ಭದ್ರತಾ ಕಾರಣಗಳಿಗಾಗಿ ರಾಯಭಾರಿ ಕಚೇರಿ ಬಂದ್

ವಾಷಿಂಗ್ಟನ್ – ಪೇಶಾವರದಲ್ಲಿರುವ ತನ್ನ ವಾಣಿಜ್ಯ ರಾಯಭಾರಿ ಕಚೇರಿಯನ್ನು ಸಂಪೂರ್ಣವಾಗಿ ಮುಚ್ಚಲು ಅಮೆರಿಕ ನಿರ್ಧರಿಸಿದೆ. ಭದ್ರತಾ ಕಾರಣಗಳಿಗಾಗಿ ಕೈಗೊಳ್ಳಲಾದ ಈ ನಿರ್ಧಾರದಿಂದಾಗಿ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಅಮೆರಿಕದ ವಿದೇಶಾಂಗ ಸಚಿವಾಲಯವು ಇತ್ತೀಚೆಗೆ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ. ‘ಪೇಶಾವರ ಮತ್ತು ಸುತ್ತಮುತ್ತಲಿನ ಹದಗೆಟ್ಟಿರುವ ಭದ್ರತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸಿಬ್ಬಂದಿಯ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ,’ ಎಂದು ಅಮೆರಿಕಾ ಸ್ಪಷ್ಟವಾಗಿ ತಿಳಿಸಿದೆ.
US Shuts Down Consulate in Peshawar, Pakistan
Amid rising security concerns, the United States has decided to close its consulate in Peshawar.
Diplomatic and political affairs of Khyber Pakhtunkhwa will now be handled directly from the US Embassy in Islamabad
Move signals… pic.twitter.com/Xa9zpOLLGn
— Sanatan Prabhat (@SanatanPrabhat) May 6, 2026
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಎಲ್ಲಾ ರಾಜತಾಂತ್ರಿಕ ಮತ್ತು ರಾಜಕೀಯ ವ್ಯವಹಾರಗಳ ಜವಾಬ್ದಾರಿಯು ಇಲ್ಲಿಯವರೆಗೆ ಪೇಶಾವರ ರಾಯಭಾರಿ ಕಚೇರಿಯ ಮೇಲಿತ್ತು; ಆದರೆ ಇನ್ನು ಮುಂದೆ ಈ ಎಲ್ಲಾ ಕಾರ್ಯಚಟುವಟಿಕೆಗಳನ್ನು ನೇರವಾಗಿ ಇಸ್ಲಾಮಾಬಾದ್‌ನಲ್ಲಿರುವ ಮುಖ್ಯ ಅಮೆರಿಕನ್ ರಾಯಭಾರಿ ಕಚೇರಿಯಿಂದ ನಿರ್ವಹಿಸಲಾಗುವುದು. ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್‌ನಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿಗಳು ಹಿಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಅಮೆರಿಕಾ ತಿಳಿಸಿದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !