೨೦೨೨ ರ ನಂತರದ ಅತ್ಯಂತ ಹೆಚ್ಚಿನ ಏರಿಕೆ!

ನವ ದೆಹಲಿ – ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ ೧೨೫ ಡಾಲರ್ (ಸುಮಾರು ೧೨ ಸಾವಿರ ರೂಪಾಯಿ) ಗಳಷ್ಟು ಆಗಿದೆ. ಅಮೆರಿಕಾ-ಇರಾನ್ ಯುದ್ಧದ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ೨೦೨೨ ರ ನಂತರ ಕಚ್ಚಾ ತೈಲವು ತಲುಪಿದ ಅತ್ಯುನ್ನತ ಮಟ್ಟ ಇದಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಲ್ಲಿ ನಿರ್ಮಾಣವಾಗಿರುವ ಬಿಕ್ಕಟ್ಟು, ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ, ಹಾಗೂ ಇರಾನ್‌ನ ಬಂದರುಗಳ ಮೇಲೆ ಅಮೆರಿಕಾದಿಂದ ನಡೆಯುತ್ತಿರುವ ದಿಗ್ಬಂಧನ ಮುಂತಾದ ಕಾರಣಗಳಿಂದಾಗಿ ಈ ಭಾರಿ ಏರಿಕೆ ಉಂಟಾಗಿದೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಹಾರ್ಮುಜ್ ಜಲಸಂಧಿ’ಯನ್ನು (ಸ್ಟ್ರೇಟ್ ಆಫ್ ಹಾರ್ಮುಜ್) ಮತ್ತೆ ತೆರೆಯುವ ಕುರಿತಾದ ಇರಾನ್‌ನ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಎಲ್ಲಿಯವರೆಗೆ ಒಂದು ಸಮಗ್ರ ಪರಮಾಣು ಒಪ್ಪಂದವಾಗುವುದಿಲ್ಲವೋ, ಅಲ್ಲಿಯವರೆಗೆ ಈ ದಿಗ್ಬಂಧನ ಮುಂದುವರಿಯಲಿದೆ ಎಂದು ಟ್ರಂಪ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಫೆಬ್ರವರಿ ೨೮ ರಂದು ಅಮೆರಿಕಾ ಮತ್ತು ಇಸ್ರೇಲ್ ಗಳು ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯ ನಂತರ, ಇರಾನ್ ಕೊಲ್ಲಿ ಪ್ರದೇಶದ ‘ಸ್ಟ್ರೇಟ್ ಆಫ್ ಹಾರ್ಮುಜ್’ ಮಾರ್ಗವಾಗಿ ನಡೆಯುವ ಎಲ್ಲಾ ಸಮುದ್ರ ಸಂಚಾರವನ್ನು ಸ್ಥಗಿತಗೊಳಿಸಿದೆ; ಇದರಲ್ಲಿ ಕೇವಲ ತನ್ನದೇ ಹಡಗುಗಳಿಗೆ ಮಾತ್ರ ವಿನಾಯಿತಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಈ ತಿಂಗಳಿನಿಂದ ಇರಾನ್ ಹಡಗುಗಳ ದಿಗ್ಬಂಧನವನ್ನು ಪ್ರಾರಂಭಿಸಿದೆ. ಅಮೆರಿಕಾದ ದಿಗ್ಬಂಧನವು ಹೀಗೆಯೇ ಮುಂದುವರಿದರೆ, ಇರಾನ್‌ನ ರಫ್ತಿನ ಮೇಲಿನ ನಿರ್ಬಂಧಗಳಿಂದಾಗಿ ಜಾಗತಿಕ ಪೂರೈಕೆ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳಬಹುದು.
ಕಚ್ಚಾ ತೈಲದ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಭಾರತೀಯ ರೂಪಾಯಿ ಮೌಲ್ಯದಲ್ಲಿ ಐತಿಹಾಸಿಕ ಕುಸಿತ ಉಂಟಾಗಿದೆ. ಡಾಲರ್ ನ ತುಲನೆಯಲ್ಲಿ ರೂಪಾಯಿ ೧೧ ಪೈಸೆಗಳಷ್ಟು ದುರ್ಬಲಗೊಂಡಿದ್ದು, ರೂಪಾಯಿ ೯೫ ರ ಗಡಿ ದಾಟಿದೆ. ತೈಲದ ಬೆಲೆಗಳಲ್ಲಿನ ಈ ಸತತ ಏರಿಕೆಯು ಭಾರತದ ಮೇಲೆಯೂ ನೇರ ಪರಿಣಾಮ ಬೀರುತ್ತಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!