ಇಸ್ಲಾಂಪುರ ಈಗ ಕೃಷ್ಣನಗರ, ಬಾಬರಿ ಚೌಕ್ ಮತ್ತೆ ಜೈನ್ ಮಂದಿರ್ ಚೌಕ್ ಆಯಿತು!

ಲಾಹೋರ್ (ಇಸ್ಲಾಮಾಬಾದ್) – ಕಳೆದ ೨ ತಿಂಗಳ ಒಳಗಾಗಿ ಲಾಹೋರ್‌ನಲ್ಲಿನ ೯ ಸ್ಥಳಗಳ ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಿ, ಮತ್ತೆ ಮೂಲ ಹಿಂದೂ ಅಥವಾ ಬ್ರಿಟಿಷ್ ಪರಂಪರೆಯ ಆಧಾರಿತ ಹೆಸರುಗಳನ್ನು ಇಡಲಾಗಿದೆ. ಇದರಲ್ಲಿ ಇಸ್ಲಾಂಪುರ ಈಗ ಹಳೆಯ ಕೃಷ್ಣನಗರ ಮತ್ತು ಬಾಬರಿ ಮಸೀದಿ ಚೌಕ್ ಅನ್ನು ಹಳೆಯ ಜೈನ್ ಮಂದಿರ್ ಚೌಕ್ ಎಂಬ ಹೆಸರಿನಿಂದ ಅಧಿಕೃತವಾಗಿ ಗುರುತಿಸಲಾಗುತ್ತದೆ. ಇವುಗಳ ನಾಮಫಲಕಗಳನ್ನೂ ಸಹ ಅಳವಡಿಸಲಾಗಿದೆ. ವಿಶೇಷವೆಂದರೆ, ಈ ಬದಲಾವಣೆಯ ವಿರುದ್ಧ ಅಲ್ಲಿ ಯಾವುದೇ ಮೂಲಭೂತವಾದಿ ಸಂಘಟನೆಗಳು ಮುಂದೆ ಬರಲಿಲ್ಲ.
ನಾಮಕರಣದ ೨ನೇ ಹಂತದಲ್ಲಿ ಪಾಕಿಸ್ತಾನದ ಸಿಂಧ್ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಗಳಲ್ಲೂ ಮೂಲ ಹೆಸರುಗಳನ್ನು ಘೋಷಿಸುವ ಸಾಧ್ಯತೆಯಿದೆ. ನಗರದಲ್ಲಿ ಹೆಸರುಗಳನ್ನು ಬದಲಾಯಿಸುವ ಪ್ರಕ್ರಿಯೆಯು ೧೯೯೦ ರ ದಶಕದಲ್ಲಿ ಬಾಬರಿ ರಚನೆಯನ್ನು ಧ್ವಂಸಗೊಳಿಸಿದ ನಂತರ ನಡೆದಿತ್ತು. ಆಗ ಕೇಂದ್ರದಲ್ಲಿ ನವಾಜ್ ಶರೀಫ್, ನಂತರ ಬೆನಜೀರ್ ಮತ್ತು ಪರ್ವೇಜ್ ಮುಷರ್ರಫ್ ಅವರ ಸರಕಾರಗಳಿದ್ದವು. ಈಗ ಶರೀಫ್ ಸರಕಾರವು ಹೆಸರುಗಳನ್ನು ಬದಲಾಯಿಸಲು ನಿರ್ಧರಿಸಿದೆ. ಇದಕ್ಕೆ ಯಾವುದೇ ಜಿಹಾದಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿಲ್ಲ.
೧. ಜೈನ್ ಮಂದಿರದ ಹತ್ತಿರದ ಅನಾರ್ಕಲಿ ಪ್ರದೇಶದ ಮೌಲಾನಾ ವಾಜಿದ್ ಖಾದ್ರಿ ಅವರು, ಇಸ್ಲಾಂಗೆ ಮಂದಿರ ಅಥವಾ ಗುರುದ್ವಾರಗಳ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ನಂಬುತ್ತಾರೆ. ೧೯೯೦ ರ ದಶಕದಲ್ಲಿ ಜೈನ್ ಮಂದಿರ್ ಚೌಕ್ ಹೆಸರನ್ನು ಬದಲಾಯಿಸಿ ಬಾಬರಿ ಮಸೀದಿ ಚೌಕ್ ಎಂದು ಮಾಡಲಾಗಿತ್ತು. ಇದು ರಾಜಕೀಯ ನಿರ್ಧಾರವಾಗಿತ್ತು. ನಾವು ಇದನ್ನು ಎಂದಿಗೂ ಬಾಬರಿ ಮಸೀದಿ ಚೌಕ್ ಎಂದು ಕರೆಯಲಿಲ್ಲ. ನಮ್ಮ ಪೂರ್ವಜರು ಈ ಹಿಂದೂ ಹೆಸರುಗಳನ್ನು ಇಟ್ಟಿದ್ದರು, ಅವರೂ ಸಹ ಮುಸ್ಲಿಮರೇ ಆಗಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದರಿಂದ ಅವರ ನಿಷ್ಠೆಗೆ ಯಾವುದೇ ಧಕ್ಕೆ ಬಂದಿರಲಿಲ್ಲ.
೨. ಲಾಹೋರ್‌ನ ಬೀಕನ್‌ಹೌಸ್ ವಿಶ್ವವಿದ್ಯಾಲಯದ ಪ್ರೊ. ಸಾದ್ ಮಲಿಕ್ ಅವರು ಮಾತನಾಡಿ, ಇದು ನಿಜಕ್ಕೂ ಒಂದು ಸುಖದಾಯಕ ಬದಲಾವಣೆಯಾಗಿದೆ ಎಂದು ಹೇಳಿದರು. ನಾನು ಇದನ್ನು ಯಾವಾಗಲೂ ಲಕ್ಷ್ಮಿ ಚೌಕ್ ಎಂದೇ ಕರೆಯುತ್ತಿದ್ದೆ; ಏಕೆಂದರೆ ನನ್ನ ತಂದೆ ಇದನ್ನು ಇದೇ ಹೆಸರಿನಿಂದ ಸಂಬೋಧಿಸುತ್ತಿದ್ದರು. ಮಹಾನಗರ ಪಾಲಿಕೆಯು ತನ್ನ ದಾಖಲೆಗಳಲ್ಲಿ ಇದರ ಹೆಸರನ್ನು ಮೌಲಾನಾ ಜಾಫರ್ ಅಲಿ ಚೌಕ್ ಎಂದು ಮಾಡಿರಬಹುದು; ಆದರೆ ನನಗಾಗಿ ಮತ್ತು ನನ್ನಂತಹ ಅನೇಕರಿಗೆ ಲಕ್ಷ್ಮಿ ಚೌಕ್ ಆ ಪರಂಪರೆಯ ಭಾಗವಾಗಿದೆ, ಇದಕ್ಕೂ ಜಾಫರ್ ಅಲಿ ಖಾನ್ ಅವರ ಹೆಸರಿಗೂ ಯಾವುದೇ ಸಂಬಂಧವಿಲ್ಲ. ಲಕ್ಷ್ಮಿ ಚೌಕ್ ಎಂಬುದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಹೆಸರಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation