
ನವ ದೆಹಲಿ – ಕಂಪನಿಯೊಂದರ ಮೊಕದ್ದಮೆಯ ವಿಚಾರಣೆಯನ್ನು ಆದಷ್ಟು ಬೇಗ ನಡೆಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ತಿರಸ್ಕರಿಸಿತ್ತು. ಅದರ ವಿರುದ್ಧ ಸದರಿ ಕಂಪನಿಯು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಕಂಪನಿಯ ಅರ್ಜಿಯ ವಿಚಾರಣೆಯು ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ ಮತ್ತು ಜೋಯ್ ಮಾಲ್ಯ ಬಾಗ್ಚಿ ಅವರ ಪೀಠದ ಮುಂದೆ ನಡೆಯಿತು. ಉಚ್ಚ ನ್ಯಾಯಾಲಯವು ಶೀಘ್ರ ವಿಚಾರಣೆ ನಡೆಸಲು ನಿರಾಕರಿಸಿದ್ದಕ್ಕೆ ನೀಡಿದ ಕಾರಣವನ್ನು ಕೇಳಿ ಮುಖ್ಯ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು. ‘ಉಚ್ಚ ನ್ಯಾಯಾಲಯದ ಮುಂದೆ ಕಳೆದ ೧೦ ವರ್ಷಗಳಿಂದ ನ್ಯಾಯಾಧಿಕರಣಗಳ ಅನೇಕ ಪ್ರಕರಣಗಳು ಬಾಕಿ ಇರುವುದರಿಂದ ಸಂಬಂಧಿತ ಕಂಪನಿಯ ಪ್ರಕರಣವನ್ನು ಶೀಘ್ರ ವಿಚಾರಣೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಉಚ್ಚ ನ್ಯಾಯಾಲಯ ಹೇಳಿತ್ತು. ‘ನ್ಯಾಯಾಧಿಕರಣಗಳ ಮಾಧ್ಯಮದ ಮೂಲಕ ಕಂಪನಿಗಳ ನಡುವಿನ ವಿವಾದಗಳನ್ನು ಆದಷ್ಟು ಬೇಗ ಬಗೆಹರಿಸಲು ಸ್ಥಾಪಿಸಲಾದ ವ್ಯವಸ್ಥೆಯಲ್ಲಿ ಇಂತಹ ವಿಳಂಬವಾಗುತ್ತಿರುವುದಕ್ಕೆ ನಾನು ಕೇವಲ ಕಳವಳ ವ್ಯಕ್ತಪಡಿಸಬಲ್ಲೆ’ ಎಂದು ಹೇಳುತ್ತಾ ಮುಖ್ಯ ನ್ಯಾಯಾಧೀಶರು ಅರ್ಜಿದಾರರಿಗೆ ಮತ್ತೆ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೋರಲು ಅವಕಾಶ ನೀಡಿದರು.
೧. ಕಂಪನಿಗಳ ನಡುವಿನ ವಿವಾದಗಳನ್ನು ಬಗೆಹರಿಸಲು ದೇಶಾದ್ಯಂತ ನ್ಯಾಯಾಧಿಕರಣಗಳನ್ನು ನೇಮಿಸಲಾಗಿದೆ; ಆದರೆ ವರ್ಷಾನುಗಟ್ಟಲೆ ನ್ಯಾಯಾಧಿಕರಣಗಳ ಮುಂದೆ ಪ್ರಕರಣಗಳು ಬಾಕಿ ಇವೆ.
೨. ಇದರಿಂದ ಭಾರತವು ‘ಅಂತರಾಷ್ಟ್ರೀಯ ವಿವಾದ ಮುಕ್ತ ಕೇಂದ್ರ’ವಾಗುವ ಮಹತ್ವಾಕಾಂಕ್ಷೆಗೆ ಧಕ್ಕೆ ಉಂಟಾಗಿದೆ.
೩. ಜಾಗತಿಕ ಮಟ್ಟದ ಮೊದಲ ೧೦ ಕೇಂದ್ರಗಳಲ್ಲಿ ಭಾರತದ ಹೆಸರಿಲ್ಲ. ಆದೇಶಗಳ ಅನುಷ್ಠಾನವಾಗದಿರುವುದು ಎಂಬ ಕಾರಣದಿಂದ ಈ ಪಟ್ಟಿಯಲ್ಲಿ ಭಾರತದ ಹೆಸರು ಎಲ್ಲಿಯೂ ಕಾಣಿಸುತ್ತಿಲ್ಲ.
ನ್ಯಾಯಾಧಿಕರಣ ಅಂದರೇನು? ನ್ಯಾಯಾಧಿಕರಣ (ಟ್ರಿಬ್ಯೂನಲ್) ಎಂದರೆ ಒಂದು ನಿರ್ದಿಷ್ಟ ವಿವಾದವನ್ನು ಬಗೆಹರಿಸಲು ಸ್ಥಾಪಿಸಲಾದ ‘ವಿಶೇಷ ನ್ಯಾಯಾಲಯ’ ಅಥವಾ ‘ನ್ಯಾಯಾಧಿಕರಣ.’ ಇದು ಸಾಮಾನ್ಯ ನ್ಯಾಯಾಲಯಗಳಂತೆಯೇ ಕಾರ್ಯನಿರ್ವಹಿಸುತ್ತದೆ; ಆದರೆ ಅದರ ನಿಯಮಗಳು ಸ್ವಲ್ಪ ಸಡಿಲವಾಗಿರುತ್ತವೆ. ಈ ವಿಶೇಷ ನ್ಯಾಯಾಲಯಗಳು ಕೇವಲ ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುತ್ತವೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ