
ಭಾರತದಲ್ಲಿ ಸಾಮ್ಯವಾದದಂತಹ ಕ್ರೂರ, ನಿರ್ದಯಿ ಮತ್ತು ಕೇವಲ ತಾತ್ಕಾಲಿಕ ದೃಷ್ಟಿಕೋನವಿರುವ ತತ್ತ್ವ ಜ್ಞಾನವು ಎಂದಿಗೂ ಉದಯಿಸಲಿಲ್ಲ ಮತ್ತು ಅದರ ಪ್ರಸಾರವೂ ಇಂದಿಗೂ ಆಗುತ್ತಿಲ್ಲ; ಏಕೆಂದರೆ ಭಾರತದ ಮಾನ್ಯ ಹಾಗೂ ಶ್ರೇಷ್ಠ ಗ್ರಂಥಗಳಾದ ವೇದ ಮತ್ತು ಭಗವದ್ಗೀತೆಯು ಮೂಲತಃ ಶೋಷಣೆಯ ವಿರುದ್ಧವಾಗಿವೆ. ಅವು ಔದಾರ್ಯವನ್ನು ಪುರಸ್ಕರಿಸುತ್ತವೆ ಮತ್ತು ಸ್ವಾರ್ಥದ ವಿರೋಧಿಯಾಗಿವೆ.
ನಮ್ಮ ಸಂತ ಪರಂಪರೆಯು ವೇದ ಮತ್ತು ಗೀತೆಯನ್ನು ಅನುಸರಿಸುವಂತದ್ದಾಗಿದೆ. ಶ್ರೀ ಜ್ಞಾನೇಶ್ವರ ಮಹಾರಾಜರು, ‘ಜಗತ್ತಿನಲ್ಲಿ ವೇದಗಳಿಗಿಂತ ಮಿಗಿಲಾದ ತಾಯಿ ಬೇರೊಬ್ಬರಿಲ್ಲ’ ಎಂದು ಅತ್ಯಂತ ಪ್ರೇಮಾದರದಿಂದ ಹೇಳುತ್ತಾರೆ. ಭಕ್ತಿ ಮಂದಿರದ ಶಿಖರದಂತಿರುವ ಶ್ರೀ ತುಕಾರಾಮ ಮಹಾರಾಜರು, ‘ವೇದನೀತಿಯನ್ನೇ ಮಾತನಾಡೋಣ, ಸಂತರ ದಾರಿಯಲ್ಲೇ ನಡೆಯೋಣ’ ಎಂದು ಜೀವನದ ಉದ್ದೇಶವನ್ನು ಸಾರುತ್ತಾರೆ.
ಸಂತರ ಈ ಧೋರಣೆಯು ಸದ್ಧರ್ಮದ ಆಚರಣೆಯನ್ನು ಅನುಸರಿಸಿಯೇ ಇದೆ. ಸದ್ಧರ್ಮಾಚರಣೆಯು ಪರಲೋಕದ ಶ್ರೇಯಸ್ಸನ್ನು (ಮುಕ್ತಿ) ಸಾಧಿಸಿಕೊಡುತ್ತದೆ. ಆದರೆ ಯಾರು ಪರಲೋಕವನ್ನು ನಂಬುವುದಿಲ್ಲವೋ, ಅಂತಹವರಿಗೂ ಈ ಸದ್ಧರ್ಮಾಚರಣೆಯೇ ಅಭ್ಯುದಯದ, ಅಂದರೆ ಇಹಲೋಕದ ಐಶ್ವರ್ಯ ಮತ್ತು ವೈಭವದ ಸಾಧನ ಎಂಬುದನ್ನು ಅವರು ಮರೆಯಬಾರದು.
– ಪ.ಪೂ. ಸ್ವಾಮಿ ವರದಾನಂದ ಭಾರತಿ (ಸೌಜನ್ಯ : ’ಹಿಚ ಗುರುಪುಜಾ ಖರಿ’ ಗ್ರಂಥದಿಂದ)
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….