ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರ ನಿರ್ಣಯ
ಸಾರ್ವಜನಿಕ ಕಸಾಯಿಖಾನೆಗಳೂ ಸ್ಥಗಿತ
ಪ್ರಾಣಿಗಳ ಹತ್ಯೆಗಾಗಿ ವೈದ್ಯರ ವೈದ್ಯಕೀಯ ಪ್ರಮಾಣಪತ್ರ ಅಗತ್ಯ

ಕೋಲಕಾತಾ (ಬಂಗಾಳ) – ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದಾರೆ. ಅವರು ೧೯೫೦ ರ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಅಧಿನಿಯಮ ಮತ್ತು ೨೦೧೮ ರ ಕೋಲಕಾತಾ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ನೋಟಿಸ್ ಹೊರಡಿಸಿದ್ದಾರೆ. ಈ ಕಾನೂನನ್ನು ಉಲ್ಲಂಘಿಸಿದರೆ ೬ ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ೧ ಸಾವಿರ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಈ ನೋಟಿಸ್ ನಲ್ಲಿ, ವೈದ್ಯಕೀಯ ಪ್ರಮಾಣಪತ್ರ ವಿಲ್ಲದೆ ಯಾವುದೇ ಪ್ರಾಣಿಯ ಹತ್ಯೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಪ್ರಮಾಣಪತ್ರವನ್ನು ಕೇವಲ ನಗರಸಭೆಯ ಅಧ್ಯಕ್ಷರು, ಪಂಚಾಯತ್ ಸಮಿತಿಯ ಮುಖ್ಯಸ್ಥರು ಮತ್ತು ಒಬ್ಬ ಸರಕಾರಿ ಪಶುವೈದ್ಯರು ಸೇರಿ ನೀಡಲಿದ್ದಾರೆ. ಪ್ರಾಣಿಯು ೧೪ ವರ್ಷಕ್ಕಿಂತ ಹೆಚ್ಚಿನ ವಯಸ್ಸಿನದ್ದಾಗಿದ್ದರೆ, ಅದು ಸಂತಾನೋತ್ಪತ್ತಿಗೆ ಯೋಗ್ಯವಾಗಿಲ್ಲದಿದ್ದರೆ ಮತ್ತು ವೃದ್ಧವಾಗಿದ್ದರೆ ಮಾತ್ರ ಈ ಪ್ರಮಾಣಪತ್ರವನ್ನು ನೀಡಲಾಗುವುದು. ಅಲ್ಲದೆ ಗಾಯಗೊಂಡ ಮತ್ತು ಅಂಗವಿಕಲ ಪ್ರಾಣಿಗಳು ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ಅಸಮರ್ಥವಾಗಿರುವ ಪ್ರಾಣಿಗಳಿಗೆ ಮಾತ್ರ ಹತ್ಯೆಯ ಅನುಮತಿ ಸಿಗಲಿದೆ.
ಒಂದು ವೇಳೆ ಪ್ರಮಾಣಪತ್ರ ನೀಡಲು ನಿರಾಕರಿಸಿದರೆ, ಯಾವುದೇ ವ್ಯಕ್ತಿಯು ಪ್ರಮಾಣಪತ್ರ ರದ್ದಾದ ಸೂಚನೆ ದೊರೆತ ೧೫ ದಿನಗಳ ಒಳಗಾಗಿ ರಾಜ್ಯ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು.
ಸಾರ್ವಜನಿಕ ಕಸಾಯಿಖಾನೆಗಳ ಮೇಲೆಯೂ ನಿಷೇಧ!
ಇದರ ಜೊತೆಗೆ ಸಾರ್ವಜನಿಕ ಕಸಾಯಿಖಾನೆಗಳ ಮೇಲೂ ನಿಷೇಧ ಹೇರಲಾಗಿದೆ. ಪ್ರಾಣಿಗಳ ಹತ್ಯೆಯನ್ನು ಕೇವಲ ನಗರಸಭೆಯ ಕಸಾಯಿಖಾನೆಗಳಲ್ಲಿ ಅಥವಾ ಸ್ಥಳೀಯ ಆಡಳಿತವು ನಿಗದಿಪಡಿಸಿದ ಕಸಾಯಿಖಾನೆಗಳಲ್ಲಿ ಮಾತ್ರ ಮಾಡಲಾಗುವುದು ಎಂದು ಸರಕಾರವು ತಿಳಿಸಿದೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!