರು. ಅದು ಇಂದಿಗೂ ಮುಂದುವರಿದಿದೆ. ಈ ವಿವಾದವು ಕಳೆದ 50 ಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿದೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ