
ಪುಣೆ – ವಾರಕರಿ ಸಂಪ್ರದಾಯದ ಸಂತರು ಮತ್ತು ಮಹಾಪುರುಷರ ಬಗ್ಗೆ ಸತತವಾಗಿ ಅವಹೇಳನಕಾರಿಯಾಗಿ ಮಾತನಾಡುವ ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ವಿಕಾಸ್ ಲವಾಂಡೆ ಅವರ ಮೇಲೆ ಲೋಣಿ ಕಾಳಭೋರ್ ಪ್ರದೇಶದಲ್ಲಿ ಮೇ 10 ರಂದು ಆಕ್ರೋಶಗೊಂಡ ಹಿಂದೂಗಳು ಮಸಿ ಎರಚಿದ್ದಾರೆ.
ವಿಕಾಸ್ ಲವಾಂಡೆ ಅವರು ಬೆಳಿಗ್ಗೆ ಪ್ರವಚನಕ್ಕೆ ಹೋಗುತ್ತಿದ್ದಾಗ, ಸಂಗ್ರಾಮ ಭಂಡಾರೆ ಮತ್ತು ಅವರ ಸಹಚರರು ಅವರನ್ನು ತಡೆದರು. ಈ ಸಂದರ್ಭದಲ್ಲಿ ಲವಾಂಡೆ ಅವರು ಹಿಂದೂ ಸಂತರ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಅವರ ಮೇಲೆ ಮಸಿ ಎರಚಲಾಯಿತು. ಈ ಘಟನೆಯ ನಂತರ ಲವಾಂಡೆ ಅವರು ಲೋಣಿ ಕಾಳಭೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತರ ಅವಮಾನವನ್ನು ಸಹಿಸಲಾಗುವುದಿಲ್ಲ ! – ಆಚಾರ್ಯ ತುಷಾರ್ ಭೋಸಲೆ, ಆಧ್ಯಾತ್ಮಿಕ ಆಘಾಡಿ

ವಿಕಾಸ್ ಲವಾಂಡೆ ಅವರು ವಾರಕರಿ ಸಂಪ್ರದಾಯದ ಆಧಾರಸ್ತಂಭಗಳಾದ ಮಹಾನ್ ಸಂತರ ಬಗ್ಗೆ ಸತತವಾಗಿ ಅತ್ಯಂತ ಕೀಳು ಮಟ್ಟದಲ್ಲಿ ಟೀಕೆ ಮಾಡುತ್ತಿದ್ದ. ಮಹಾರಾಷ್ಟ್ರದಲ್ಲಿ ವ್ಯಸನಮುಕ್ತಿ ಮತ್ತು ಸಂಸ್ಕಾರದ ಕಾರ್ಯವನ್ನು ನೆಲೆಗೊಳಿಸಿದ, ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಸಂತರನ್ನು ‘ನುಸುಳುಕೋರರು’ ಎಂದು ಕರೆದು ಅವಮಾನಿಸುವ ಪಾಪವನ್ನು ಇವರು ಮಾಡಿದ್ದಾರೆ. ಇದು ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ಮಾಡಿದ ಆಘಾತವಾಗಿದೆ. ಈ ಮೂಲಕ ನಾನು ಶರದ್ ಪವಾರ್ ಅವರಿಗೆ ಮನವಿ ಮಾಡುವುದೇನೆಂದರೆ, ಈಗಲಾದರೂ ನಿಮ್ಮ ಬೆಂಬಲಿಗರನ್ನು ಹತೋಟಿಯಲ್ಲಿಡಿ ಮತ್ತು ಈ ಮಹಾರಾಷ್ಟ್ರ ಹಾಗೂ ಮಹಾರಾಷ್ಟ್ರದ ಪೂಜ್ಯ ಸಂತರನ್ನು ಅವಮಾನಿಸುವುದನ್ನು ನಿಲ್ಲಿಸಿ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!