ದೇಶದ 5 ರಲ್ಲಿ 3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಜಯಭೇರಿ !
ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತ್ತೆ ಭಾಜಪ ಅಧಿಕಾರಕ್ಕೆ
ಕೇರಳಮ್ದಲ್ಲಿ ಕಮ್ಯುನಿಸ್ಟರ ಮತ್ತು ತಮಿಳುನಾಡಿನಲ್ಲಿ ಹಿಂದೂದ್ವೇಷಿ ಡಿಎಂಕೆ ಸೋಲು
ತಮಿಳುನಾಡಿನಲ್ಲಿ ನಟ ಜೋಸೆಫ್ ವಿಜಯ ಅವರ ಟಿ.ವಿ.ಕೆ ಪಕ್ಷಕ್ಕೆ ಮೊದಲ ಚುನಾವಣೆಯಲ್ಲಿಯೇ ಬಹುಮತ
ಕೇರಳಮ್ದಲ್ಲಿ ಕಾಂಗ್ರೆಸ್‌ಗೆ ಬಹುಮತ

ನವದೆಹಲಿ – ದೇಶದ ಅಸ್ಸಾಂ, ಬಂಗಾಳ, ಪುದುಚೇರಿ, ತಮಿಳುನಾಡು ಮತ್ತು ಕೇರಳಮ್ ಈ 5 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4 ರಂದು ಪ್ರಕಟವಾಗಿದೆ. ಇದರಲ್ಲಿ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಭಾಜಪ ಅಧಿಕಾರ ಉಳಿಸಿಕೊಂಡರೆ, ಬಂಗಾಳದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಿ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ.
Bengal had been an anti-Indian epitome of 4Ms !
1 M (Mamata) has been defeated !
Yet
Marx,
M#$li.$,
and
M|ss|on@ry
are the real threats…!The BJP government has to handle them for the reversal of Bengal which is already on the verge of becoming Western Bangladesh.… pic.twitter.com/LkTW29l7A5
— Sanatan Prabhat (@SanatanPrabhat) May 4, 2026
ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಅವರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ – ದ್ರಾವಿಡ ಪ್ರಗತಿ ಸಂಘ) ಪಕ್ಷವನ್ನು ಸೋಲಿಸಿ, ನಟ ಜೋಸೆಫ್ ವಿಜಯ ಅವರ ಟಿವಿಕೆ (ತಮಿಳಗ ವೆಟ್ರಿ ಕಳಗಂ – ತಮಿಳುನಾಡು ವಿಜಯ ಮಹಾಸಂಘ) ಪಕ್ಷವು ತನ್ನ ಮೊದಲ ಚುನಾವಣೆಯಲ್ಲಿಯೇ ಬಹುಮತ ಸಾಧಿಸಿದೆ. ಕೇರಳಮ್ ದಲ್ಲಿ ಕಮ್ಯುನಿಸ್ಟರ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್.ಡಿ.ಎಫ್ – ಎಡ ಪ್ರಜಾಸತ್ತಾತ್ಮಕ ರಂಗ) ಅನ್ನು ಸೋಲಿಸಿ ಕಾಂಗ್ರೆಸ್‌ನ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯು.ಡಿ.ಎಫ್ – ಸಂಯುಕ್ತ ಪ್ರಜಾಸತ್ತಾತ್ಮಕ ರಂಗ) ಬಹುಮತ ಪಡೆದಿದೆ. ಕಮ್ಯುನಿಸ್ಟರ ಈ ಸೋಲಿನಿಂದಾಗಿ ದೇಶದಲ್ಲಿ ಎಲ್ಲೂ ಕಮ್ಯುನಿಸ್ಟರ ಅಧಿಕಾರವಿಲ್ಲದಂತಾಗುವ ಘಟನೆ ಮೊದಲ ಬಾರಿಗೆ ನಡೆದಿದೆ.
#ElectionResult_2026
Change of guard in Bengal as Mamata Banerjee’s era, known for minority appeasement, comes to an end.Bengal sees a major shift as Trinamool Congress’s rule comes to an end, signaling a significant change in the state’s political landscape.
– BJP wins 3 out… pic.twitter.com/6xqeeSrPxc
— Sanatan Prabhat (@SanatanPrabhat) May 4, 2026
| ರಾಜ್ಯ : ಬಂಗಾಲ | ಒಟ್ಟು ಸ್ಥಾನ : 293 | ರಾಜ್ಯ : ಆಸ್ಸಾಂ | ಒಟ್ಟು ಸ್ಥಾನ : 126 | |
| BJP | 200 | BJP | 100 | |
| TMC | 87 | Congress | 22 | |
| CP(M) | 2 | Others | 4 | |
| Others | 4 | |||
| ರಾಜ್ಯ : ಕೇರಳಮ್ | ಒಟ್ಟು ಸ್ಥಾನ : 140 | ರಾಜ್ಯ : ಪುದ್ದುಚೆರಿ | ಒಟ್ಟು ಸ್ಥಾನ : 30 | |
| UDF | 101 | BJP | 18 | |
| LDF | 34 | Congress | 8 | |
| BJP | 3 | Others | 4 | |
| Others | 2 |
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸೋಲುವುದು ಖಚಿತವಿತ್ತು ! – ಬಾಬರಿ ಮಸೀದಿ ಕಟ್ಟಲು ಯತ್ನಿಸಿದ್ದ ಹುಮಾಯೂನ್ ಕಬೀರ್ ಹೇಳಿಕೆ

ಆಮ್ ಜನತಾ ಉನ್ನಯನ್ ಪಾರ್ಟಿಯ ಸಂಸ್ಥಾಪಕ ಹುಮಾಯೂನ್ ಕಬೀರ್ ಅವರು ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಕ್ಕಾಗಿ ಬಂಗಾಳದ ಜನತೆಯನ್ನು ಅಭಿನಂದಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಪತ್ರಕರ್ತರೊಂದಿಗೆ ಮಾತನಾಡಿದ ಹುಮಾಯೂನ್ ಕಬೀರ್, ಏನಾಯಿತೋ ಅದು ಒಳ್ಳೆಯದೇ ಆಯಿತು. ಇದು ಆಗಲೇಬೇಕಿತ್ತು ಎಂದರು. ಮಮತಾ ಬ್ಯಾನರ್ಜಿ ಮೂರು ಬಾರಿ ಮುಖ್ಯಮಂತ್ರಿಯಾದರು ಮತ್ತು ತಮ್ಮ ಸೋದರಳಿಯನಿಗೆ ಅಪಾರ ಅಧಿಕಾರ ನೀಡಿದರು. ಅವರು ಜನರಿಗೆ ಮೋಸ ಮಾಡಿದರು ಮತ್ತು ಹಣ ಲೂಟಿ ಮಾಡಿದರು. ಬ್ರಿಟಿಷರು 100 ರಿಂದ 200 ವರ್ಷಗಳಲ್ಲಿ ಮಾಡಿದ ಲೂಟಿಯನ್ನೂ ಅವರು 15 ವರ್ಷಗಳಲ್ಲಿ ಮೀರಿಸಿದ್ದಾರೆ.
ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ನಿರ್ಮಾಣದ ವಿಚಾರವಾಗಿ ಹುಮಾಯೂನ್ ಕಬೀರ್ ಅವರನ್ನು ತೃಣಮೂಲ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು. ಅವರು ಚುನಾವಣೆಯಲ್ಲಿ ರೆಜಿನಗರ ಮತ್ತು ನೌದಾ ಎರಡೂ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಎರಡೂ ಕ್ಷೇತ್ರಗಳನ್ನು ಗೆಲ್ಲುವುದಾಗಿ ಕಬೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಸನ್ಸೋಲ್‌ನಲ್ಲಿ (ಬಂಗಾಳ) ತೃಣಮೂಲ ಕಾಂಗ್ರೆಸ್ ಕಚೇರಿ ಧ್ವಂಸ !
ಅಸನ್ಸೋಲ್ ಭಾಗದ ತೃಣಮೂಲ ಕಾಂಗ್ರೆಸ್ ಕಚೇರಿಯಲ್ಲಿ ದಾಂಧಲೆ ನಡೆದಿದೆ. ಕಚೇರಿ ಬಳಿಯಿದ್ದ ವಾಹನಗಳು, ಕುರ್ಚಿಗಳು ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಲಾಗಿದೆ. ಭಾಜಪ ಮತ್ತು ತೃಣಮೂಲ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದರಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಅಸ್ಸಾಂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್ ಸೋಲು !

ಅಸ್ಸಾಂನ ಜೋರ್ಹತ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೌರವ್ ಗೊಗೊಯ್ ಸೋಲು ಕಂಡಿದ್ದಾರೆ. ಗೌರವ್ ಗೊಗೊಯ್ ಕಾಂಗ್ರೆಸ್‌ನ ಅಸ್ಸಾಂ ರಾಜ್ಯಾಧ್ಯಕ್ಷರು ಮತ್ತು ಲೋಕಸಭಾ ಸಂಸದರಾಗಿದ್ದಾರೆ. ಈ ಕ್ಷೇತ್ರದಲ್ಲಿ ಭಾಜಪ ಅಭ್ಯರ್ಥಿ ಹಿತೇಂದ್ರ ನಾಥ್ ಗೋಸ್ವಾಮಿ 20 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ.
ತಮಿಳುನಾಡಿನಲ್ಲಿ ಹಿಂದೂದ್ವೇಷಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಲಿನ ಛಾಯೆಯಲ್ಲಿ !
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಡಿಎಂಕೆ ಸರಕಾರದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ ಎಣಿಕೆಯಲ್ಲಿ ಹಿನ್ನಡೆಯಲ್ಲಿದ್ದರೆ, ಅವರ ಪುತ್ರ ಉದಯನಿಧಿ ಸ್ಟಾಲಿನ್ ಕೂಡ ಆರಂಭಿಕ ಹಂತದಲ್ಲಿ ಹಿನ್ನಡೆಯಲ್ಲಿದ್ದರು. ನಂತರ ಅವರು ಅಲ್ಪ ಮುನ್ನಡೆ ಸಾಧಿಸಿದ್ದರು. ಹಾಗೆಯೇ ಡಿಎಂಕೆ ಸರಕಾರದ 34 ಸಚಿವರ ಪೈಕಿ 31 ಸಚಿವರು ಹಿನ್ನಡೆಯಲ್ಲಿದ್ದಾರೆ. 2023 ರಲ್ಲಿ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳಿಗೆ ಹೋಲಿಸಿದ್ದರು. ವಿವಾದ ಭುಗಿಲೆದ್ದಾಗ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮುಂದೆ ಬಂದು ತಮ್ಮ ಮಗನನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !