
ನವ ದೆಹಲಿ – ರಾಜಧಾನಿಯ ರಸ್ತೆಗಳಲ್ಲಿ ಅಲೆದಾಡುವ ಹಸುಗಳು ಮತ್ತು ಅವುಗಳ ದಯನೀಯ ಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ದೆಹಲಿಯ ರೇಖಾ ಶರ್ಮಾ ಆಡಳಿತವು ಒಂದು ಶ್ಲಾಘನೀಯ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಅಡಿಯಲ್ಲಿ ಗೋಶಾಲೆಗಳನ್ನು ದೆಹಲಿಯ ‘ರಿಜ್’ ಪ್ರದೇಶದ ಹಸಿರು ಕಾಡುಗಳಿಗೆ ಜೋಡಿಸಲಾಗುವುದು. ‘ದೆಹಲಿ ರಿಜ್’ ಎಂಬುದು ದೆಹಲಿ ಹತ್ತಿರವಿರುವ ಅರಾವಳಿ ಪರ್ವತ ಶ್ರೇಣಿಗಳ ಸಮೀಪವಿರುವ ಅರಣ್ಯ ಪ್ರದೇಶವಾಗಿದೆ. ೭ ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ಹಸಿರು ವಲಯವನ್ನು ‘ದೆಹಲಿಯ ಶ್ವಾಸಕೋಶ’ ಎಂದೂ ಕರೆಯಲಾಗುತ್ತದೆ. ನಗರದ ವಿಪರೀತ ಜನಸಂದಣಿ ಮತ್ತು ಸಂಚಾರ ದಟ್ಟಣೆಯಿಂದ ದೂರವಿರುವ ಒಂದು ನೈಸರ್ಗಿಕ ಹಾಗೂ ಮುಕ್ತ ವಾತಾವರಣದಲ್ಲಿ ಹಸುಗಳಿಗೆ ಆಶ್ರಯ ನೀಡುವುದು, ಇದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ವಾತಾವರಣವು ಅವುಗಳ ಆರೋಗ್ಯಕ್ಕೆ ಅತ್ಯಂತ ಪೂರಕವಾಗಿರುತ್ತದೆ. ಆದ್ದರಿಂದ ‘ರಿಜ್’ ಪ್ರದೇಶದಲ್ಲಿ ಗೋಶಾಲೆಗಳನ್ನು ನಿರ್ಮಿಸಲಾಗುವುದು, ಎಂದು ದೆಹಲಿ ಆಡಳಿತವು ಸ್ಪಷ್ಟಪಡಿಸಿದೆ.
ಹೊಸ ಗೋಶಾಲೆಗಳ ನಿರ್ಮಾಣಕ್ಕಾಗಿ ದೆಹಲಿಯ ೧೩ ಜಿಲ್ಲೆಗಳಲ್ಲಿ ಭೂಮಿಯನ್ನು ಸರಕಾರ ಈ ಹಿಂದೆಯೇ ಆಯ್ಕೆ ಮಾಡಿದೆ. ಈ ಕೇಂದ್ರಗಳು ಕೇವಲ ಹಸುಗಳ ಆಶ್ರಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ; ಬದಲಾಗಿ ಅವು ಸ್ವಯಂಪೂರ್ಣ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಬೇಕು, ಇದಕ್ಕಾಗಿ ಅಲ್ಲಿ ಪಶುವೈದ್ಯಕೀಯ ಸೇವೆಗಳು, ಸೌರಶಕ್ತಿ ವ್ಯವಸ್ಥೆ ಮತ್ತು ಬಯೋಗ್ಯಾಸ್ ಯೋಜನೆಗಳಂತಹ ಆಧುನಿಕ ಸೌಲಭ್ಯಗಳನ್ನೂ ಲಭ್ಯ ಮಾಡಿಕೊಡಲಾಗುವುದು.
ಮುಖ್ಯಮಂತ್ರಿ ರೇಖಾ ಶರ್ಮಾ ಅವರು ನಮೂದಿಸಿದರೇನೆಂದರೆ, ಈ ಹಿಂದೆ ಗೊಬ್ಬರದ (ಸಗಣಿಯ) ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಹಸುವಿನ ಸಗಣಿಯು ಒಳಚರಂಡಿಗಳಲ್ಲಿ ಹರಿದು ಹೋಗುತ್ತಿತ್ತು ಮತ್ತು ಕೊನೆಗೆ ಯಮುನಾ ನದಿಯ ನೀರಿನಲ್ಲಿ ಸೇರುತ್ತಿತ್ತು. ಈ ಸಮಸ್ಯೆಯನ್ನು ಬಿಡಿಸಲು ಈಗ ೬ ಬಯೋಗ್ಯಾಸ್ ಯೋಜನೆಗಳನ್ನು ಸ್ಥಾಪಿಸಲಾಗುವುದು. ಈ ಯೋಜನೆಗಳು ಪ್ರತಿದಿನ ಸುಮಾರು ಒಂದೂವರೆ ಸಾವಿರ ಟನ್ ಸಗಣಿಯ ಮೇಲೆ ಪ್ರಕ್ರಿಯೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ಉಪಕ್ರಮಗಳಿಗಾಗಿ ಅಗತ್ಯವಿರುವ ನಿಧಿಯನ್ನು ವಿತರಿಸಲಾಗಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !