
ಮುಂಬಯಿ – ಬಂಗಾಳದ ವಿಜಯವು ಕೇವಲ ಒಂದು ರಾಜ್ಯದ ವಿಜಯವಲ್ಲ. ಭಾರತದೊಳಗಿನ ನುಸುಳುವಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳಂತಹ ಎಲ್ಲಾ ಅಪಾಯಗಳಿಂದ ಭಾರತವನ್ನು ರಕ್ಷಿಸುವ ವಿಜಯ ಇದಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ ಅವರು ಹೇಳಿಕೆ ನೀಡಿದ್ದಾರೆ. ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ಯಶಸ್ಸಿನ ಕುರಿತು ಭಾಜಪದ ಪ್ರದೇಶ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಸಭೆಯಲ್ಲಿ ಮುಖ್ಯಮಂತ್ರಿಗಳು ಮೇಲಿನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭಾಜಪದ ಪ್ರದೇಶಾಧ್ಯಕ್ಷ ರವೀಂದ್ರ ಚವಾಣ ಸೇರಿದಂತೆ ಇತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Victory in Bengal Protects the Nation from Infiltration & Terrorism! – Maharashtra CM Devendra Fadnavis
“Bengal saw decades of Congress, Left, and Trinamool rule. Once India’s industrial powerhouse, it descended into ‘Jungle Raj’ under Mamata Banerjee.
The people have now… pic.twitter.com/jCUSdIw0RT
— Sanatan Prabhat (@SanatanPrabhat) May 4, 2026
ಮುಖ್ಯಮಂತ್ರಿ ದೇವೇಂದ್ರ ಫಡಣವಿಸ ಅವರು, ಹಿಂದೆ ಬಂಗಾಲದಲ್ಲಿ ೩೦ ವರ್ಷ ಕಾಂಗ್ರೆಸ್, ೩೬ ವರ್ಷ ಎಡಪಕ್ಷಗಳು ಮತ್ತು ೧೫ ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್ ಸರಕಾರ ಇತ್ತು. ಒಂದು ಕಾಲದಲ್ಲಿ ಬಂಗಾಳವು ದೇಶದ ಮೊದಲ ಕೈಗಾರಿಕಾ ಕೇಂದ್ರವಾಗಿತ್ತು; ಆದರೆ ಮಮತಾ ಬ್ಯಾನರ್ಜಿ ಅವರ ಕಾಲದಲ್ಲಿ ಬಂಗಾಳದಲ್ಲಿ ಜಂಗಲ್‌ರಾಜ್ ನಿರ್ಮಾಣವಾಯಿತು. ಜನತೆಯು ಮತಪೆಟ್ಟಿಗೆಯ ಮೂಲಕ ಜಂಗಲ್ ರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಸುರಕ್ಷತೆಗಾಗಿ ಬಂಗಾಳದ ವಿಜಯವು ಅತ್ಯಂತ ಮಹತ್ವದ್ದಾಗಿದೆ, ಎಂದು ಹೇಳಿದರು.
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !