ಭೋಜಶಾಲೆಯಲ್ಲಿ ಹಿಂದೂಗಳಿಂದ ಪೂಜೆ-ಅರ್ಚನೆ ಪ್ರಾರಂಭ!

ದೊಡ್ಡ ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆಯುತ್ತಿದ್ದಾರೆ!

ಧಾರ್ (ಮಧ್ಯಪ್ರದೇಶ) – ಇಲ್ಲಿನ ಭೋಜಶಾಲೆಯು ‘ಕಮಾಲ್ ಮೌಲಾ ಮಸೀದಿ’ ಆಗಿರದೆ, ಹಿಂದೂಗಳ ಶ್ರೀ ವಾಗ್ದೇವಿಯ ದೇವಸ್ಥಾನವಾಗಿದೆ ಎಂದು ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ಪೀಠವು ತೀರ್ಪು ನೀಡಿದ ಮರುದಿನದಿಂದಲೇ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ದರ್ಶನಕ್ಕಾಗಿ ಇಲ್ಲಿಗೆ ಧಾವಿಸುತ್ತಿದ್ದಾರೆ. ಅವರು ಇಲ್ಲಿ ಪೂಜೆ-ಅರ್ಚನೆಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಮೇ 16ರ ಬೆಳಗ್ಗೆ ಭಕ್ತರು ಮತ್ತು ಭೋಜ ಉತ್ಸವ ಸಮಿತಿಯ ಪದಾಧಿಕಾರಿಗಳು ಈ ಆವರಣಕ್ಕೆ ತಲುಪಿದರು. ಇವರಲ್ಲಿ ಸಂರಕ್ಷಕ ವಿಶ್ವಾಸ್ ಪಾಂಡೆ, ಭೋಜಶಾಲಾ ಮುಕ್ತಿ ಯಜ್ಞದ ಸಂಯೋಜಕ ಗೋಪಾಲ್ ಶರ್ಮಾ, ಶ್ರೀಶ್ ದುಬೆ, ಕೇಶವ್ ಶರ್ಮಾ ಮತ್ತು ಅಶೋಕ್ ಜೈನ್ ಇದ್ದರು. ಎಲ್ಲರೂ ಶ್ರೀ ವಾಗ್ದೇವಿಯ ಸ್ಥಾನದ ಬಳಿ ಮತ್ತು ಯಜ್ಞಕುಂಡದ ಬಳಿ ಹೂವುಗಳನ್ನು ಅರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದರು. ಭಕ್ತರು ಹನುಮಾನ್ ಚಾಲೀಸಾವನ್ನು ಕೂಡ ಪಠಿಸಿದರು. ಸದ್ಯ ಇಡೀ ಧಾರ್ ನಗರ ಮತ್ತು ಭೋಜಶಾಲಾ ಆವರಣದ ಪರಿಸ್ಥಿತಿಯ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಭೋಜಶಾಲೆಯು ದೇವಸ್ಥಾನವಾಗಿತ್ತು, ಆಗಿದೆ ಮತ್ತು ಇರಲಿದೆ! – ಭಕ್ತರು

ದರ್ಶನದ ನಂತರ ಭಕ್ತರು ಮಾತನಾಡಿ, ಹಲವು ವರ್ಷಗಳ ನಂತರ ತಮಗೆ ಯಾವುದೇ ಅಡೆತಡೆಯಿಲ್ಲದೆ ಪೂಜೆ ಮಾಡುವ ಅವಕಾಶ ಸಿಕ್ಕಿದೆ, ಎಂದು ಹೇಳಿದರು.

ಭೋಜಶಾಲಾ ಮುಕ್ತಿ ಯಜ್ಞದ ಸಂಯೋಜಕ ಗೋಪಾಲ್ ಶರ್ಮಾ ಮಾತನಾಡಿ, ‘‘ಭೋಜಶಾಲೆಯ ಪ್ರತಿಯೊಂದು ಕಣವೂ ಇದೊಂದು ದೇವಸ್ಥಾನ ಎಂಬುದನ್ನು ತೋರಿಸುತ್ತದೆ’’ ಎಂದರು. ಮುಸ್ಲಿಂ ಪಕ್ಷದ ಮುಂದಿನ ಕಾನೂನು ಕ್ರಮದ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ಗೆ ಹೋಗಲು ಅವರಿಗೆ ಪೂರ್ಣ ಸ್ವಾತಂತ್ರ್ಯವಿದೆ; ಆದರೆ ಭೋಜಶಾಲೆಯು ದೇವಸ್ಥಾನವಾಗಿತ್ತು, ದೇವಸ್ಥಾನವಾಗಿದೆ ಮತ್ತು ಯಾವಾಗಲೂ ದೇವಸ್ಥಾನವಾಗಿಯೇ ಇರಲಿದೆ ಎಂದರು.

ಭೋಜಶಾಲೆಯ ಕಂಬಗಳ ಮೇಲೆ ಗಣೇಶನ ಆಕೃತಿ, ಗೋಡೆಗಳ ಮೇಲೆ ‘ಓಂ ನಮಃ ಶಿವಾಯ।’ ಕಂಡುಬಂದಿದೆ!

‘ಆಜ್ ತಕ್’ ಸುದ್ದಿ ವಾಹಿನಿಯ ಪತ್ರಕರ್ತರು ಇಲ್ಲಿಗೆ ತಲುಪಿದಾಗ, ಅವರಿಗೆ ಭೋಜಶಾಲೆಯ ಆವರಣದ ಒಳಗಿರುವ ಪ್ರಾಚೀನ ಕಂಬಗಳು ಮತ್ತು ಗೋಡೆಗಳ ಮೇಲೆ ಅನೇಕ ಸನಾತನ ಸಂಕೇತಗಳು ಸ್ಪಷ್ಟವಾಗಿ ಕಂಡುಬಂದವು. ಭೋಜಶಾಲೆಯಲ್ಲಿ ಒಟ್ಟು 104 ಪ್ರಾಚೀನ ಕಂಬಗಳಿದ್ದು, ಅವುಗಳ ಮೇಲೆ ವಿವಿಧ ಧಾರ್ಮಿಕ ಆಕೃತಿಗಳನ್ನು ಕೆತ್ತಲಾಗಿದೆ. ಇದರಲ್ಲಿ ಭಗವಾನ್ ಗಣೇಶನ ಆಕೃತಿ, ಗಂಟೆ, ರಿದ್ಧಿ-ಸಿದ್ಧಿಯರ ಆಕೃತಿ ಮತ್ತು ಇತರ ಸಾಂಪ್ರದಾಯಿಕ ಹಿಂದೂ ಚಿಹ್ನೆಗಳು ಸೇರಿವೆ. ಹಲವಾರು ಕಂಬಗಳ ಮೇಲಿನ ಕೆತ್ತನೆಗಳು ದೇವಸ್ಥಾನದ ವಾಸ್ತುಶಿಲ್ಪ ಶೈಲಿಯಲ್ಲಿರುವುದು ಕಂಡುಬಂದಿದೆ. ಭೋಜಶಾಲೆಯ ಗೋಡೆಗಳ ಮೇಲೆ ‘ಓಂ ನಮಃ ಶಿವಾಯ ।’ ಮತ್ತು ‘ಓಂ ಸರಸ್ವತ್ಯೈ ನಮಃ ।’ ನಂತಹ ಧಾರ್ಮಿಕ ಶಬ್ದಗಳೂ ಸ್ಪಷ್ಟವಾಗಿ ಕಂಡುಬಂದಿವೆ.

ಛಾವಣಿಯ ಮೇಲೆ ಕಮಲದ ಹೂವಿನ ಆಕೃತಿ

ಛಾವಣಿಯ ಮೇಲೆ ಕಮಲದ ಹೂವಿನ ಆಕೃತಿಯೂ ಇದ್ದು, ಇದಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಧಾರ್ಮಿಕ ಮಹತ್ವವಿದೆ. ಹಿಂದೂ ಪಕ್ಷವು, ಈ ಎಲ್ಲಾ ಸಂಕೇತಗಳು ಭೋಜಶಾಲೆಯು ಮೂಲतः ಮಾತಾ ಸರಸ್ವತಿ ದೇವಿಯ ದೇವಸ್ಥಾನವಾಗಿತ್ತು ಎಂಬುದಕ್ಕೆ ಪುರಾವೆಯಾಗಿದೆ ಎಂದು ಹೇಳಿದೆ.

ಸುಣ್ಣ ಬಳಿದು ಚಿಹ್ನೆಗಳನ್ನು ಮರೆ ಮಾಚಲಾಗಿತ್ತು!

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಈ ಸಂಕೇತಗಳು ಮತ್ತು ಆಕೃತಿಗಳನ್ನು ಉಲ್ಲೇಖಿಸಿತ್ತು. ಈ ಪ್ರದೇಶದಲ್ಲಿದ್ದ ಅನೇಕ ಚಿಹ್ನೆಗಳನ್ನು ಈ ಹಿಂದೆ ಸುಣ್ಣದ ಪದರದಿಂದ ಮುಚ್ಚಲಾಗಿತ್ತು. ನಂತರ ಸ್ವಚ್ಛತೆ ಮತ್ತು ಸಂರಕ್ಷಣೆ ಮಾಡುವಾಗ ಈ ಆಕೃತಿಗಳು ಮತ್ತು ಶಿಲಾಶಾಸನಗಳು ಮತ್ತೆ ಬೆಳಕಿಗೆ ಬಂದವು. (ಸತ್ಯವನ್ನು ಎಷ್ಟೇ ಮರೆಮಾಡಲು ಪ್ರಯತ್ನಿಸಿದರೂ, ಸಮಯ ಬಂದಾಗ ಅದು ಜಗತ್ತಿನ ಮುಂದೆ ಬಂದೇ ತೀರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ! ಅದೇ ರೀತಿ ಹಿಂದೂ ಧರ್ಮದ ಮೇಲೆ ಎಷ್ಟೇ ಕೆಸರೆರಚಾಟ ನಡೆಸಿದರೂ, ಅದನ್ನು ಮರೆಮಾಡಲು ಜಾಗತಿಕ ಆರ್ಥಿಕ ‘ಡೀಪ್ ಸ್ಟೇಟ್’ ಎಷ್ಟೇ ಪ್ರಯತ್ನಿಸಿದರೂ, ಒಂದು ದಿನ ಅದರ ದೈದೀಪ್ಯಮಾನ ತೇಜಸ್ಸು ಜಗತ್ತನ್ನು ಬೆಳಗಿಸಿಯೇ ತೀರುತ್ತದೆ. ಇದಲ್ಲದೆ ಇದು ‘ಡೀಪ್ ಸ್ಟೇಟ್’ನ ನಾಶಕ್ಕೂ ಕಾರಣವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು! ಇದಕ್ಕಾಗಿ ಹಿಂದೂಗಳೇ, ನಿಮ್ಮ ಸಾಧನೆಯನ್ನು ಹೆಚ್ಚಿಸಿ! – ಸಂಪಾದಕರು)