
ಮುಂಬಯಿ – ಎಂ.ಕೆ. ಸ್ಟಾಲಿನ್ ಈಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸ್ವಂತ ಕ್ಷೇತ್ರದಲ್ಲಿಯೇ ಅವರ ಸೋಲಾಗಿದೆ. ಅವರ ಮಗ ಉದಯನಿಧಿ ಸ್ಟಾಲಿನ್ ಸೆಪ್ಟೆಂಬರ್ 2023 ರಲ್ಲಿ ಸನಾತನ ಧರ್ಮವನ್ನು ಮುಗಿಸುವ (ನಿರ್ಮೂಲನೆ ಮಾಡುವ) ಹೇಳಿಕೆ ನೀಡಿದ್ದರು. ಸನಾತನ ಧರ್ಮವು ಡೆಂಗ್ಯೂ ಮತ್ತು ಮಲೇರಿಯಾ ರೋಗಗಳಂತಿದೆ ಎಂದು ಅವರು ಹೇಳಿದ್ದರು! ಇದರ ಮೂಲಕ ಅವರು ಸನಾತನ ಧರ್ಮವನ್ನು ತೀವ್ರವಾಗಿ ಅವಮಾನಿಸಿದ್ದರು. ಇದರ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿತು. ಇಂದು ತಮಿಳುನಾಡಿನ ಎಲ್ಲ ಸನಾತನ ಧರ್ಮೀಯ ಬಂಧು-ಭಗಿನಿಯರು ಸನಾತನ ಧರ್ಮದ ಸಂಘಟಿತ ಶಕ್ತಿಯನ್ನು ಈ ಸ್ಟಾಲಿನ್ ಕುಟುಂಬಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್ ಅವರು ತಮಿಳುನಾಡು ಚುನಾವಣಾ ಫಲಿತಾಂಶದ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.
ಶ್ರೀ. ವರ್ತಕ್ ಅವರು ಮುಂದುವರಿದು, ಸಾಮಾನ್ಯವಾಗಿ ಸನಾತನ ಸಂಸ್ಥೆಯು ಯಾವುದೇ ರೀತಿಯ ರಾಜಕೀಯ ವಿದ್ಯಮಾನಗಳ ಕುರಿತು ಹೇಳಿಕೆ ನೀಡುವುದಿಲ್ಲ, ಆದರೆ ಸನಾತನ ಧರ್ಮೀಯರ ಬಗ್ಗೆ ಈ ಕುಟುಂಬ ಮತ್ತು ಡಿಎಂಕೆ ಪಕ್ಷವು ಒಂದು ನಿಲುವನ್ನು ತೆಗೆದುಕೊಂಡಿದ್ದರಿಂದ ಇಂದು ನಾವು ಇದರ ಬಗ್ಗೆ ಖಂಡಿತವಾಗಿ ಪ್ರತಿಕ್ರಿಯೆ ನೀಡಬೇಕೆನಿಸುತ್ತಿದೆ ಎಂದರು. ತಮಿಳುನಾಡಿನ ಧರ್ಮಪ್ರೇಮಿ ಜನತೆಯನ್ನು ನಾವು ಅಭಿನಂದಿಸುತ್ತೇವೆ!
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!