ನಾಶಿಕ್: 'ಕಾರ್ಪೊರೇಟ್ ಜಿಹಾದ್' ಪ್ರಕರಣದ ಆರೋಪಿಗೆ ಆಶ್ರಯ ನೀಡಿದ ಪ್ರಕರಣ
ಮಹಾನಗರ ಪಾಲಿಕೆಯಿಂದ ನಗರಸೇವಕ ಮತೀನ್ ಪಟೇಲ್ ಗೆ ನೋಟಿಸ್ !

ಛತ್ರಪತಿ ಸಂಭಾಜಿನಗರ – ನಾಶಿಕದ ವೃತ್ತಿಪರ ಜಿಹಾದ್ ಪ್ರಕರಣದ ಮುಖ್ಯ ಸಂಶಯಿತ ಆರೋಪಿ ನಿದಾ ಖಾನ್ ಗೆ ‘ಎಐಎಂಐಎಂ’ (ಆಲ್ ಇಂಡಿಯಾ ಮಜಲಿಸ—ಇತ್ತೆಹಾದುಲ ಮುಸ್ಲಿಮೀನ ಅರ್ಥಾತ್ ಅಖಿಲ ಭಾರತೀಯ ಮುಸ್ಲಿಂ ಏಕತಾ ಸಂಘ) ಪಕ್ಷದ ನಗರಸೇವಕ ಮತೀನ್ ಪಟೇಲ್ ಆಶ್ರಯ ನೀಡಿದ್ದನು. ನಾರೇಗಾಂವನಲ್ಲಿರುವ ಆತನ ಮನೆಯಲ್ಲಿ ಆಕೆ ವಾಸವಾಗಿದ್ದಳು. ಪಟೇಲ್ ಅವರ ಮನೆ ಮತ್ತು ಬಿಸ್ಮಿಲ್ಲಾ ವಸಾಹತಿನಲ್ಲಿರುವ ಆತನ ಎರಡನೇ ಮನೆ ಹಾಗೂ ಮುಖ್ಯ ರಸ್ತೆಯಲ್ಲಿರುವ ಕಚೇರಿ ಇವೆಲ್ಲವೂ ಅನಧಿಕೃತವಾಗಿದ್ದವು. ಈ ಪ್ರಕರಣದಲ್ಲಿ ಮಹಾನಗರ ಪಾಲಿಕೆಯು ಆತನ ಆಸ್ತಿಗಳ ಮೇಲೆ ನೋಟಿಸ್ ಅಂಟಿಸಿದ್ದು, ಮೂರು ದಿನಗಳಲ್ಲಿ ತೃಪ್ತಿಕರ ಉತ್ತರ ನೀಡದಿದ್ದರೆ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ ಚಲಾಯಿಸಲಾಗುವುದೆಂದು ಹೇಳಿದೆ. ಈ ಬಗ್ಗೆ ಸರ್ಕಾರ ‘ಕಾರಣ ಕೇಳಿ’ ನೋಟಿಸ್ ಜಾರಿ ಮಾಡಿದೆ.
ಓವೈಸಿಯಿಂದ ಅಪರಾಧಿಗಳ ಸಮರ್ಥನೆ !
‘ಎಂಐಎಂ’ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಎಂದಿನಂತೆ ಮತಾಂಧ ಆರೋಪಿಗಳಾದ ನಿದಾ ಖಾನ್ ಮತ್ತು ಮತೀನ್ ಪಟೇಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. ‘ಕೇವಲ ದ್ವೇಷದಿಂದ ಆರೋಪಗಳನ್ನು ಮಾಡಲಾಗುತ್ತಿದೆ. ಬುರ್ಖಾ ಧರಿಸುವುದು ಅನಧಿಕೃತವೇ? ಬುರ್ಖಾ ಮತ್ತು ಧಾರ್ಮಿಕ ಪುಸ್ತಕಗಳನ್ನು ಇಟ್ಟುಕೊಳ್ಳುವುದು ಅಪರಾಧವೇ?’ ಎಂದು ಪ್ರಶ್ನಿಸಿ ಗೊಂದಲ ಸೃಷ್ಟಿಸಲು ಯತ್ನಿಸಿದ್ದಾರೆ. ಸುಶಿಕ್ಷಿತ ಮುಸ್ಲಿಂ ಯುವಕ-ಯುವತಿಯರನ್ನು ಗುರಿ ಮಾಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. (ಜಿಹಾದಿ ಮಾನಸಿಕತೆಯನ್ನು ಸಮರ್ಥಿಸುವ ಪಕ್ಷವನ್ನು ನಿಷೇಧಿಸುವಂತೆ ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ತಪ್ಪೇನಿದೆ? – ಸಂಪಾದಕರು).
ಮತೀನ್ ಪಟೇಲ್ ಬಂಧನದಲ್ಲಿದ್ದರೂ ಆತನ ಬೆಂಬಲಾರ್ಥವಾಗಿ ಫಲಕಗಳನ್ನು ಹಾಕಲಾಗಿದೆ. (ಇಂತಹ ಕೆಲಸ ಮಾಡುವವರನ್ನೂ ಪತ್ತೆ ಹಚ್ಚಿ ವಿಚಾರಣೆ ನಡೆಸಬೇಕು! – ಸಂಪಾದಕರು). ಕಳೆದ ತಿಂಗಳು ಶಹಾಗಂಜ್ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ತಂಡಕ್ಕೆ ಮತೀನ್ ಪಟೇಲ್ ಬೆದರಿಕೆ ಹಾಕಿದ್ದನು. (ಇಂತಹವರ ವಿರುದ್ಧ ಸಮಯೋಚಿತವಾಗಿ ಕಠಿಣ ನಿಯಂತ್ರಣ ಹೇರುವುದು ಅತ್ಯಗತ್ಯವಾಗಿದೆ! – ಸಂಪಾದಕರು).
ಮತಾಂಧೆ ನಿದಾ ಖಾನ್ ಸೇರಿದಂತೆ ಕುಟುಂಬದವರ ತೀವ್ರ ವಿಚಾರಣೆ !ಮುಖ್ಯ ಸಂಶಯಿತ ಆರೋಪಿ ನಿದಾ ಖಾನ್ ಮತ್ತು ಆಕೆಯ ತಾಯಿಯನ್ನು ಎದುರುಬದುರು ಕೂರಿಸಿ ಪೊಲೀಸರು ಒಂದೂವರೆ ಗಂಟೆಗಳ ಕಾಲ ಪ್ರಶ್ನೆಗಳ ಸುರಿಮಳೆಗರೆದರು. ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಆಕೆಗೆ ಸಹಾಯ ಮಾಡಿದವರನ್ನು ಪತ್ತೆಹಚ್ಚಲು ಪೊಲೀಸರು ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ. ನಿದಾ ತಲೆಮರೆಸಿಕೊಂಡಿದ್ದಾಗ ಆಕೆಗೆ ಆರ್ಥಿಕ ನೆರವು ನೀಡಿದವರು ಯಾರು ಮತ್ತು ಅವಳು ಯಾರ ಸಂಪರ್ಕದಲ್ಲಿದ್ದಳು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಅವಳ ತಾಯಿ, ತಂದೆ, ಸಹೋದರ ಮತ್ತು ಚಿಕ್ಕಮ್ಮನನ್ನೂ ವಿಚಾರಣೆ ನಡೆಸಿದರು. ಕುಟುಂಬದವರ ಉತ್ತರಗಳಲ್ಲಿ ವ್ಯತ್ಯಾಸವಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !