ಬರೇಲಿ (ಉತ್ತರ ಪ್ರದೇಶ) ಯ 'ಜಿಮ್‌ನಲ್ಲಿ ಜಿಹಾದ್' ಪ್ರಕರಣ ಬಹಿರಂಗ
ಬೆತ್ತಲೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿ 50 ಲಕ್ಷ ರೂಪಾಯಿಗೆ ಬೇಡಿಕೆ!

ಬರೇಲಿ (ಉತ್ತರ ಪ್ರದೇಶ) – ಬರೇಲಿಯಲ್ಲಿ ‘ಅಲ್ಟಿಮೇಟ್ ಫಿಟ್‌ನೆಸ್ ಜಿಮ್’ ಮಾಲೀಕ ಅಕ್ರಮ್ ಬೇಗ್ ಮತ್ತು ಆತನ ಸಹೋದರ ಆಲಂ ಬೇಗ್ ಎಂಬುವವರು ಒಬ್ಬ ಸುಶಿಕ್ಷಿತ ಹಿಂದೂ ಮಹಿಳಾ ವೈದ್ಯೆಯನ್ನು ತಮ್ಮ ಜಾಲದಲ್ಲಿ ಸಿಲುಕಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಆ ಮಹಿಳಾ ವೈದ್ಯೆಯ ಬೆತ್ತಲೆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಸಂತ್ರಸ್ತೆಯಿಂದ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ. 2 ವರ್ಷಗಳ ಕಾಲ ಕಿರುಕುಳ ಮತ್ತು ಹಣದ ಲೂಟಿಯನ್ನು ಸಹಿಸಿದ ನಂತರ, ಆ ಮಹಿಳಾ ವೈದ್ಯೆ ಧೈರ್ಯ ತೋರಿ ಪೊಲೀಸರ ಮೊರೆ ಹೋಗಿದ್ದಾರೆ. ಇದರಿಂದ ಅಕ್ರಮ್ ಬೇಗ್ ಮತ್ತು ಆತನ ಸಹೋದರನ ಭೀಕರ ಸಂಚು ಬಯಲಾಗಿದೆ.
1. ಬರೇಲಿಯ ‘ಸಿವಿಲ್ ಲೈನ್ಸ್’ ಪ್ರದೇಶದಲ್ಲಿ ‘ಅಲ್ಟಿಮೇಟ್ ಫಿಟ್‌ನೆಸ್ ಜಿಮ್’ ಕಳೆದ 10 ವರ್ಷಗಳಿಂದ ನಡೆಯುತ್ತಿತ್ತು. ನಗರದ ಪ್ರತಿಷ್ಠಿತ ಮಹಿಳೆಯರು ವ್ಯಾಯಾಮಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಇವರಲ್ಲಿ ಸುಮಾರು 80 ಮಂದಿ ಹಿಂದೂ ಮಹಿಳೆಯರಿದ್ದರು. ಜಿಮ್ ಮಾಲೀಕ ಅಕ್ರಮ್ ಬೇಗ್, 40 ವರ್ಷದ ಹಿಂದೂ ಮಹಿಳಾ ವೈದ್ಯೆಗೆ ತೂಕವನ್ನು ಬೇಗನೆ ಇಳಿಸುವ ಆಮಿಷ ತೋರಿಸಿದ್ದನು.
2. ಒಂದು ವ್ಯವಸ್ಥಿತ ಸಂಚಿನ ಅಡಿಯಲ್ಲಿ ಅಕ್ರಮ್ ಬೇಗ್ ಆ ವೈದ್ಯೆಗೆ ಪ್ರತಿದಿನ ವ್ಯಾಯಾಮದ ಮೊದಲು ಒಂದು ವಿಶೇಷ ಪಾನೀಯವನ್ನು ಕುಡಿಸುತ್ತಿದ್ದನು. ಅವನು ರಹಸ್ಯವಾಗಿ ಆ ಪಾನೀಯದಲ್ಲಿ ಅಮಲು ಪದಾರ್ಥವನ್ನು (ಮತ್ತಿನ ಔಷಧಿ) ಬೆರೆಸುತ್ತಿದ್ದನು. ಪಾನೀಯ ಕುಡಿದ ತಕ್ಷಣ ವೈದ್ಯೆ ಪ್ರಜ್ಞೆ ತಪ್ಪಲಾರಂಭಿಸಿದಾಗ, ಅಕ್ರಮ್ ಬೇಗ್ ಅವರನ್ನು ಜಿಮ್‌ನ ಒಂದು ಮೂಲೆಯಲ್ಲಿದ್ದ ರಹಸ್ಯ ಕೋಣೆಗೆ ಕರೆದೊಯ್ಯುತ್ತಿದ್ದನು. ಅಲ್ಲಿಯೇ ಆತ ಒಂದು ದಿನ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದನು. ಈ ಕೃತ್ಯದಲ್ಲಿ ಅಕ್ರಮ್‌ಗೆ ಆತನ ಸಹೋದರ ಆಲಂ ಕೂಡ ಸಂಪೂರ್ಣ ಸಾಥ್ ನೀಡುತ್ತಿದ್ದನು.
3. ಈ ಆರೋಪಿಗಳ ಉದ್ದೇಶ ಕೇವಲ ಅತ್ಯಾಚಾರ ಮಾಡುವುದು ಮಾತ್ರವಾಗಿರದೆ, ಇದನ್ನು ಹಣ ಮಾಡುವ ಸಾಧನವನ್ನಾಗಿ ಮಾಡಿಕೊಂಡಿದ್ದರು. ಜಿಮ್‌ನ ಆ ರಹಸ್ಯ ಕೋಣೆಯಲ್ಲಿ ಅಕ್ರಮ್ ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸುವಾಗ, ಆತನ ಸಹೋದರ ಆಲಂ ಅಶ್ಲೀಲ ವಿಡಿಯೋ ಚಿತ್ರೀಕರಿಸುತ್ತಿದ್ದನು.
4. ಸಂತ್ರಸ್ತ ವೈದ್ಯೆಗೆ ಈ ವಿಷಯ ತಿಳಿಯುತ್ತಿದ್ದಂತೆ ಅವರು ಜಿಮ್‌ಗೆ ಹೋಗುವುದನ್ನು ನಿಲ್ಲಿಸಿದರು. ಆಗ ಅಕ್ರಮ್ ತನ್ನ ಅಸಲಿ ರೂಪ ತೋರಿಸಿದನು. ಆತ ವೈದ್ಯೆಗೆ ಅವರ ಬೆತ್ತಲೆ ವಿಡಿಯೋಗಳನ್ನು ತೋರಿಸಿ, ಸುಮ್ಮನಿರಲು 10 ಲಕ್ಷ ರೂಪಾಯಿ ಬೇಡಿಕೆಯಿಟ್ಟನು. ವೈದ್ಯೆ ಎಷ್ಟು ಹೆದರಿದ್ದರೆಂದರೆ, ಅವರು 80 ಸಾವಿರ ರೂಪಾಯಿ ನೀಡಿದರು; ಆದರೆ ಅಕ್ರಮ್‌ನ ದುರಾಸೆ ಹೆಚ್ಚುತ್ತಲೇ ಹೋಯಿತು. ನಂತರ ಅವನು 50 ಲಕ್ಷ ರೂಪಾಯಿ ಕೇಳಿದನು ಮತ್ತು ಹಣ ನೀಡದಿದ್ದರೆ ವಿಡಿಯೋವನ್ನು ಇಂಟರ್ನೆಟ್‌ನಲ್ಲಿ ವೈರಲ್ ಮಾಡುವುದಾಗಿ ಹಾಗೂ ಅವರ ಪತಿ ಮತ್ತು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು.
5. ಹಿಂದೂ ಮಹಾಸಭಾದ ನಾಯಕರು ಇದನ್ನು ‘ಜಿಮ್ ಜಿಹಾದ್’ ಎಂದು ಕರೆದಿದ್ದಾರೆ. ಜಿಮ್ ನಡೆಸುವ ಹೆಸರಿನಲ್ಲಿ ಹಿಂದೂ ಮಹಿಳೆಯರನ್ನು ಜಾಲಕ್ಕೆ ಸಿಲುಕಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
6. ಸಂತ್ರಸ್ತೆಯ ದೂರಿನ ನಂತರ ಇಬ್ಬರೂ ಆರೋಪಿಗಳಾದ ಅಕ್ರಮ್ ಬೇಗ್ (47) ಮತ್ತು ಆಲಂ ಬೇಗ್ (35) ಅವರನ್ನು ಬಂಧಿಸಲಾಗಿದೆ. ಪೊಲೀಸರು ಜಿಮ್ ಮೇಲೆ ದಾಳಿ ಮಾಡಿದಾಗ, ಅಲ್ಲಿ ಅಶ್ಲೀಲ ವಿಡಿಯೋಗಳು, ಮಾದಕ ದ್ರವ್ಯಗಳು, ಶಕ್ತಿ ವರ್ಧಕ ಔಷಧಿಗಳು, ಇಂಜೆಕ್ಷನ್ ಮತ್ತು ಸೂಜಿಗಳನ್ನು ವಶಪಡಿಸಿಕೊಳ್ಳಲಾಗಿದೆ.
7. ಅಕ್ರಮ್ ಮತ್ತು ಆತನ ಸಹೋದರ ಇನ್ನು ಅನೇಕ ಹಿಂದೂ ಮಹಿಳೆಯರನ್ನು ತಮ್ಮ ಜಾಲದಲ್ಲಿ ಸಿಲುಕಿಸಿರಬಹುದು ಮತ್ತು ಅವಮಾನದ ಭಯದಿಂದ ಅವರು ಸುಮ್ಮನಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
8. ಈ ಹಿಂದೆಯೂ ವಿವಿಧ ರಾಜ್ಯಗಳಲ್ಲಿ ‘ಜಿಮ್ ಜಿಹಾದ್’ ಮೂಲಕ ಮುಸ್ಲಿಮರು ಹಿಂದೂ ಮಹಿಳೆಯರನ್ನು ಜಾಲಕ್ಕೆ ಸಿಲುಕಿಸುವ ಘಟನೆಗಳು ನಡೆದಿವೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ