ಶೈಕ್ಷಣಿಕ ಕ್ಷೇತ್ರದಲ್ಲಿ ಸನಾತನದ ಯುವ ಸಾಧಕರ ಯಶಸ್ಸು

ಶ್ರೀ. ದೇವೀಶ್‌ ರೈ ಇವರು ಸಿ.ಬಿ.ಎಸ್‌.ಸಿ ಯ ೧೦ ನೇಯ ತರಗತಿಯಲ್ಲಿ ಶೇ. ೯೭.೮ ರಷ್ಟು ಅಂಕ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿನ ಪ್ರತಿಷ್ಠಿತ ಬಂಟ್ವಾಳ ರಘುರಾಮ ಮುಕುಂದ ಪ್ರಭು ಶಾಲೆಯ ವಿದ್ಯಾರ್ಥಿ ಶ್ರೀ. ದೇವೀಶ ರೈ ಇವನು ಸಿ.ಬಿ.ಎಸ್‌.ಸಿ.ಯ ೧೦ ನೇಯ ತರಗತಿಯಲ್ಲಿ ಶೇ. ೯೭.೮ ರಷ್ಟು ಅಂಕ ಪಡೆದಿದ್ದಾನೆ. ಧರ್ಮಪ್ರೇಮಿ ಸುರೇಶ ರೈ ಮತ್ತು ಸೌ. ಆಶಾ ಇವರ ಪುತ್ರನಾಗಿದ್ದಾನೆ. ದೇವೀಶ ಇವರು ನಿರಂತರ ಧರ್ಮಶಿಕ್ಷಣಕ್ಕೆ ಬರುತ್ತಿದ್ದರು, ನಾಮಜಪವನ್ನು ಸಹ ಮಾಡುತ್ತಾರೆ.


ಶಿವಮೊಗ್ಗದ ಶ್ರೀ. ಶ್ರೀಸಮರ್ಥ ಇವರು ೧೦ ನೆಯ ತರಗತಿಯಲ್ಲಿ ಶೇ. ೯೭.೬ ರಷ್ಟು ಅಂಕ

ಸನಾತನದ ಯುವ ಸಾಧಕ ಶ್ರೀ. ಶ್ರೀಸಮರ್ಥ ಸಂಪೇಪನೆ ಇವನು ೧೦ನೇ ತರಗತಿಯಲ್ಲಿ ಶೇ. ೯೭.೬ ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ‘ರಾಷ್ಟ್ರೋತ್ಥಾನ ವಿದ್ಯಾಲಯ’ ಶಾಲೆಯಲ್ಲಿ ವ್ಯಾಸಾಂಗ ಮಾಡಿದ ಇವರು ಕನ್ನಡ ಶೇ. ೧೦೦, ಸಮಾಜ ವಿಜ್ಞಾನದಲ್ಲಿ ಶೇ.೧೦೦ ಆಂಗ್ಲದಲ್ಲಿ ಶೇ. ೯೪, ಹಿಂದಿಯಲ್ಲಿ ಶೇ. ೯೯, ಗಣಿತದಲ್ಲಿ ಶೇ. ೯೩, ವಿಜ್ಞಾನದಲ್ಲಿ ಶೇ. ೯೯ ರಷ್ಟು ಅಂಕ ಪಡೆದಿದ್ದಾರೆ. ಸನಾತನದ ಸಾಧಕರಾದ ಶ್ರೀ. ಶಿವಶಂಕರ ಮತ್ತು ಸೌ. ಬನಶಂಕರಿಯವರ ಸುಪುತ್ರನಾಗಿದ್ದು ‘ಶ್ರೀಸಮರ್ಥ ಇವನು ವಿಧ್ಯಾಭ್ಯಾಸದ ಜೊತೆಗೆ ಸಾಂದರ್ಭಿಕ ಸೇವೆಯನ್ನು ಮಾಡುತ್ತಿದ್ದು ದೇವರ ಮತ್ತು ಶ್ರೀಗುರುಗಳ ಕೃಪೆಯಿಂದ ನಾನು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಫಲಿತಾಂಶಗಳನ್ನು ಪಡೆದುಕೊಂಡೆನು ಎಂದಿದ್ದಾನೆ’, ಎಂದರು.


ಶ್ರೀ. ಜ್ಞಾನ, ಎಚ್. ಪಿಜಕಳ ಇವರು ೧೦ ನೆಯ ತರಗತಿಯಲ್ಲಿ ಶೇ. ೯೪.೭೫ ರಷ್ಟು ಅಂಕ

ಪುತ್ತೂರು : ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಯಾದ ಶ್ರೀ. ಜ್ಞಾನ ಎಚ್. ಪಿಜಕಳ ಇವನು ಹತ್ತನೇ ತರಗತಿಯಲ್ಲಿ ಶೇ. ೯೪.೭೫ ರಷ್ಟು ಅಂಕ ಪಡೆದಿದ್ದಾನೆ. ಶ್ರೀ. ಹರೀಶ ಪಿಜಕಳ ಮತ್ತು ಸಾಧಕಿ ಸೌ. ನವೀನಾ ಪಿಜಕಳ ಇವರ ಪುತ್ರನಾಗಿರುವ ಶ್ರೀ. ಜ್ಞಾನ ಪಿಜಕಳ ಇವನು ಯಾವುದೇ ಹೊರಗಿನ ಖಾಸಗಿ ಕಲಿಕಾ ವರ್ಗಕ್ಕೆ ಹೋಗದೆ ಶಾಲೆಯಲ್ಲಿ ಕಲಿಸಿದ್ದನ್ನು ಶ್ರದ್ಧೆಯಿಂದ ಕಲಿತು ಈ ಯಶಸ್ಸು ಗಳಿಸಿದ್ದಾನೆ.


ನಿಶಾಂತ್ ಆರ್ ಪೂಜಾರಿ ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೯೨ ಅಂಕ ಗಳಿಸಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ನಿಶಾಂತ್ ಆರ್ ಪೂಜಾರಿ ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೯೨ ಅಂಕ ಗಳಿಸಿದ್ದಾರೆ. ಧರ್ಮಪ್ರೇಮಿ ಶ್ರೀ.ರಮೇಶ ಮತ್ತು ಸನಾತನದ ಸಾಧಕಿಯದ ಸೌ. ಪುಷ್ಪಾ ಇವರ ಪುತ್ರನಾಗಿದ್ದಾನೆ.

 


ಬಂಟ್ವಾಳದ ಕು. ಹಂಶಿಕ ಪೂಜಾರಿ ಇವಳು ೧೦ ನೆಯ ತರಗತಿಯಲ್ಲಿ ಶೇ. ೮೦ ರಷ್ಟು ಅಂಕ ಪಡೆದಿದ್ದಾಳೆ

ಬಂಟ್ವಾಳದ -ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ಸಜೀಪಮೂಡ ಶಾಲೆಯ ವಿದ್ಯಾರ್ಥಿನಿ ಕು. ಹಂಶಿಕ ಪೂಜಾರಿ ಇವಳು ೧೦ ನೆಯ ತರಗತಿಯಲ್ಲಿ ಶೇ. ೮೦ ರಷ್ಟು ಅಂಕ ಪಡೆದಿದ್ದಾಳೆ. ಸನಾತನದ ಸಾಧಕ ಶ್ರೀ. ಸೋಮಶೇಖರ ಪೂಜಾರಿ ಮತ್ತು ಸೌ. ಬಬಿತ ಅವರ ಪುತ್ರಿಯಾಗಿರುವ ಕು.ಹಂಶಿಕ ಸಾಂದರ್ಭಿಕ ಸೇವೆಯನ್ನು ಮಾಡುತ್ತಿದ್ದಾಳೆ.


ದಕ್ಷಿಣ ಕನ್ನಡ ಜಿಲ್ಲೆಯ ಕು. ವೈ ಜಿ. ಪೂರ್ವಿ ಇವಳು ಸಿ.ಬಿ.ಎಸ್‌.ಸಿ ಯ ೧೦ ನೇಯ ತರಗತಿಯಲ್ಲಿ ಶೇ. ೭೦ ರಷ್ಟು ಅಂಕ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಇಲ್ಲಿನ ಪ್ರತಿಷ್ಠಿತ ಬಂಟ್ವಾಳ ರಘುರಾಮ ಮುಕುಂದ ಪ್ರಭು ಶಾಲೆಯ ವಿದ್ಯಾರ್ಥಿನಿ ಕು. ವೈ ಜಿ. ಪೂರ್ವಿ ಇವಳು ಸಿ.ಬಿ.ಎಸ್‌.ಸಿ ಯ ೧೦ ನೇಯ ತರಗತಿಯಲ್ಲಿ ಶೇ. ೭೦% ರಷ್ಟು ಅಂಕ ಪಡೆದಿದ್ದಾಳೆ. ಸನಾತನದ ಸಾಧಕರಾದ ಶ್ರೀ. ಯೋಗೀಶ ಮತ್ತು ಸನಾತನದ ಸಾಧಕಿಯಾದ ಸೌ. ಗೀತಾ ಯೋಗೀಶ ಇವರ ಪುತ್ರಿಯಾಗಿರುವ ಕು. ವೈ. ಜಿ. ಪೂರ್ವಿ ಜವಾಬ್ದಾರಿ ತೆಗೆದುಕೊಂಡು ಯುವ ಸತ್ಸಂಗ, ಬಾಲ ಸಂಸ್ಕಾರವರ್ಗ ತೆಗೆದುಕೊಳ್ಳುತ್ತಿದ್ದಾರೆ.