ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿನ ‘ಕಾರ್ಪೊರೇಟ್ ಜಿಹಾದ್’ ಮತ್ತು ಮತಾಂತರದ ಸಂಚನ್ನು ತಡೆಯಿರಿ !

ಹಿಂದೂ ಜನಜಾಗೃತಿ ಸಮಿತಿಯಿಂದ ಜಯಪುರದಲ್ಲಿ ಮುಖ್ಯಮಂತ್ರಿ ಭಜನ ಲಾಲ ಶರ್ಮಾ ರವರ ಹೆಸರಿನಲ್ಲಿ ಆಡಳಿತಕ್ಕೆ ಮನವಿ

ಜಯಪುರ (ರಾಜಸ್ಥಾನ) – ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಹಿಂದೂ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸುವ ಮಾನಸಿಕತೆ ಮತ್ತು ಸಂಘಟಿತ ‘ಕಾರ್ಪೊರೇಟ್ ಜಿಹಾದ್’ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಜಯಪುರ ಆಡಳಿತದ ಮೂಲಕ ಮುಖ್ಯಮಂತ್ರಿ ಭಜನ ಲಾಲ ಶರ್ಮಾ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿತು. ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಬೆಳಕಿಗೆ ಬಂದ ಹೃದಯವಿದ್ರಾವಕ ಘಟನೆಗಳನ್ನು ಉಲ್ಲೇಖಿಸಿದ ಸಮಿತಿಯು, ಕಾರ್ಪೊರೇಟ್ ಜಗತ್ತಿನಲ್ಲಿ ಹಿಂದೂ ಮಹಿಳೆಯರನ್ನು ಶೋಷಿಸುವುದು, ಅವರಿಗೆ ಬಲವಂತವಾಗಿ ನಮಾಜ್ ಮಾಡಲು ಮತ್ತು ಗೋಮಾಂಸ ತಿನ್ನಲು ಒತ್ತಾಯಿಸುವುದು ಒಂದು ದೊಡ್ಡ ‘ಧಾರ್ಮಿಕ ಭಯೋತ್ಪಾದನೆ’ಯ ಭಾಗವಾಗಿದೆ, ಇದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿತು.

ಸಮಿತಿಯು ಜಯಪುರದ ಜಿಲ್ಲಾಧಿಕಾರಿಗಳಾದ ಸಂದೇಶ ನಾಯಕರವರ ಮೂಲಕ ಜಯಪುರ ಮತ್ತು ಇಡೀ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿಯೂ ಇಂತಹ ಘಟನೆಗಳ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕು ಎಂದು ಕೋರಿದೆ. ಹಾಗೆಯೇ ಸರಕಾರವು ಸಂಸ್ಥೆಗಳಲ್ಲಿ ‘ಧಾರ್ಮಿಕ ತಾರತಮ್ಯ ವಿರೋಧಿ ತಪಾಸಣೆ’ಯನ್ನು ಪ್ರಾರಂಭಿಸಬೇಕು ಮತ್ತು ಮಹಿಳೆಯರ ಸಹಾಯಕ್ಕಾಗಿ ವಿಶೇಷ ಸಹಾಯವಾಣಿಯನ್ನು ಸಿದ್ಧಪಡಿಸಬೇಕು, ಇದರಿಂದಾಗಿ ಸಂತ್ರಸ್ತೆಯರು ಯಾವುದೇ ಭಯವಿಲ್ಲದೆ ದೂರು ದಾಖಲಿಸಬಹುದು ಎಂದು ಆಗ್ರಹಿಸಿತು. ‘ಕಾರ್ಪೊರೇಟ್’ನ ಹೆಸರಿನಲ್ಲಿ ಹಿಂದೂ ಮಹಿಳೆಯರ ಶೋಷಣೆ ಮತ್ತು ಮತಾಂತರದ ಆಟ ಈಗ ನಿಲ್ಲಬೇಕು ಎಂದು ಸಮಿತಿಯು ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜಸ್ಥಾನದ ಸಂಯೋಜಕರಾದ ಶ್ರೀ. ಆನಂದ ಜಖೋಟಿಯಾ, ಸಮಿತಿಯ ಶುಭ್ರಾ ಭಾರ್ಗವ; ಭಾರತ ರಕ್ಷಾ ಮಂಚ್‌ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ. ಲಕ್ಷ್ಮೀನಾರಾಯಣ ಶರ್ಮಾ; ಹಿಂದೂ ಜಾಗರಣ ಮಂಚ್‌ ನ ವಿಭಾಗೀಯ ಸದಸ್ಯರಾದ ನ್ಯಾಯವಾದಿ ರಾಜಕುಮಾರ, ಜಿಲ್ಲಾ ಕಾನೂನು ಮುಖ್ಯಸ್ಥರಾದ ಡ್ಯಾನಿ ಮಿಶ್ರಾ, ಮಹಿಳಾ ಸಹ-ಸಂಯೋಜಕಿಯಾದ ನ್ಯಾಯವಾದಿ ಅನುಪಮಾ ಚತುರ್ವೇದಿ; ‘ಶ್ರುತಿ-ಸ್ಮೃತಿ ಅನುಸಂಧಾನ ಫೌಂಡೇಶನ್’ನ ಸಂಸ್ಥಾಪಕರಾದ ಶ್ರೀ. ಸಿದ್ಧಾರ್ಥ ಉಪಾಧ್ಯಾಯ; ‘ಸೆಂಟರ್ ಫಾರ್ ಸನಾತನ ರಿಸರ್ಚ್’ನ ಪ್ರದೇಶ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಪ್ರಕಾಶ ಶರ್ಮಾ; ಸನಾತನ ಸಂಸ್ಥೆಯ ಆಶಾ ರಾಠಿ, ಋಚಾ ಪವಾರ ಮುಂತಾದವರು ಉಪಸ್ಥಿತರಿದ್ದರು.