ಹಿಂದೂಗಳ ದೂರಿನ ನಂತರ ಅನಧಿಕೃತ ಶೆಡ್ ಧ್ವಂಸಗೊಳಿಸಿದ ಮಹಾನಗರ ಪಾಲಿಕೆ!
ಪ್ರತ್ಯುತ್ತರವೆಂದು ಬಲಿಗಾಗಿ ಹಂದಿ ತಂದ ಹಿಂದೂಗಳು!

ಮೀರಾ ರೋಡ್ (ಠಾಣೆ ಜಿಲ್ಲೆ) – ಬೇಕರೀದ್ ಹಿನ್ನೆಲೆಯಲ್ಲಿ ಮೀರಾ ರೋಡ್ ನ ವಸತಿ ಸಂಕೀರ್ಣವೊಂದರಲ್ಲಿ 25 ಕುರಿಗಳನ್ನು ತರುವ ವಿಷಯವಾಗಿ ರಾತ್ರಿ ವಿವಾದ ಉಂಟಾಯಿತು. ಈ ವಿವಾದ ಹಿಂಸಾಚಾರಕ್ಕೆ ತಿರುಗಿ, ಯುವಕನೊಬ್ಬನ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಲಾಯಿತು. ಈ ಕುರಿಗಳನ್ನು ತಾತ್ಕಾಲಿಕವಾಗಿ ಇರಿಸಲು ಅನುಮತಿ ಕೋರಲಾಗಿತ್ತು; ಆದರೆ ಕಟ್ಟಡದ ಮುಸ್ಲಿಂ ಪದಾಧಿಕಾರಿಗಳು ಅಧಿಕೃತ ಸಭೆ ನಡೆಸದೆ ಕುರಿಗಳಿಗಾಗಿ ಶೆಡ್ ನಿರ್ಮಿಸಲು ಅನುಮತಿ ನೀಡಿದ್ದರು. ಇದನ್ನು ಹಿಂದೂ ನಿವಾಸಿಗಳು ವಿರೋಧಿಸಿದರು. (ಸಂಘಟಿತರಾದ ಹಿಂದೂಗಳಿಗೆ ಅಭಿನಂದನೆಗಳು ! – ಸಂಪಾದಕರು) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಜಪ ನಗರಸೇವಕಿ, ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಮತ್ತು ಹಿಂದೂ ನಿವಾಸಿಗಳು ಪೊಲೀಸ್ ಹಾಗೂ ಮಹಾನಗರ ಪಾಲಿಕೆಗೆ ದೂರು ದಾಖಲಿಸಿದರು. ದೂರನ್ನು ಪರಿಗಣಿಸಿದ ಪಾಲಿಕೆ ಆ ಶೆಡ್ ಅನ್ನು ಧ್ವಂಸಗೊಳಿಸಿತು. ಆದರೆ ಕುರಿಗಳು ಅಲ್ಲೇ ಇದ್ದಿದ್ದರಿಂದ ರಾತ್ರಿಯ ಸಮಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ಶೆಡ್ ಧ್ವಂಸಗೊಳಿಸುತ್ತಿರುವಾಗಲೇ ಮುಸ್ಲಿಮರು ಮತ್ತೆ ವಿರೋಧಿಸಿದರು. ಆಗ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವಕನ ಮೇಲೆ ಬ್ಲೇಡ್ ನಿಂದ ಹಲ್ಲೆ ನಡೆಸಿದನು. ಈ ಪ್ರಕರಣದಲ್ಲಿ ಮೊಕದ್ದಮೆ ದಾಖಲಾಗಿದ್ದು, ಶೇಖ್ ಅಬ್ದುಲ್ ರಹೀಮ್ ಶೇಖ್ (ವಯಸ್ಸು ೪೪ ವರ್ಷ) ಎಂಬಾತನನ್ನು ಬಂಧಿಸಲಾಗಿದೆ.
ಈ ಸಂಘರ್ಷದ ವೇಳೆ ಹಿಂದೂಗಳು ಪ್ರತ್ಯುತ್ತರ ನೀಡಲು ಮತ್ತು ಬಲಿ ಅರ್ಪಿಸಲು ಅಲ್ಲಿಗೆ ಹಂದಿಯೊಂದನ್ನು ತಂದರು. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಹಂದಿಯನ್ನು ವಶಕ್ಕೆ ಪಡೆದರು.
ಭಾಜಪದಿಂದ ಮುಂಬಯಿ ಮಹಾನಗರ ಪಾಲಿಕೆ ಮತ್ತು ಪೊಲೀಸರಿಗೆ ಪತ್ರ : ಕಾನೂನುಬಾಹಿರ ಕುರ್ಬಾನಿ ತಡೆಯಲು ಆಗ್ರಹ !
ಮುಂಬಯಿ ಕಟ್ಟಡಗಳಲ್ಲಿ ನಡೆಯಬಹುದಾದ ಕಾನೂನುಬಾಹಿರ ಕುರ್ಬಾನಿ ಕುರಿತು ಭಾಜಪ ಆಕ್ರಮಣಕಾರಿ ನಿಲುವು ತಳೆದಿದ್ದು, ಆಡಳಿತ ವ್ಯವಸ್ಥೆಗೆ ಪತ್ರ ಬರೆದಿದೆ. ಮುಂಬಯಿ ಮಹಾಪೌರರಾದ ಸೌ. ರಿತು ತಾವಡೆ ಸೇರಿದಂತೆ ಭಾಜಪದ ಹಲವು ಹಿರಿಯ ನಾಯಕರು ಮಹಾನಗರ ಪಾಲಿಕೆ ಮತ್ತು ಮುಂಬಯಿ ಪೊಲೀಸರಿಗೆ ಪತ್ರ ಕಳುಹಿಸಿ, ‘ವಸತಿ ಸಂಕೀರ್ಣಗಳಲ್ಲಿ ಯಾವುದೇ ಕಾನೂನುಬಾಹಿರ ಕುರ್ಬಾನಿ ನೀಡಬಾರದು’ ಎಂದು ಆಗ್ರಹಿಸಿದ್ದಾರೆ. ಈ ಪತ್ರಕ್ಕೆ ವಿವಿಧ ಶಾಸಕರು ಮತ್ತು ಗಣ್ಯರು ಸಹಿ ಹಾಕಿದ್ದಾರೆ. ಭಾಜಪ ಹಿರಿಯ ನಾಯಕ ಕಿರೀಟ್ ಸೋಮಯ್ಯ ಅವರು ಕೂಡ ಈ ಬೇಡಿಕೆಯನ್ನು ಬೆಂಬಲಿಸಿದ್ದು, ‘ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ