೨೦೧೨ ರಿಂದ ೨,೯೦೦ ಕೋಟಿ ರೂಪಾಯಿಗಳ ಅನುದಾನ ಬಾಕಿ !
ಶ್ರೀ. ಪ್ರೀತಮ ನಾಚಣಕರ್, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ

ಮುಂಬಯಿ, ಏಪ್ರಿಲ್ ೩೦ (ಸುದ್ದಿ) – ಶಿಕ್ಷಣ ಹಕ್ಕು (ರೈಟ್ ಟು ಎಜುಕೇಶನ್) ಕಾಯಿದೆಯಡಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗಳಲ್ಲಿ ಶೇ. ೨೫% ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಅಥವಾ ವಂಚಿತ ವರ್ಗದ ವಿದ್ಯಾರ್ಥಿಗಳಿಗಾಗಿ ಮೀಸಲಿಡುವುದು ಕಡ್ಡಾಯವಾಗಿದೆ. ‘ಈ ಮೀಸಲು ಸೀಟುಗಳ ಮರುಪಾವತಿಯನ್ನು (ಅನುದಾನದ ಮೊತ್ತ) ಸರಕಾರವು ನೀಡಬೇಕೆಂದು ಈ ಕಾಯಿದೆಯಲ್ಲಿ ಹೇಳಲಾಗಿದೆ. ಸರಕಾರವು ವಿದ್ಯಾರ್ಥಿಗಳಿಗಾಗಿ ಶೇ. ೨೫% ರಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸಿದೆ; ಆದರೆ ಮರುಪಾವತಿ ಮೊತ್ತವನ್ನು ನೀಡಲು ಮಾತ್ರ ಸರಕಾರ ಹಿಂದೇಟು ಹಾಕುತ್ತಿದೆ. ೨೦೧೨ ರಿಂದ ರಾಜ್ಯದ ಶಿಕ್ಷಣ ಸಂಸ್ಥೆಗಳ ೨,೯೦೦ ಕೋಟಿ ರೂಪಾಯಿ ಮರುಪಾವತಿ ಹಣವನ್ನು ಸರಕಾರ ಬಾಕಿ ಉಳಿಸಿಕೊಂಡಿದೆ.
ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಅನುದಾನರಹಿತ ಶಾಲೆಗಳ ಮೀಸಲು ಸೀಟುಗಳ ಮಾನದಂಡಕ್ಕೆ ಒಳಪಡುವ ರಾಜ್ಯದಲ್ಲಿ ೮,೭೦೧ ಶಾಲೆಗಳಿವೆ. ಅವುಗಳಲ್ಲಿ ವಿದ್ಯಾರ್ಥಿಗಳಿಗಾಗಿ ೧ ಲಕ್ಷದ ೧೪ ಸಾವಿರದ ೮೨೬ ಸೀಟುಗಳು ಮೀಸಲಾಗಿವೆ. ವರ್ತಮಾನ ಸ್ಥಿತಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ೧೭,೬೭೦ ರೂಪಾಯಿಗಳ ಅನುದಾನವನ್ನು ನಿಗದಿಪಡಿಸಲಾಗಿದೆ. ಸಂಬಂಧಿತ ಶಿಕ್ಷಣ ಸಂಸ್ಥೆಗಳು ಈ ವಿದ್ಯಾರ್ಥಿಗಳ ಮಾಹಿತಿಯನ್ನು ಸರಕಾರಕ್ಕೆ ಆನ್ ಲೈನ್ ಮೂಲಕ ಸಲ್ಲಿಸುತ್ತವೆ ಮತ್ತು ಅದರಂತೆ ಅನುದಾನದ ಮೊತ್ತವನ್ನು ನಿರ್ಧರಿಸಲಾಗುತ್ತದೆ.
ಮರುಪಾವತಿಯ ಮೊತ್ತ ೭೫೦ ಕೋಟಿ, ನಿಧಿ ಮಾತ್ರ ೨೨೦ ಕೋಟಿ ರೂಪಾಯಿ ! – ಶಿಕ್ಷಣ ಇಲಾಖೆ

ಕೇಂದ್ರ ಸರಕಾರದಿಂದ ಶಿಕ್ಷಣ ಇಲಾಖೆಯ ಒಟ್ಟು ನಿಧಿಯಲ್ಲಿ ಶೇ. ೨% ರಷ್ಟು ಮೊತ್ತವನ್ನು ‘ಆರ್.ಟಿ.ಇ.’ ಅಡಿಯಲ್ಲಿ ಮರುಪಾವತಿಗಾಗಿ ನೀಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಒಟ್ಟು ವಿದ್ಯಾರ್ಥಿಗಳ ಮರು ಪಾವತಿಗಾಗಿ ವರ್ಷಕ್ಕೆ ಸುಮಾರು ೭೫೦ ಕೋಟಿ ರೂಪಾಯಿಗಳು ಬೇಕಾಗುತ್ತವೆ; ಆದರೆ ಈ ವರ್ಷದ ಬಜೆಟ್ ನಲ್ಲಿ ೨೨೦ ಕೋಟಿ ರೂಪಾಯಿಗಳನ್ನು ಮಾತ್ರ ಮಂಜೂರು ಮಾಡಲಾಗಿದೆ. ಪ್ರತಿ ವರ್ಷ ಬಜೆಟ್ ನಲ್ಲಿ ಶಿಕ್ಷಣ ಸಂಸ್ಥೆಗಳ ಮರುಪಾವತಿಗಾಗಿ ಸರಾಸರಿ ೨೦೦ ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಒಟ್ಟು ಮರುಪಾವತಿಗೆ ಹೋಲಿಸಿದರೆ ನೀಡಲಾಗುತ್ತಿರುವ ಮೊತ್ತವು ಅತ್ಯಲ್ಪವಾಗಿರುವುದರಿಂದ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳ ಮರುಪಾವತಿ ಮೊತ್ತವು ಬಾಕಿ ಉಳಿಯುತ್ತಿದೆ.
ಇತರ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಶುಲ್ಕದ ಹೊರೆ !
ಯಾವುದೇ ಶಿಕ್ಷಣ ಸಂಸ್ಥೆಯನ್ನು ನಡೆಸಲು ಶಿಕ್ಷಕರು ಮತ್ತು ಸಿಬ್ಬಂದಿಯ ವೇತನ, ಮೂಲಭೂತ ಸೌಕರ್ಯಗಳು, ಶೈಕ್ಷಣಿಕ ಸಾಮಗ್ರಿಗಳು ಮುಂತಾದವುಗಳಿಗಾಗಿ ದೊಡ್ಡ ಪ್ರಮಾಣದ ನಿಧಿಯ ಅಗತ್ಯವಿರುತ್ತದೆ. ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಮತ್ತು ದೇಣಿಗೆಗಳು ಶಿಕ್ಷಣ ಸಂಸ್ಥೆಗಳ ನಿಧಿಯ ಮೂಲಗಳಾಗಿವೆ. ಸರಕಾರದಿಂದ ಮರುಪಾವತಿಯ ಮೊತ್ತವು ದೊರೆಯದಿದ್ದರೂ ಸಹ, ಸಂಸ್ಥೆಯನ್ನು ನಡೆಸಲು ಬೇರೆ ವ್ಯವಸ್ಥೆ ಮಾಡಿಕೊಳ್ಳುವುದನ್ನು ಹೊರತುಪಡಿಸಿ ಪರ್ಯಾಯ ದಾರಿಯಿರುವುದಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಈ ಆರ್ಥಿಕ ಹೊರೆಯನ್ನು ಇತರ ವಿದ್ಯಾರ್ಥಿಗಳ ಮೇಲೆ ಹೊರಿಸುವ ಮೂಲಕ ಅವರಿಂದ ಹೆಚ್ಚಿನ ಪ್ರವೇಶ ಶುಲ್ಕ ಮತ್ತು ದೇಣಿಗೆಯನ್ನು ಪಡೆಯುತ್ತವೆ. ಕೆಲವು ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಸಕ್ಷಮವಾಗಿರುತ್ತವೆ, ಇನ್ನು ಕೆಲವು ವಾಣಿಜ್ಯ ಉದ್ದೇಶದಿಂದ ಕೆಲಸ ಮಾಡುತ್ತವೆ; ಆದರೆ ಆರ್ಥಿಕವಾಗಿ ದುರ್ಬಲವಾಗಿರುವ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
ಸುಳ್ಳು ಮಾಹಿತಿಯ ಆಧಾರದ ಮೇಲೆ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಲು ಪ್ರಯತ್ನ !
ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ದೊರೆತರೆ ‘ಆರ್.ಟಿ.ಇ.’ ಅಡಿಯಲ್ಲಿ ಶೇ. ೨೫% ರಷ್ಟು ಮೀಸಲು ಸೀಟುಗಳ ನಿಯಮದಿಂದ ವಿನಾಯಿತಿ ಸಿಗುತ್ತದೆ. ಆದ್ದರಿಂದ ಪ್ರಸ್ತುತ ಶಿಕ್ಷಣ ಸಂಸ್ಥೆಗಳು ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ. (ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗುತ್ತದೆ.) ಈ ಕಾರಣದಿಂದ ವಿದ್ಯಾರ್ಥಿಗಳ ನಕಲಿ ಸಂಖ್ಯೆಯನ್ನು ತೋರಿಸಿ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯುವ ಅನೇಕ ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಲ್ಲಿ ಬಹಿರಂಗವಾಗಿವೆ.
ನೀತಿ ರೂಪಿಸುವುದು ಅಗತ್ಯ !
ಖಾಸಗಿ ಸಂಸ್ಥೆಯು ಆರ್ಥಿಕವಾಗಿ ಸಕ್ಷಮವಾಗಿದ್ದರೆ ಮತ್ತು ಅವರಿಗೆ ಮರುಪಾವತಿ ಮೊತ್ತದ ಅಗತ್ಯವಿರದಿದ್ದರೆ ಅಥವಾ ಶಿಕ್ಷಣ ಸಂಸ್ಥೆಯು ಆರ್ಥಿಕವಾಗಿ ದುರ್ಬಲವಾಗಿರುವ ಎಷ್ಟು ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡಲು ಸಾಧ್ಯವಿದೆ ಎಂಬುದರ ಕುರಿತು ಅಧ್ಯಯನ ನಡೆಸಿ ಸರಕಾರವು ಈ ಬಗ್ಗೆ ನೀತಿಯನ್ನು ರೂಪಿಸುವುದು ಅಗತ್ಯವಾಗಿದೆ. ಆದರೆ ಮರುಪಾವತಿಯ ನಿಯಮವನ್ನು ತಾನೇ ರೂಪಿಸಿ ಅದರ ನಿಧಿಯನ್ನು ೧೪ ವರ್ಷಗಳ ಕಾಲ ತಡೆಹಿಡಿಯುವುದರಿಂದ ಸರಕಾರದ ವರ್ಚಸ್ಸಿಗೆ ಧಕ್ಕೆಯಾಗುವುದಲ್ಲದೆ, ಶಿಕ್ಷಣ ಸಂಸ್ಥೆಗಳು ತಪ್ಪು ಹಾದಿ ಹಿಡಿಯುತ್ತಿವೆ. ಈ ಬಗ್ಗೆ ಸರಕಾರವು ಗಂಭೀರವಾಗಿ ಗಮನ ಹರಿಸುವುದು ಆವಶ್ಯಕವಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ