
ಢಾಕಾ (ಬಾಂಗ್ಲಾದೇಶ) – ಬಕ್ರೀದ್ ಅಂಗವಾಗಿ ಬಾಂಗ್ಲಾದೇಶದಲ್ಲಿ ಬಲಿಗಾಗಿ ಮಾರಾಟಕ್ಕಿರುವ ಕೋಣಗಳಿಗೆ ‘ಡೊನಾಲ್ಡ್ ಟ್ರಂಪ್’ ಮತ್ತು ‘ಬೆಂಜಮಿನ್ ನೆತನ್ಯಾಹು’ ಎಂದು ಹೆಸರಿಡಲಾಗಿದೆ. ಈ ಎರಡೂ ಕೋಣಗಳು ‘ಅಲ್ಬಿನೋ’ (ಗುಲಾಬಿ-ಬಿಳಿ) ತಳಿಗೆ ಸೇರಿವೆ. ಈದ್ ಅಂಗವಾಗಿ ಇವುಗಳನ್ನು ಮಾರಾಟ ಮಾಡಲು ನಾರಾಯಣಗಂಜ್‌ನ ಫಾರ್ಮ್‌ವೊಂದರಲ್ಲಿ ಇರಿಸಲಾಗಿದೆ. ‘ಟ್ರಂಪ್’ ಹೆಸರಿನ ಕೋಣದ ತೂಕ ಸುಮಾರು ೭೦೦ ಕೆ.ಜಿ ಎಂದು ಹೇಳಲಾಗುತ್ತಿದೆ. ಈ ಕೋಣದ ವಿಶೇಷತೆಯೆಂದರೆ, ಮುಖದ ಮೇಲಿರುವ ಹೊಂಬಣ್ಣದ ಕೂದಲು ಟ್ರಂಪ್ ಅವರ ಪ್ರಸಿದ್ಧ ಕೇಶವಿನ್ಯಾಸವನ್ನು ನೆನಪಿಸುತ್ತದೆ.
ಈ ಕೋಣ ಪ್ರಸಿದ್ಧಿ ಪಡೆದಿರುವುದರಿಂದ ಮಾಲೀಕ ಜಿಯಾವುದ್ದೀನ್ ಅತ್ಯಂತ ಸಂತೋಷವಾಗಿದ್ದಾನೆ. ತನ್ನ ಸಹೋದರ ಕೋಣದ ವಿಶಿಷ್ಟ ರೂಪವನ್ನು ಗಮನಿಸಿ ಅದಕ್ಕೆ ‘ಟ್ರಂಪ್’ ಎಂದು ಹೆಸರಿಟ್ಟನು, ಹಾಗೆಯೇ ಮತ್ತೊಂದು ಕೋಣಕ್ಕೆ ‘ನೆತನ್ಯಾಹು’ ಎಂದು ಹೆಸರಿಡಲಾಯಿತು ಎಂದು ಅವನು ಹೇಳಿದ್ದಾನೆ. ‘ಟ್ರಂಪ್’ ಕೋಣವು ಅತ್ಯಂತ ಶಾಂತ ಮತ್ತು ವಿನಮ್ರ ಸ್ವಭಾವದ್ದಾಗಿದೆ, ಇದು ಡೊನಾಲ್ಡ್ ಟ್ರಂಪ್ ಅವರ ಸ್ವಭಾವಕ್ಕೆ ವಿಪರೀತವಾಗಿದೆ.
‘ನೆತನ್ಯಾಹು’ ಕೋಣದ ಕೋಪದ ನಡವಳಿಕೆಯು ಇಸ್ರೇಲ್ ಪ್ರಧಾನಿಯವರ ವ್ಯಕ್ತಿತ್ವಕ್ಕೆ ಹೋಲಿಕೆಯಾಗುವುದರಿಂದ ಕೋಣಕ್ಕೆ ಆ ಹೆಸರು ಇಡಲಾಗಿದೆ ಎಂದು ಜಿಯಾವುದ್ದೀನ್ ಹೇಳುತ್ತಾರೆ. ಟ್ರಂಪ್ ಹೆಸರಿನ ಕೋಣವು ಈಗಾಗಲೇ ೩ ಲಕ್ಷದ ೮೫ ಸಾವಿರ ಟಕ್ಕಾಗಳಿಗೆ (ಬಾಂಗ್ಲಾದೇಶಿ ಕರೆನ್ಸಿ – ಅಂದರೆ ಸುಮಾರು ೩ ಲಕ್ಷ ಭಾರತೀಯ ರೂಪಾಯಿಗಳು) ಮಾರಾಟವಾಗಿದೆ.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!