ಆರೋಪಿಯು ಮನೋರೋಗಿಯಾಗಿದ್ದಾನೆ ಎಂದು ಭದ್ರತಾ ಅಧಿಕಾರಿಗಳ ದಾವೆ

ವಾಶಿಂಗ್ಟನ್ (ಅಮೆರಿಕ) – ವೈಟ್ ಹೌಸ್‌ನ ಹೊರಗಿನ ಸೀಕ್ರೆಟ್ ಸರ್ವಿಸ್‌ನ (ಗುಪ್ತಚರ ಸಂಸ್ಥೆಯ) ತಪಾಸಣಾ ಸ್ಥಳದಲ್ಲಿ ೨೪ ಮೇ ದಿನದಂದು ಗುಂಡಿನ ದಾಳಿಯಾಯಿತು. ಇದರಲ್ಲಿ ಓರ್ವ ಪಾದಚಾರಿಯು ಗಂಭೀರವಾಗಿ ಗಾಯಗೊಂಡನು. ಈ ಸಮಯದಲ್ಲಿ ಸೀಕ್ರೆಟ್ ಸರ್ವಿಸ್‌ನ ಅಧಿಕಾರಿಗಳು ಪ್ರತ್ಯುತ್ತರವಾಗಿ ಮಾಡಿದ ಗುಂಡಿನ ದಾಳಿಯಲ್ಲಿ ಗುಂಡು ಹಾರಿಸಿದವನು ಹತನಾದನು. ಗುಂಡಿನ ದಾಳಿಯಾದಾಗ, ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರು ವೈಟ್ ಹೌಸ್‌ನಲ್ಲಿಯೇ ಇದ್ದರು. ಗುಂಡಿನ ದಾಳಿ ಮಾಡಿದವನ ಗುರುತು ಸಿಕ್ಕಿದ್ದು ಅವನ ಹೆಸರು ನಾಸೀರ್ ಬೆಸ್ಟ್ ಎಂಬುದಾಗಿದೆ. ಗುಂಡಿನ ದಾಳಿಯ ಹಿಂದಿನ ಅವನ ನಿಖರ ಉದ್ದೇಶವು ಇನ್ನೂ ಅಸ್ಪಷ್ಟವಾಗಿದ್ದರೂ, ಅವನು ಮಾನಸಿಕವಾಗಿ ಬಳಲುತ್ತಿದ್ದನು ಮತ್ತು ತಪಾಸಣಾ ಸ್ಥಳದ ಹತ್ತಿರ ಸುಳಿದಾಡುತ್ತಿದ್ದರಿಂದ ಸೀಕ್ರೆಟ್ ಸರ್ವಿಸ್‌ನ ಅಧಿಕಾರಿಗಳು ಅವನನ್ನು ಅನೇಕ ಬಾರಿ ಎಚ್ಚರಿಸಿದ್ದರು.
ತನಿಖಾಧಿಕಾರಿಗಳು, ‘ಆರೋಪಿಗೆ ತಾನು ಯೇಸು ಕ್ರಿಸ್ತನ ‘ಆಧುನಿಕ ಅವತಾರ’ವಾಗಿದ್ದೇನೆ ಎಂಬ ಭ್ರಮೆಯಿತ್ತು’ ಎಂದು ಹೇಳಿದರು. ಇದರಿಂದ ಈ ಆಕ್ರಮಣವು ಅವನ ಮಾನಸಿಕ ಅಸ್ವಸ್ಥತೆಯಿಂದಾಗಿ ಆಗಿರಬಹುದು. ಬೆಸ್ಟ್ ಸುಮಾರು ೧೮ ತಿಂಗಳುಗಳಿಂದ ವಾಶಿಂಗ್ಟನ್ ಡಿಸಿಯಲ್ಲಿ ವಾಸಿಸುತ್ತಿದ್ದನು. ಜುಲೈ ೨೦೨೫ ರಲ್ಲಿ ಅವನ ಅಮೆರಿಕದ ಗುಪ್ತಚರ ಸಂಸ್ಥೆಯೊಂದಿಗೆ ವಿವಾದವಾಗಿತ್ತು. ಅವನು ವೈಟ್ ಹೌಸ್‌ನೊಳಗೆ ಬಲವಂತವಾಗಿ ನುಗ್ಗುವ ಪ್ರಯತ್ನ ಮಾಡಿದ್ದನು. ಇದರಿಂದ ಗುಪ್ತಚರ ಸಂಸ್ಥೆಯು ಅವನನ್ನು ಬಂಧಿಸಿತ್ತು. ಈ ಘಟನೆಯ ನಂತರ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದಾಗಿ ಅವನನ್ನು ಮನೋವೈದ್ಯಕೀಯ ವಿಭಾಗಕ್ಕೆ ಕಳುಹಿಸಲಾಗಿತ್ತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation