ಬುರ್ಖಾ ಧರಿಸಿದ ವಿದ್ಯಾರ್ಥಿನಿಗೆ ಮಾತ್ರ ಪ್ರವೇಶ
ಜನರಲ್ಲಿ ಆಕ್ರೋಶದ ಅಲೆ
(‘ನೀಟ್’ (NEET) – ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಅಂದರೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ)

ನವ ದೆಹಲಿ – ಕೆಲವು ದಿನಗಳ ಹಿಂದೆ ‘ನೀಟ್’ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಕಠಿಣ ತಪಾಸಣೆ ನಡೆಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿವೆ. ಒಂದು ವೀಡಿಯೊದಲ್ಲಿ ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿಗೆ ಪ್ರವೇಶ ನೀಡಿರುವುದು; ಆದರೆ ಮತ್ತೊಂದು ವೀಡಿಯೊದಲ್ಲಿ ತುಳಸಿಯ ಮಾಲೆ ಧರಿಸಿದ್ದ ವಿದ್ಯಾರ್ಥಿನಿಯ ಮಾಲೆಯನ್ನು ಬಲವಂತವಾಗಿ ತೆಗೆಸಿದ ಘಟನೆ ಕಂಡುಬಂದಿದೆ. ಇದರಿಂದ ಸಮಾಜದಲ್ಲಿ ಆಕ್ರೋಶದ ಅಲೆ ಎದ್ದಿದೆ. ‘ನೀಟ್’ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ಮುಂತಾದ ವೈದ್ಯಕೀಯ ಕ್ಷೇತ್ರಗಳಲ್ಲಿ ಪ್ರವೇಶ ಪಡೆಯಲು ಬರೆಯುತ್ತಾರೆ. ಮೇ ೩ ರಂದು ದೇಶಾದ್ಯಂತ ೨೦ ಲಕ್ಷ ೫ ಸಾವಿರ ವಿದ್ಯಾರ್ಥಿಗಳು ‘ನೀಟ್’ ಪರೀಕ್ಷೆ ಬರೆದಿದ್ದಾರೆ.
೧. ಮೊದಲ ವೀಡಿಯೊ ರಾಜಸ್ಥಾನದ ಬಾಡಮೇರ್ ಜಿಲ್ಲೆಯದ್ದಾಗಿದೆ. ಇದರಲ್ಲಿ ಬುರ್ಖಾ ಧರಿಸಿದ ವಿದ್ಯಾರ್ಥಿನಿಯ ಮುಖವನ್ನು ಮಾತ್ರ ಗುರುತಿಸಿ ಅವಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡಲಾಗಿದೆ.
೨. ಈ ವೀಡಿಯೊ ನೋಡಿದ ನಂತರ ಅನೇಕರು, ಇಷ್ಟು ಕಠಿಣ ತಪಾಸಣೆ ಇರುವಾಗ ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಹೇಗೆ ಅನುಮತಿ ನೀಡಲಾಗುತ್ತಿದೆ? ಎಂದು ಪ್ರಶ್ನಿಸುತ್ತಿದ್ದಾರೆ.
೩. ಮತ್ತೊಂದು ವೀಡಿಯೊ ಗುಜರಾತಿನ ಸೂರತ್ ನದ್ದಾಗಿದೆ. ಅಲ್ಲಿ ವಿದ್ಯಾರ್ಥಿನಿಯೊಬ್ಬಳು ತುಳಸಿಯ ಮಾಲೆ ಧರಿಸಿದ್ದಕ್ಕೆ ಪ್ರವೇಶ ನೀಡದ ಕಾರಣ ಸಾಕಷ್ಟು ಗೊಂದಲ ನಿರ್ಮಾಣವಾಯಿತು. ವೀಡಿಯೊದಲ್ಲಿ ವಿದ್ಯಾರ್ಥಿನಿಯ ತಂದೆಯು ಈ ಕಠಿಣ ತಪಾಸಣೆಯ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ನಾವು ಸೂರತ್ ನಲ್ಲಿದ್ದೇವೆ, ಪಾಕಿಸ್ತಾನದಲ್ಲಲ್ಲ ಎಂದೂ ಅವರು ಹೇಳಿದ್ದಾರೆ.
೪. ಇದರ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದ್ದು, ಒಂದು ಕಡೆ ಕಠಿಣ ತಪಾಸಣೆ ನಡೆಸಿ ಹಿಂದೂ ವಿದ್ಯಾರ್ಥಿಗಳು ಬಳಸುವ ಹಿಂದೂ ಧರ್ಮದ ಸಂಕೇತಗಳನ್ನೂ ಬಿಡುತ್ತಿಲ್ಲ. ಆದರೆ ಮತ್ತೊಂದೆಡೆ ಮುಸಲ್ಮಾನ ವಿದ್ಯಾರ್ಥಿನಿಗೆ ಬುರ್ಖಾದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತಿದೆ. ವಾಸ್ತವವಾಗಿ ‘ನೀಟ್’ ಪರೀಕ್ಷೆಯಲ್ಲಿ ಹಿಜಾಬ್ ಗೆ ಅನುಮತಿಯಿದೆ; ಆದರೆ ಬುರ್ಖಾಗೆ ಇಲ್ಲ.
೩. ಮೂರನೇ ವೀಡಿಯೊ ರಾಜಸ್ಥಾನದ ಸೀಕರ್ ಪ್ರದೇಶದ್ದಾಗಿದೆ. ಇದರಲ್ಲಿ ಅಭ್ಯರ್ಥಿಗಳ ಪೈಜಾಮದ ನಾಡ ಮತ್ತು ಸರಪಳಿಯನ್ನೂ ಕತ್ತರಿಸಿ ತೆಗೆಯಲಾಗಿದೆ. ಇದರ ನಂತರವೇ ಅವರಿಗೆ ಪ್ರವೇಶ ನೀಡಲಾಯಿತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!