
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ಮತ್ತು ಅಮೆರಿಕ ನಡುವೆ ೩ ಒಪ್ಪಂದಗಳು ನಡೆದಿವೆ. ಇದರಿಂದಾಗಿ ಅಮೆರಿಕದ ಸೈನ್ಯಕ್ಕೆ ಬಾಂಗಾದೇಶದ ಚಟಗಾಂವ ಮತ್ತು ಮತಾರಬಾರಿ ಎಂಬ ೨ ಬಂದರುಗಳವರೆಗೆ ಪ್ರವೇಶದ ಹಾದಿ ಸುಗಮವಾಗಿದೆ. ಒಪ್ಪಂದವು ಜಾರಿಗೆ ಬಂದ ನಂತರ, ಅಮೆರಿಕದ ನೌಕಾಪಡೆಯ ಯುದ್ಧನೌಕೆಗಳು ಮತ್ತು ಸೈನಿಕ ವಿಮಾನಗಳು ಈ ಬಂದರುಗಳು ಸೇರಿದಂತೆ ಸಂಬಂಧಿತ ವಾಯುಪಡೆ ತಾಣವನ್ನು ಪಡಿತರ ಪೂರೈಕೆ, ಇಂಧನ ತುಂಬಿಸುವುದು, ನಿರ್ವಹಣೆ, ದುರಸ್ತಿ ಮತ್ತು ಸೈನಿಕರ ಚಲನವಲನಗಳಿಗಾಗಿ ಬಳಸಿಕೊಳ್ಳಬಹುದು. ಹಾಗೆಯೇ ಉಭಯ ದೇಶಗಳ ಸೈನ್ಯದ ನಡುವೆ ರಹಸ್ಯ ಸೈನಿಕ ಮತ್ತು ಗುಪ್ತಚರ ಮಾಹಿತಿಯ ವಿನಿಮಯ ನಡೆಯಲಿದೆ. ಈ ಒಪ್ಪಂದ ನಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪರವರು, ಒಂದು ವೇಳೆ ರಕ್ಷಣಾ ಒಪ್ಪಂದಗಳು ನಡೆಯದಿದ್ದರೆ ಆಮದು ಸುಂಕದಲ್ಲಿನ ಶೇ. ೧೯ ರಷ್ಟು ರಿಯಾಯಿತಿ ಮತ್ತು ಸೀಮಾ ಸುಂಕದ ಕೋಟಾವನ್ನು ರದ್ದುಗೊಳಿಸಲಾಗುವುದು, ಎಂಬ ಸ್ಪಷ್ಟ ಸಂಕೇತ ನೀಡಿದ್ದರು. (ಅಪರಿಮಿತ ಶಕ್ತಿಯಿಂದಾಗಿ ದಬ್ಬಾಳಿಕೆಯ ಉತ್ತುಂಗವನ್ನು ತಲುಪುತ್ತಿರುವ ಅಮೆರಿಕ ! – ಸಂಪಾದಕರು)
🚨 Bangladesh grants the US military access to Chittagong & Matarbari ports 🇧🇩⚓🇺🇸
President Donald Trump had warned that trade concessions could be withdrawn if defence pacts were not signed.
America reaching the absolute peak of bullying due to its unchecked power!
US Navy… pic.twitter.com/WsI5H9dxDi
— Sanatan Prabhat (@SanatanPrabhat) May 23, 2026
ಇದಕ್ಕೂ ಮುನ್ನ ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ೨ ‘ಜೆಎಫ್-೧೭’ ತರಬೇತಿ ವಿಮಾನಗಳನ್ನು ನೀಡಿದೆ. ಬಾಂಗ್ಲಾದೇಶದ ಪೈಲಟ್ ಗಳ ತರಬೇತಿ ಮತ್ತು ವಿಮಾನ ಕಾರ್ಯಾಚರಣೆಗಾಗಿ ಈ ವಿಮಾನಗಳನ್ನು ನೀಡಲಾಗಿದೆ. ‘ಜೆಎಫ್-೧೭’ ವಿಮಾನವನ್ನು ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
ಭಾರತಕ್ಕೆ ಕಳವಳದ ಸಂಗತಿ
ಚಟಗಾಂವ ಮತ್ತು ಮತಾರಬಾರಿ ಬಂದರುಗಳು ಬಂಗಾಳ ಕೊಲ್ಲಿಯ ಉತ್ತರದ ಭಾಗದಲ್ಲಿವೆ. ಚಟಗಾಂವ ತ್ರಿಪುರಾದ ಸಬರೂಮ್ ಭಾಗದಿಂದ ೮೦ ಕಿ.ಮೀ. ಮತ್ತು ಮತಾರಬಾರಿಯಿಂದ ೧೫೦ ಕಿ.ಮೀ. ದೂರದಲ್ಲಿದೆ. ಇದರಿಂದಾಗಿ ಭಾರತದ ಈಶಾನ್ಯ ಭಾಗದ ಸಮೀಪ ಅಮೆರಿಕದ ನೌಕಾಪಡೆಯು ದೀರ್ಘಕಾಲ ನಿಯೋಜನೆಗೊಳ್ಳಲು ಸಾಧ್ಯವಾಗುತ್ತದೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine