ಆಶ್ರಯ ನೀಡಿದ್ದ ‘ಎ.ಐ.ಎಂ.ಐ.ಎಂ.’ನ ನಗರಸೇವಕ ಮತೀನ ಪಟೇಲ್ ವಶಕ್ಕೆ
ಮಾಜಿ ಸಂಸದ ಇಮ್ತಿಯಾಜ್ ಜಲೀಲ್ ಅವರ ವಿಚಾರಣೆಗೆ ಆಗ್ರಹ
(ಎ.ಐ.ಎಂ.ಐ.ಎಂ. ಎಂದರೆ ‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್’ ಅಂದರೆ ‘ಅಖಿಲ ಭಾರತ ಮುಸಲ್ಮಾನ ಏಕತಾ ಸಂಘ’)

ಛತ್ರಪತಿ ಸಂಭಾಜಿನಗರ – ನಾಸಿಕ್ ನ ‘ಟಿ.ಸಿ.ಎಸ್.’ ಮತಾಂತರ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಮತ್ತು ಕಳೆದ ೪೦ ದಿನಗಳಿಂದ ತಲೆಮರೆಸಿಕೊಂಡಿದ್ದ ನಿದಾ ಖಾನ್ ಳನ್ನು ಪೊಲೀಸರು ಕೊನೆಗೂ ಛತ್ರಪತಿ ಸಂಭಾಜಿನಗರದ ನರೇಗಾಂವ್ ಪ್ರದೇಶದ ಫ್ಲಾಟ್ ಒಂದರಲ್ಲಿ ಬಂಧಿಸಿದ್ದಾರೆ. ಆಕೆಯ ಮೊಬೈಲ್ ನಲ್ಲಿರುವ ಮಾಹಿತಿಯಿಂದ ಈ ಮತಾಂತರ ಜಾಲವು ಎಲ್ಲಿಯವರೆಗೆ ಹರಡಿದೆ ಎಂಬುದು ಈಗ ಹೊರಬರಲಿದೆ. ಇದರ ಹಿಂದೆ ವಿದೇಶದಿಂದ ಹಣದ ಪೂರೈಕೆ ಮತ್ತು ಅಂತರಾಷ್ಟ್ರೀಯ ವ್ಯವಸ್ಥೆ ಇರುವ ದಟ್ಟ ಸಂಶಯವಿದೆ. ಹಿಂದೂ ಮಹಿಳೆಯರ ಶೋಷಣೆ ಮತ್ತು ಮತಾಂತರ ಮಾಡುವ ಕ್ರೂರಿಗಳಿಗೆ ಸಹಾಯ ಮಾಡುವಲ್ಲಿ ನಿದಾ ಖಾನ್ ಪ್ರಮುಖ ಪಾತ್ರ ವಹಿಸಿದ್ದಳು.
ಬಂಧನದಿಂದ ತಪ್ಪಿಸಿಕೊಳ್ಳಲು ನಿದಾ ಖಾನ್ ತಾನು ಗರ್ಭಿಣಿ ಎಂದು ವೈದ್ಯಕೀಯ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಳು; ಆದರೆ ನ್ಯಾಯಾಲಯವು ಈ ಪ್ರಕರಣದ ಜಾಲವು ‘ಅಂತರಾಷ್ಟ್ರೀಯ ಮಟ್ಟದವರೆಗೆ ತಲುಪಿದೆ’ ಎಂದು ಹೇಳಿ ಆಕೆಯ ಜಾಮೀನನ್ನು ತಿರಸ್ಕರಿಸಿತು. ಜಾಮೀನಿಗಾಗಿ ಆಕೆ ಉಚ್ಚ ನ್ಯಾಯಾಲಯಕ್ಕೆ ಹೋಗುವ ಸಿದ್ಧತೆಯಲ್ಲಿದ್ದಳು. ದಾನಿಶ್ ಶೇಖ್ ಎಂಬಾತನ ಮೊಬೈಲ್ ಸಂಭಾಷಣೆ (ಚಾಟ್ಸ್) ಮತ್ತು ‘ಕಾಲ್ ರೆಕಾರ್ಡ್ಸ್’ ಮೂಲಕ ನಿದಾ ಸಂಭಾಜಿನಗರದಲ್ಲಿದ್ದಾಳೆ ಎಂಬುದು ಖಚಿತವಾಯಿತು. ನಾಸಿಕ್ ಅಪರಾಧ ವಿಭಾಗ, ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಒಟ್ಟಾಗಿ ಈ ಕಾರ್ಯಾಚರಣೆ ನಡೆಸಿವೆ.
ನಿದಾ ಖಾನ್ ಳಿಗೆ ಆಶ್ರಯ ನೀಡಿದ್ದ ಎಂ.ಐ.ಎಂ. ನಗರಸೇವಕ ಮತೀನ್ ಪಟೇಲ್ ವಶಕ್ಕೆ !
ಎಂ.ಐ.ಎಂ. ಪಕ್ಷದ ನಗರಸೇವಕ ಮತೀನ್ ಪಟೇಲ್ ನಿದಾ ಖಾನ್ ಳಿಗೆ ಆಶ್ರಯ ನೀಡಿರುವುದು ಸ್ಪಷ್ಟವಾಗಿದೆ. ಕೌಸರ್ ಭಾಗದಲ್ಲಿ ಮನೆ ಬಾಡಿಗೆಗೆ ಪಡೆದು ಆಕೆಗೆ ಮತ್ತು ಆಕೆಯ ಕುಟುಂಬಕ್ಕೆ ಆತ ಆಶ್ರಯ ನೀಡಿದ್ದನು. ಆದ್ದರಿಂದ ಈ ನಗರಸೇವಕನನ್ನು ಸಹ ಈ ಪ್ರಕರಣದಲ್ಲಿ ಸಹ-ಆರೋಪಿಯನ್ನಾಗಿ ಮಾಡಲಾಗಿದೆ ಮತ್ತು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಟೇಲ್ ಅವರ ವಿಚಾರಣೆಯನ್ನೂ ನಡೆಸಲಾಗಿದೆ.
ಇಮ್ತಿಯಾಜ್ ಜಲೀಲ್ ವಿಚಾರಣೆಯಾಗಬೇಕು! – ಸಂಜಯ ಶಿರಸಾಟ, ಸಚಿವ, ಶಿವಸೇನೆ
ನಿದಾ ಖಾನ್ ಸಂಭಾಜಿನಗರದ ಕೊಳಚೆ ಪ್ರದೇಶದಲ್ಲಿ ಮತ್ತು ಮಾದಕ ವಸ್ತುಗಳ ವ್ಯವಹಾರ ನಡೆಯುವ ಕಡೆ ಅಡಗಿದ್ದಳು. ಆಕೆಗೆ ‘ಎ.ಐ.ಎಂ.ಐ.ಎಂ.’ ಸಹಕರಿಸಿದೆ. ನಿದಾ ಖಾನ್ ಕೇವಲ ಒಂದು ದಾಳವಷ್ಟೇ. ಪುಣೆ, ಸಂಭಾಜಿನಗರ ಸೇರಿದಂತೆ ಎಲ್ಲೆಡೆ ಇಂತಹ ಪ್ರಕರಣಗಳು ನಡೆಯುತ್ತಿವೆ. ‘ಎ.ಐ.ಎಂ.ಐ.ಎಂ.’ನ ಇಮ್ತಿಯಾಜ್ ಜಲೀಲ್ ಅವರು ಪತ್ರಿಕಾಗೋಷ್ಠಿ ನಡೆಸಿ ಆಕೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದರು. ಅವರ ವಿಚಾರಣೆಯಾಗಬೇಕು. ನಿದಾ ಖಾನ್ ಪ್ರತಿ ಬಾರಿಯೂ ಛತ್ರಪತಿ ಸಂಭಾಜಿನಗರಕ್ಕೇ ಏಕೆ ಬರುತ್ತಿದ್ದಳು? ಈ ಹಿಂದೆಯೂ ಈ ನಗರವು ದೇಶದ್ರೋಹಿ ಚಟುವಟಿಕೆಗಳಿಗಾಗಿ ಚರ್ಚೆಯಲ್ಲಿತ್ತು. ೨೨ ರಿಂದ ೩೦ ವಯಸ್ಸಿನ ಮತಾಂಧ ಯುವಕರಿಗೆ ಇಂತಹ ಕೃತ್ಯಗಳಿಗಾಗಿ ತರಬೇತಿ ನೀಡಲಾಗುತ್ತಿದ್ದು, ಅವರಿಗೆ ಹಣ ಮತ್ತು ವಾಹನಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಪತ್ತೆ ಹಚ್ಚುವ ಅಗತ್ಯವಿದೆ.
ಪೊಲೀಸರು ಚಾಕಚಕ್ಯತೆಯಿಂದ ಬಂಧಿಸಿದರು!
ನಿದಾ ಖಾನ್ ಅಡಗಿದ್ದ ಕಟ್ಟಡವು ದುರ್ಗಮ ಪ್ರದೇಶದಲ್ಲಿತ್ತು. ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆಕೆಯ ಸ್ಥಳವನ್ನು ಪತ್ತೆಹಚ್ಚಿ ಗುಪ್ತವಾಗಿ ಕಣ್ಗಾವಲು ಇರಿಸಿದ್ದರು. ಆರೋಪಿಯ ನಿಖರವಾದ ಸ್ಥಳ ಖಚಿತವಾದ ನಂತರ, ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸರು ಗುರುತಿಸಲಾಗದ ವಾಹನಗಳನ್ನು ಬಳಸಿ ಅತ್ಯಂತ ವೇಗವಾಗಿ ಮತ್ತು ಯೋಜಿತವಾಗಿ ಆಕೆಯನ್ನು ವಶಕ್ಕೆ ಪಡೆದರು. ಜನಸಂದಣಿ ಸೇರುವ, ಮಾಹಿತಿ ಸೋರಿಕೆಯಾಗುವ ಅಥವಾ ವಾತಾವರಣ ಕೆಡುವ ಸಾಧ್ಯತೆಯಿತ್ತು. ಆದ್ದರಿಂದ ಪೊಲೀಸರು ಆಕೆಯನ್ನು ನೇರವಾಗಿ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ‘ಟ್ರಾನ್ಸಿಟ್ ರಿಮಾಂಡ್’ ಮಂಜೂರು ಮಾಡಿಸಿಕೊಂಡು ರಾತ್ರೋರಾತ್ರಿ ನಾಸಿಕ್ ಗೆ ಕರೆತಂದರು. ಪ್ರಯಾಣದ ಅವಧಿಯಲ್ಲೂ ಗೌಪ್ಯತೆಯನ್ನು ಕಾಪಾಡಿ ೧೫ ಸೆಕೆಂಡುಗಳಲ್ಲಿ ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ಬದಲಾಯಿಸಲಾಯಿತು.
ಎ.ಐ.ಎಂ.ಐ.ಎಂ. ಒಂದು ಉಗ್ರಗಾಮಿ ಪಕ್ಷ – ನಿತೇಶ ರಾಣೆ !
೨೦೪೭ ರ ಹೊತ್ತಿಗೆ ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವುದು ಈ ಜನರ ಷಡ್ಯಂತ್ರವಾಗಿದೆ. ಎಂ.ಐ.ಎಂ. ಒಂದು ಉಗ್ರಗಾಮಿ ಪಕ್ಷವಾಗಿದೆ. ಈ ಪಕ್ಷದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯ ಹಿನ್ನೆಲೆಯನ್ನು ತನಿಖೆ ಮಾಡಬೇಕು. ಇಮ್ತಿಯಾಜ್ ಜಲೀಲ್ ಅವರು ನಿದಾ ಖಾನ್ ಪರವಾಗಿ ಮಾತನಾಡುತ್ತಿದ್ದರು. ಇಮ್ತಿಯಾಜ್ ಜಲೀಲ್ ಅವರ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ. ‘ನಿದಾ ಖಾನ್ ಭಯೋತ್ಪಾದಕಿಯಲ್ಲ, ಆಕೆಯ ಮೇಲೆ ಆರೋಪಗಳನ್ನು ಹೊರಿಸಲಾಗಿದೆ’ ಎಂದು ಎಂ.ಐ.ಎಂ.ನ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein