ದೆಹಲಿಯ ದೇವಸ್ಥಾನ, ಧಾಬಾ ಮತ್ತು ಸೇನಾ ನೆಲೆಗಳನ್ನು ಸ್ಫೋಟಿಸುವ ಸಂಚು

ಭೋಪಾಲ್ (ಮಧ್ಯಪ್ರದೇಶ) – ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ISI) ಜೊತೆ ಸಂಬಂಧ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮೂವರು ಯುವಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅನ್ಮೋಲ್ ರಾಯ್ (೨೪ ವರ್ಷ), ರಾಜ್‌ವೀರ್ (೨೧ ವರ್ಷ) ಮತ್ತು ವಿವೇಕ್ ಬಂಜಾರ (೧೯ ವರ್ಷ) ಬಂಧಿತರು. (ಬಂಧಿತರ ಹೆಸರುಗಳು ಹಿಂದೂ ಆಗಿವೆ. ಇದರಿಂದಾಗಿ ಅವರ ದಾರಿ ತಪ್ಪಿಸಿ, ಮತಾಂತರ ಮಾಡಿ ಅವರ ಮೂಲಕ ಜಿಹಾದಿ ಚಟುವಟಿಕೆಗಳನ್ನು ನಡೆಸುವ ಸಂಚು ರೂಪಿಸಲಾಗಿತ್ತೇ ಎಂಬ ಬಗ್ಗೆಯೂ ತನಿಖೆಯಾಗಬೇಕು! – ಸಂಪಾದಕರು). ಈ ಮೂವರು ದೆಹಲಿಯ ಐತಿಹಾಸಿಕ ದೇವಸ್ಥಾನಗಳು, ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಒಂದು ಧಾಬಾ ಮತ್ತು ಹರಿಯಾಣದ ಸೇನಾ ನೆಲೆಯನ್ನು ಸ್ಫೋಟಿಸಲು ಯೋಜಿಸಿದ್ದರು.
🚨 3 youths from Madhya Pradesh with alleged links to Pakistan’s ISI arrested by Delhi Police 🇮🇳
A shocking plot was reportedly being hatched to target a historic temple, a dhaba, and even a military base in Delhi.
Many such accused have been arrested earlier too. Strictest… pic.twitter.com/egTHN8XTmD
— Sanatan Prabhat (@SanatanPrabhat) May 11, 2026
ದೆಹಲಿಯ ವಿಶೇಷ ತನಿಖಾ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಕುಶವಾಹ ಈ ಕುರಿತು ಮಾತನಾಡಿ, “ಬಂಧಿತ ಮೂವರು ಆರೋಪಿಗಳು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರ ಮೊಬೈಲ್ ಫೋನ್‌ಗಳ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಪರಿಶೀಲಿಸಿದಾಗ ಅನುಮಾನಾಸ್ಪದ ಸಂಖ್ಯೆಗಳೊಂದಿಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ನಿರ್ದಿಷ್ಟ ಸ್ಥಳಗಳ ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿರುವುದು ಕಂಡುಬಂದಿದೆ. ಅಲ್ಲದೆ ಇವರ ಬಳಿ ಅನುಮಾನಾಸ್ಪದ ಇ-ಮೇಲ್‌ಗಳು ಸಹ ಪತ್ತೆಯಾಗಿವೆ. ಭಯೋತ್ಪಾದನಾ ಸಂಚಿನಲ್ಲಿ ಭಾಗಿಯಾಗಲು ಆರೋಪಿಗಳಿಗೆ ಯಾವ ಆಮಿಷ ತೋರಿಸಲಾಗಿತ್ತು ಅಥವಾ ಏನು ನೀಡಲಾಗಿತ್ತು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,” ಎಂದು ತಿಳಿಸಿದರು.
‘ಗ್ಯಾಂಗ್ ಬಸ್ಟ್ ಆಪರೇಷನ್ ೨.೦’ ಅಡಿಯಲ್ಲಿ ಬಯಲಾದ ಸಂಚು!
ದೆಹಲಿಯ ವಿಶೇಷ ತನಿಖಾ ದಳವು ‘ಗ್ಯಾಂಗ್ ಬಸ್ಟ್ ಆಪರೇಷನ್ ೨.೦’ (ಅಪರಾಧಿಗಳ ತಂಡಗಳನ್ನು ಮಟ್ಟಹಾಕುವ ಅಭಿಯಾನ) ಅಡಿಯಲ್ಲಿ ವಿವಿಧ ರಾಜ್ಯಗಳಿಂದ ಶಾಹಜಾದ್ ಭಟ್ಟಿ ಗುಂಪಿಗೆ ಸೇರಿದ ೯ ಶಂಕಿತರನ್ನು ಬಂಧಿಸಿತ್ತು. ಅವರ ವಿಚಾರಣೆಯ ವೇಳೆ, ಆರೋಪಿಗಳ ಪೈಕಿ ಒಬ್ಬ ದೆಹಲಿಯ ಐತಿಹಾಸಿಕ ದೇವಸ್ಥಾನವೊಂದರ ‘ರೆಕ್ಕಿ’ (ದಾಳಿಗೂ ಮುನ್ನ ನಡೆಸುವ ಪರಿಶೀಲನೆ) ನಡೆಸಿರುವುದು ಬೆಳಕಿಗೆ ಬಂದಿದೆ. ಈ ಪ್ರದೇಶದ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು. ಈಗ ಬಂಧಿತರಾಗಿರುವ ಆರೋಪಿಗಳು ದೇವಸ್ಥಾನದಲ್ಲಿ ನಿಯೋಜನೆಗೊಂಡಿರುವ ಪೊಲೀಸರು ಮತ್ತು ಅರೆಸೇನಾ ಪಡೆಗಳ ಸೈನಿಕರ ಮೇಲೆ ದಾಳಿ ನಡೆಸಿ ಭಯೋತ್ಪಾದನೆ ಹರಡುವ ಉದ್ದೇಶ ಹೊಂದಿದ್ದರು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !