
ನವ ದೆಹಲಿ – ದೇಶದಲ್ಲಿ ಜನಸಂಖ್ಯೆಯ ಸಮತೋಲನ ತಪ್ಪಿರುವುದು ಮತ್ತು ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗಳ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ನೀಡಿದ್ದಾರೆ. ಈ ಸಮಿತಿಯು ಧಾರ್ಮಿಕ ಮತ್ತು ಸಾಮಾಜಿಕ ಮಟ್ಟದ ಅಸಾಮಾನ್ಯ ಜನಸಂಖ್ಯಾ ಬದಲಾವಣೆಗಳನ್ನು ವಿಶ್ಲೇಷಿಸಿ, ಕಾಲಮಿತಿಯೊಳಗೆ ಪರಿಹಾರ ಸೂಚಿಸಲಿದೆ. ಸಂಪೂರ್ಣ ದೇಶದ ಮಾಹಿತಿಯನ್ನು ಪರಿಶೀಲಿಸಿ, ಅಕ್ರಮ ವಲಸೆಯಿಂದ ಎಲ್ಲಿ ಜನಸಂಖ್ಯೆ ಹಠಾತ್ ಹೆಚ್ಚಾಗಿದೆ ಎಂಬುದನ್ನು ಪತ್ತೆಹಚ್ಚಲಿದೆ. ವಲಸೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಜನಸಂಖ್ಯೆಯ ರಚನೆ ಬದಲಾಗುತ್ತಿದ್ದು, ಇದು ಸುರಕ್ಷತೆಗೆ ದೊಡ್ಡ ಸವಾಲಾಗಿದೆ ಎಂದು ಸರಕಾರ ಹೇಳಿದೆ.
🚨 Central government sets up high-level committee to tackle challenges like illegal infiltration & unnatural demographic changes.
Union Home Minister Amit Shah said the panel will study abnormal population shifts among religious & social communities and suggest time-bound… pic.twitter.com/I92bqT2H4p
— Sanatan Prabhat (@SanatanPrabhat) May 27, 2026
ಹಠಾತ್ ಜನಸಂಖ್ಯೆ ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಭೂಮಿ, ನೀರು, ಉದ್ಯೋಗ ಮತ್ತು ಪಡಿತರದಂತಹ ಸೀಮಿತ ಸಂಪನ್ಮೂಲಗಳ ಮೇಲಿನ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಲು ಈ ಸಮಿತಿಯ ಮಾಹಿತಿಯ ಆಧಾರದ ಮೇಲೆ ನೀತಿಗಳನ್ನು ರೂಪಿಸಲಾಗುವುದು. ಸಮಿತಿಯ ವರದಿಯ ಆಧಾರದ ಮೇಲೆ ಭವಿಷ್ಯದಲ್ಲಿ ಗಡಿ ಸುರಕ್ಷತೆಯನ್ನು ಬಲಪಡಿಸಲು, ಹಾಗೂ ಪೌರತ್ವ ನಿಯಮಗಳನ್ನು ಕಠಿಣಗೊಳಿಸಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಗಟ್ಟಿಗೊಳಿಸಲು ಹೊಸ ಕಾಯ್ದೆಗಳನ್ನು ಜಾರಿಗೆ ತರಬಹುದು.
घुसपैठ और अन्य कारणों से Unnatural Demographic Change किसी भी राष्ट्र के वर्तमान व भविष्य के लिए एक बहुत बड़ी चुनौती है।
इसी चुनौती से निपटने के लिए 15 अगस्त 2025 को प्रधानमंत्री @narendramodi जी ने ‘High-Level Committee on Demographic Change’ की घोषणा की थी। मुझे बताते हुए हर्ष…
— Amit Shah (@AmitShah) May 26, 2026
೬೫ ವರ್ಷಗಳಲ್ಲಿ ಹಿಂದೂಗಳು ಶೇ. 7.8 ರಷ್ಟು ಇಳಿಕೆ, ಮುಸ್ಲಿಮರು ಶೇ. 4.25 ರಷ್ಟು ಹೆಚ್ಚಳಸರಕಾರಿ ಮಾಹಿತಿಯ ಪ್ರಕಾರ, 1950 ರಿಂದ 2015 ರವರೆಗಿನ 65 ವರ್ಷಗಳಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಹಿಂದೂ ಜನಸಂಖ್ಯೆಯು ಶೇ. 7.82% ರಷ್ಟು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ. 9.84% ರಿಂದ ಹೆಚ್ಚಾಗಿ ಶೇ. 14.09% ಕ್ಕೆ ತಲುಪಿದೆ. ಕ್ರೈಸ್ತರು ಶೇ. 0.12% ಮತ್ತು ಸಿಖ್ಖರು ಶೇ. 0.61% ರಷ್ಟು ಹೆಚ್ಚಾಗಿದ್ದಾರೆ. |
ಬಂಗಾಳದಲ್ಲಿ ಮುಸ್ಲಿಮರ ಅಸಾಮಾನ್ಯ ಬೆಳವಣಿಗೆ
1951 ರಲ್ಲಿ ಬಂಗಾಳದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ.19.5% ರಷ್ಟಿತ್ತು, ಇದು 2011 ರಲ್ಲಿ ಶೇ. 27% ಕ್ಕೆ ತಲುಪಿತು. ಈಗ, ಅಂದರೆ ಕಳೆದ 15 ವರ್ಷಗಳಲ್ಲಿ ಇದರಲ್ಲಿ ಮತ್ತಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.
ಅಕ್ರಮ ವಲಸೆಯನ್ನು ಅಘೋಷಿತ ಬಾಹ್ಯ ದಾಳಿ ಎಂದು ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯವು 2005 ರಲ್ಲಿ ‘ಸರ್ವಾನಂದ ಸೋನೋವಾಲ್ ವಿರುದ್ಧ ಭಾರತೀಯ ಒಕ್ಕೂಟ’ ಪ್ರಕರಣದಲ್ಲಿ ಆಸ್ಸಾಂನ ಅಕ್ರಮ ವಲಸಿಗರ ಗುರುತಿಸುವಿಕೆಗೆ ಸಂಬಂಧಿಸಿದ ಹಳೆಯ ಕಾಯ್ದೆಯೊಂದನ್ನು ರದ್ದುಗೊಳಿಸುವಾಗ ಅತ್ಯಂತ ಕಠಿಣ ಟಿಪ್ಪಣಿ ಮಾಡಿತ್ತು. ಬಾಂಗ್ಲಾದೇಶದಿಂದ ಆಸ್ಸಾಂಗೆ ಆಗುತ್ತಿರುವ ಅಕ್ರಮ ವಲಸೆಯು ರಾಜ್ಯದ ನಾಗರಿಕರ ಜೀವನದ ಮೇಲೆ ಪರಿಣಾಮ ಬೀರಿದೆ. ಇದು ‘ಅಘೋಷಿತ ಬಾಹ್ಯ ದಾಳಿ’ಯಂತಿದೆ ಎಂದು ನ್ಯಾಯಾಲಯ ಹೇಳಿತ್ತು.
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !