ಕೆನಡಾದ ಗುಪ್ತಚರ ಇಲಾಖೆಯ ವರದಿಯ ಮಾಹಿತಿ!
ಚೀನಾ, ರಷ್ಯಾ ಮತ್ತು ಭಾರತದಿಂದ ಬೇಹುಗಾರಿಕೆ ನಡೆಯುತ್ತಿದೆ ಎಂದು ದಾವೆ

ಓಟಾವಾ (ಕೆನಡಾ) – ಕೆನಡಾದ ಭದ್ರತಾ ಗುಪ್ತಚರ ಇಲಾಖೆಯು 2025ರ ವಾರ್ಷಿಕ ವರದಿಯನ್ನು ಸಂಸತ್ತಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಖಲಿಸ್ತಾನಿ ಬೆಂಬಲಿಗರಿಂದ ಕೆನಡಾದ ಭದ್ರತೆಗೆ ಅಪಾಯ ಉಂಟಾಗಿದೆ ಎಂದು ಒಪ್ಪಿಕೊಳ್ಳಲಾಗಿದೆ. ಚೀನಾ, ರಷ್ಯಾ ಮತ್ತು ಭಾರತವು ಬೇಹುಗಾರಿಕೆ ಮೂಲಕ ಕೆನಡಾದ ಆಂತರಿಕ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಈ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳು,
1. ಖಲಿಸ್ತಾನಿಗಳಿಂದ ಹಿಂಸಾತ್ಮಕ ಕೃತ್ಯಗಳಿಗೆ ಪ್ರಚೋದನೆ!
ಕೆನಡಾದಲ್ಲಿ ಸಕ್ರಿಯವಾಗಿರುವ ಖಲಿಸ್ತಾನಿ ಬೆಂಬಲಿಗರ ಚಟುವಟಿಕೆಗಳು ನಿರಂತರವಾಗಿ ಹಿಂಸಾತ್ಮಕ ಉಗ್ರಗಾಮಿ ಕಾರ್ಯಸೂಚಿಗೆ ಪ್ರಚೋದನೆ ನೀಡುತ್ತಿವೆ. ಕಳೆದ ವರ್ಷ ಏರ್ ಇಂಡಿಯಾ ಫ್ಲೈಟ್ 182 ಬಾಂಬ್ ಸ್ಫೋಟಕ್ಕೆ 40 ವರ್ಷಗಳು ತುಂಬಿದವು. ಈ ಪ್ರಕರಣದ ಶಂಕಿತರು ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುಂಪುಗಳ ಸದಸ್ಯರಾಗಿದ್ದರು. ಕೆನಡಾದ ಇತಿಹಾಸದಲ್ಲಿ ಇದು ಇದುವರೆಗಿನ ಅತಿದೊಡ್ಡ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗಿದೆ, ಇದರಲ್ಲಿ 329 ಜನರು ಮೃತಪಟ್ಟಿದ್ದರು ಹಾಗೂ ಅವರಲ್ಲಿ ಬಹುತೇಕರು ಕೆನಡಾದ ನಾಗರಿಕರಾಗಿದ್ದರು.
2. ಉಗ್ರಗಾಮಿ ಗುಂಪುಗಳ ಚಟುವಟಿಕೆಗಳಿಂದ ಅಪಾಯ!
ಭಯೋತ್ಪಾದಕ ಗುಂಪುಗಳ ಚಟುವಟಿಕೆಗಳು ಕೆನಡಾದ ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಗೆ ನಿರಂತರವಾಗಿ ಅಪಾಯವನ್ನುಂಟು ಮಾಡುತ್ತಿವೆ. ಇವರಲ್ಲಿ ಕೆಲವರು ಕೆನಡಾದ ಸಂಸ್ಥೆಗಳನ್ನು ಬಳಸಿಕೊಂಡು ಹಿಂಸಾತ್ಮಕ ಕಾರ್ಯಸೂಚಿಯನ್ನು ಮುಂದುವರಿಸುತ್ತಾರೆ ಹಾಗೂ ಸಮುದಾಯದಿಂದ ಹಣವನ್ನು ಸಂಗ್ರಹಿಸುತ್ತಾರೆ. ಮುಂದೆ ಈ ಹಣವನ್ನು ಹಿಂಸಾತ್ಮಕ ಚಟುವಟಿಕೆಗಳಿಗಾಗಿ ಬಳಸಲಾಗುತ್ತದೆ.
3. ಚೀನಾ, ರಷ್ಯಾ, ಭಾರತ, ಇರಾನ್, ಪಾಕಿಸ್ತಾನ ಮೊದಲಾದವುಗಳ ಮೇಲೆ ಆರೋಪ!
ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಚೀನಾ, ರಷ್ಯಾ, ಭಾರತ, ಇರಾನ್, ಪಾಕಿಸ್ತಾನ ಹಾಗೂ ಇತರ ಕೆಲವು ದೇಶಗಳು ಕೆನಡಾದ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿವೆ.
ಭಾರತವು ಕೆನಡಾದ ನಾಯಕರು, ಪತ್ರಕರ್ತರು ಮತ್ತು ಭಾರತೀಯ ಮೂಲದ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಇದರಿಂದ ಕೆನಡಾದಲ್ಲಿ ಗಡಿಯಾಚೆಗಿನ ದಬ್ಬಾಳಿಕೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಸರಕಾರದ ಮೇಲಿನ ಟೀಕೆಗಳನ್ನು ಹತ್ತಿಕ್ಕುವುದು ಮತ್ತು ಸಮುದಾಯದಲ್ಲಿ ಭಯವನ್ನು ಉಂಟುಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ.
4. ಕಾರ್ನಿ ಪ್ರಧಾನಿಯಾದ ನಂತರ ಭಾರತದೊಂದಿಗಿನ ಸಂಬಂಧದಲ್ಲಿ ಸುಧಾರಣೆ!
ಪ್ರಧಾನಿ ಮಾರ್ಕ್ ಕಾರ್ನಿ ಅವರು ಅಧಿಕಾರ ವಹಿಸಿಕೊಂಡ ನಂತರ ಕೆನಡಾದ ಅಧಿಕಾರಿಗಳು, ಭಾರತವು ಪ್ರಸ್ತುತ ಕೆನಡಾದ ಭೂಪ್ರದೇಶದಲ್ಲಿ ಯಾವುದೇ ಹಿಂಸಾತ್ಮಕ ಅಪರಾಧ ಅಥವಾ ಬೆದರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ರಾಯಲ್ ಕೆನೇಡಿಯನ್ ಮೌಂಟೆಡ್ ಪೊಲೀಸ್ ಮುಖ್ಯಸ್ಥ ಮೈಕ್ ಡ್ಯುಹೆಮ್ ಅವರು ಕೂಡ, ಕೆನಡಾಕ್ಕೆ ಯಾವುದೇ ವಿದೇಶಿ ಏಜೆಂಟ್‌ಗಳಿಂದ ನೇರ ಅಪಾಯವಿರುವುದು ಸಾಬೀತಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು