(ಅಬ್ರಹಾಂ ಅಕಾರ್ಡ್ಸ್ ಎಂದರೆ ಇಸ್ರೇಲ್ ದೇಶವನ್ನು ಇಸ್ಲಾಮಿಕ್ ದೇಶಗಳು ಮಾನ್ಯ ಮಾಡುವುದು)

ವಾಷಿಂಗ್ಟನ್ (ಅಮೆರಿಕ) – ಇರಾನ್ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ, ಸೌದಿ ಅರೇಬಿಯಾ, ಜೋರ್ಡಾನ್, ಕತಾರ್ ಮುಂತಾದ ಇಸ್ಲಾಮಿಕ್ ದೇಶಗಳಿಗೆ ‘ಅಬ್ರಹಾಂ ಅಕಾರ್ಡ್ಸ್’ನಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದರು. ಟ್ರಂಪ್ ಅವರು ಈ ಒಪ್ಪಂದದಲ್ಲಿ ದೇಶಗಳ ಭಾಗವಹಿಸುವಿಕೆ ‘ಅನಿವಾರ್ಯ’ವಾಗಿರಬೇಕೆಂದು ಹೇಳಿದ್ದರು. ಟ್ರಂಪ್ ಹೇಳಿದ ಪ್ರಕಾರ, ಇಸ್ರೇಲ್ ಗೆ ಮಾನ್ಯತೆ ನೀಡುವ ಸೂತ್ರವಿತ್ತು. ಇಲ್ಲಿಯವರೆಗೆ ಇಸ್ಲಾಮಿಕ್ ದೇಶಗಳು ಇಸ್ರೇಲ್ ಅನ್ನು ಮಾನ್ಯ ಮಾಡಿಲ್ಲ. ಟ್ರಂಪ್ ಅವರ ಈ ಕರೆಯನ್ನು ಪಾಕಿಸ್ತಾನ ತಿರಸ್ಕರಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮಹಮ್ಮದ್ ಆಸಿಫ್ ಅವರು ಈ ಬಗ್ಗೆ ಮಾತನಾಡಿ, ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸಲು ಇರುವ ಈ ಒಪ್ಪಂದವು ಪಾಕಿಸ್ತಾನದ ಮೂಲ ಸಿದ್ಧಾಂತ ಮತ್ತು ನೀತಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದಿದ್ದಾರೆ.
ಈ ಒಪ್ಪಂದದಲ್ಲಿ ಭಾಗವಹಿಸಲು ಟ್ರಂಪ್ ಅವರಿಂದ ಪಾಕಿಸ್ತಾನದ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರನ್ನು ಕೇಳಿದಾಗ, ನನ್ನ ಅಭಿಪ್ರಾಯದಂತೆ, ಪಾಕಿಸ್ತಾನದ ಮೂಲಭೂತ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವ ಯಾವುದೇ ಒಪ್ಪಂದದಲ್ಲಿ ನಾವು ಭಾಗಿಯಾಗಬಾರದು. ಯಾರ ಮಾತಿನ ಮೇಲೆ ನಾವು ಒಂದು ದಿನವೂ ವಿಶ್ವಾಸವಿಡಲು ಸಾಧ್ಯವಿಲ್ಲವೋ, ಅಂತಹ ಜನರೊಂದಿಗೆ ಪಾಕಿಸ್ತಾನ ಚರ್ಚೆಗೆ ಹೇಗೆ ಕುಳಿತುಕೊಳ್ಳಲು ಸಾಧ್ಯ? ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ; ಈ ಪ್ರಸ್ತಾವನೆ ನಮಗೆ ಯಾವುದೇ ಕಾರಣಕ್ಕೂ ಒಪ್ಪಿಗೆಯಿಲ್ಲ. ಪಾಸ್ಪೋರ್ಟ್ ನಲ್ಲಿ ಇಸ್ರೇಲ್ ನ ಹೆಸರೇ ಇಲ್ಲದ ವಿಶ್ವದ ಏಕೈಕ ದೇಶ ಪಾಕಿಸ್ತಾನವಾಗಿದೆ, ಎಂದರು.
ಏನಿದು ‘ಅಬ್ರಹಾಂ ಅಕಾರ್ಡ್ಸ್’ ?
‘ಅಬ್ರಹಾಂ ಅಕಾರ್ಡ್ಸ್’ ಒಪ್ಪಂದವು 2020 ರಲ್ಲಿ ಟ್ರಂಪ್ ಅವರ ಅಧ್ಯಕ್ಷತೆಯ ಮೊದಲ ಅವಧಿಯಲ್ಲಿ ಪ್ರಾರಂಭವಾಗಿತ್ತು. ಇದರ ಉದ್ದೇಶ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ಭದ್ರತಾ ಸಂಬಂಧಗಳನ್ನು ಮರುಸ್ಥಾಪಿಸುವುದಾಗಿದೆ. 2020 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ.) ಮತ್ತು ಬಹ್ರೇನ್ ದೇಶಗಳು ಎಲ್ಲಕ್ಕಿಂತ ಮೊದಲು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆನಂತರ ಮೊರಾಕೊ ಮತ್ತು ಸುಡಾನ್ ದೇಶಗಳೂ ಇದರಲ್ಲಿ ಭಾಗಿಯಾದವು.
ಪಾಕಿಸ್ತಾನದ ನಿಲುವು !
‘ಎಲ್ಲಿಯವರೆಗೆ ಪ್ಯಾಲೆಸ್ಟೈನ್ ವಿವಾದ ಬಗೆಹರಿಯುವುದಿಲ್ಲವೋ ಮತ್ತು ಸ್ವತಂತ್ರ ಪ್ಯಾಲೆಸ್ಟೈನ್ ದೇಶದ ಸ್ಥಾಪನೆಯಾಗುವುದಿಲ್ಲವೋ, ಅಲ್ಲಿಯವರೆಗೆ ಇಸ್ರೇಲ್ ಅನ್ನು ಮಾನ್ಯ ಮಾಡಲಾಗುವುದಿಲ್ಲ’, ಎನ್ನುವುದು ಪಾಕಿಸ್ತಾನದ ಅಧಿಕೃತ ನೀತಿಯಾಗಿದೆ. ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರು ವರ್ಷ 1947-48 ರಲ್ಲಿ ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ವಿಭಜನೆಯ ಪ್ರಸ್ತಾವನೆಯನ್ನು ಕಟುವಾಗಿ ವಿರೋಧಿಸಿದ್ದರು, ಅಂದಿನಿಂದ ಈ ನೀತಿ ಮುಂದುವರಿದಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation