
ಇಂತಹ ಮಹಾನ ಅವತಾರಿ ಗುರುಗಳ ಚರಣಗಳಲ್ಲಿ ಸಾಧಕರ ಶ್ರದ್ಧೆ ಹೇಗಿರಬೇಕು ? ಗುರುಗಳ ಅಸ್ತಿತ್ವ ಅಥವಾ ಅವರ ಕಾರ್ಯದ ಬಗ್ಗೆ ಸ್ವಲ್ಪವೂ ಸಂಶಯ ಪಡದೇ ‘ನನ್ನ ಗುರುಗಳು ಏನೇ ಮಾಡುತ್ತಿದ್ದರೂ, ಅದು ನನ್ನ ಕಲ್ಯಾಣಕ್ಕಾಗಿಯೇ ಆಗಿದೆ’, ಎಂಬ ದೃಢ ಭಾವವನ್ನಿಟ್ಟುಕೊಳ್ಳುವುದು, ಎಂದರೆ ಶ್ರದ್ಧೆ !
ಮನಸ್ಸಿನಲ್ಲಿ ಯಾವುದೇ ಸಂಶಯವನ್ನಿಟ್ಟುಕೊಳ್ಳದೇ ಗುರುಗಳ ಪ್ರತಿಯೊಂದು ಆಜ್ಞೆಯನ್ನು ಪಾಲಿಸುವುದು’, ಇದುವೇ ಅವರ ಮೇಲಿನ ಶ್ರದ್ಧೆಯ ಪರಮೋಚ್ಚ ಬಿಂದುವಾಗಿದೆ. ಜೀವನದಲ್ಲಿ ಸಂಕಷ್ಟಗಳ ಪರ್ವತಗಳು ಕುಸಿದು ಬಿದ್ದರೂ ಅಥವಾ ಪರಿಸ್ಥಿತಿಯು ಎಷ್ಟೇ ವಿರುದ್ಧವಾಗಿದ್ದರೂ ಗುರುಗಳ ಮೇಲಿರುವ ನಿಷ್ಠೆಯು ಕ್ಷಣಮಾತ್ರವೂ ಅಲುಗಾಡಬಾರದು. ನಮ್ಮ ಪ್ರತಿಯೊಂದು ಕೃತಿ, ಪ್ರತಿಯೊಂದು ವಿಚಾರ ಮತ್ತು ಪ್ರತಿಯೊಂದು ಶ್ವಾಸವನ್ನು ಗುರುಗಳಿಗೆ ಅರ್ಪಿಸುವ ಭಾವದಿಂದ, ‘ಈಶ್ವರಾರ್ಪಣ ಬುದ್ಧಿ’ಯಿಂದ ಬದುಕಬೇಕು. ಯಾವಾಗ ಸಾಧಕನು ಇಂತಹ ಅಸೀಮ, ನಿರಪೇಕ್ಷ ಮತ್ತು ಅಸಾಧಾರಣ ಶ್ರದ್ಧೆಯನ್ನಿಡುತ್ತಾನೋ, ಆಗ ಈ ನಿರ್ಗುಣ ಗುರುತತ್ತ್ವವು ಅವನನ್ನು ಸುರಕ್ಷಿತವಾಗಿ ಈ ಭವಸಾಗರದಿಂದ ಪಾರು ಮಾಡುತ್ತದೆ ಮತ್ತು ತನ್ನ ಅಖಂಡ ಬ್ರಹ್ಮಾನಂದದಲ್ಲಿ ಶಾಶ್ವತವಾಗಿ ಲೀನವಾಗಿಸಿಕೊಳ್ಳುತ್ತದೆ. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಂತಹ ಮಹಾನ ಗುರುಗಳು ನಮಗೆ ಸಿಕ್ಕಿರುವುದು’, ನಮ್ಮ ಅನಂತ ಜನ್ಮಗಳ ಪುಣ್ಯವಾಗಿದೆ. ಅವರ ಜನ್ಮೋತ್ಸವದ ನಿಮಿತ್ತ ನಾವು ಸಂಕಲ್ಪ ಮಾಡೋಣ.

‘ಇಂತಹ ಸರ್ವವ್ಯಾಪಿ, ನಿರ್ಗುಣ ಮತ್ತು ಅಗಾಧ ಸ್ವರೂಪರಾಗಿರುವ ಶ್ರೀ ಗುರುಗಳ ಮೇಲೆ ಮೆರುಪರ್ವತದಂತಹ ಅಚಲ ಶ್ರದ್ಧೆಯನ್ನಿಟ್ಟು ಕೊನೆಯ ಶ್ವಾಸದ ವರೆಗೆ ಅವರ ಬೋಧನೆಯಂತೆ ನಡೆಯುತ್ತೇವೆ !’, ಎಂದು ಸಂಕಲ್ಪ ಮಾಡೋಣ.
ಇಂತಹ ಮಹಾನ ಅವತಾರಿ ಗುರುಗಳ ಶ್ರೀ ಚರಣಗಳಲ್ಲಿ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿ ನಾವು ಆರ್ತ ಪ್ರಾರ್ಥನೆ ಮಾಡೋಣ, ‘ಹೇ ಗುರುದೇವಾ, ನಾವು ನಿಮ್ಮ ಚರಣಗಳಲ್ಲಿ ಸಂಪೂರ್ಣ ಶರಣಾಗಿದ್ದೇವೆ. ನಿಮ್ಮ ಈ ಪರಮ ಶಾಂತಿದಾಯಕ ನಿರ್ಗುಣ ತತ್ತ್ವದೊಂದಿಗೆ ಏಕರೂಪವಾಗಲು ನಮ್ಮನ್ನು ಎಲ್ಲಾ ದ್ವಂದ್ವಗಳು, ಎಲ್ಲ ಮಾಯಾಬಂಧನಗಳು, ಸ್ವಭಾವದೋಷಗಳು ಮತ್ತು ಅಹಂಕಾರದಿಂದ ಮುಕ್ತಗೊಳಿಸಿ. ಹೇ ಕೃಪಾಳು, ನಮ್ಮ ಕೈ ಬಿಡಬೇಡಿ ಮತ್ತು ನಮ್ಮನ್ನು ನಿಮ್ಮ ಅಖಂಡ ಅನುಸಂಧಾನದಲ್ಲಿರಿಸಿ ನಿಮ್ಮ ಚರಣಗಳಲ್ಲಿ ಶಾಶ್ವತ ಸ್ಥಾನ ನೀಡಿ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ) (೨೧.೪.೨೦೨೬)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !