ಕಳೆದ ೨೦ ವರ್ಷಗಳಿಂದ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಜಫರನ ಬಂಧನ

ಪಾಕಿಸ್ತಾನಿ ಮಹಿಳೆಯೊಂದಿಗೆ ವಿವಾಹ ಮಾಡಿಕೊಂಡಿದ್ದನು.

AI image

ಕೊಲಕಾತಾ (ಬಂಗಾಳ) – ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಜಫರ ರಿಯಾಜ ಉರ್ಫ್ ರಿಝವಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಬಂಧಿಸಿದೆ. ಈತನು ಕೊಲಕಾತಾದ ನಿವಾಸಿಯಾಗಿದ್ದು, ಪಾಕಿಸ್ತಾನಿ ಮಹಿಳೆಯೊಂದಿಗೆ ವಿವಾಹವಾಗಿದ್ದಾನೆ. ಪ್ರಸ್ತುತ ಜಫರನ ಪತ್ನಿ ಮತ್ತು ಮಕ್ಕಳು ಪಾಕಿಸ್ತಾನದಲ್ಲೇ ವಾಸಿಸುತ್ತಿದ್ದಾರೆ.

ಜಫರನು ೨೦೦೫ ರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸತತವಾಗಿ ಪ್ರಯಾಣಿಸುತ್ತಿದ್ದನು. ಇದೇ ಅವಧಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಈತನನ್ನು ತಮ್ಮ ಬಲೆಗೆ ಕೆಡವಿ ಗೂಢಚಾರಿಕೆಯ ತರಬೇತಿ ನೀಡಿದ್ದರು. ಅವರು ಜಫರನಿಗೆ ಹಣದ ಆಮಿಷ ಒಡ್ಡಿದ್ದರು. ಇದಲ್ಲದೆ ಆತನಿಗೆ ಪಾಕಿಸ್ತಾನದ ಪೌರತ್ವ ಕೊಡಿಸುವ ಭರವಸೆಯನ್ನೂ ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ರಿಝವಿಯು ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮತ್ತು ಅತ್ಯಂತ ರಹಸ್ಯ ಭದ್ರತಾ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

  • ಇಷ್ಟು ವರ್ಷಗಳ ಕಾಲ ಭಾರತದಲ್ಲಿ ಬೇಹುಗಾರಿಕೆ ನಡೆಯುತ್ತಿದ್ದರೂ ಭಾರತೀಯ ತನಿಖಾ ಸಂಸ್ಥೆಗಳು ಏನು ಮಾಡುತ್ತಿದ್ದವು?
  • ಈಗ ಬಂಧಿಸಲಾಗಿರುವ ಭಯೋತ್ಪಾದಕರನ್ನು ಕಾರಾಗೃಹದಲ್ಲಿಟ್ಟು ಸಾಕುವುದಕ್ಕಿಂತ ಅವರಿಗೆ ಗಲ್ಲು ಶಿಕ್ಷೆಯೇ ಆಗುವಂತೆ ಪ್ರಯತ್ನಿಸಬೇಕು ಅಥವಾ ಅಂತಹ ಕಾನೂನನ್ನೇ ರೂಪಿಸಬೇಕು !