‘ಭಾರತದ ವಿವಿಧ ರಾಜ್ಯಗಳಲ್ಲಿನ ಜನರ ಭಾಷೆ, ಉಡುಗೆ ಇತ್ಯಾದಿಗಳು ಭಿನ್ನವಾಗಿದ್ದರೂ ಎಲ್ಲ ಜನರು ಹಿಂದೂ ಧರ್ಮೀಯರಾಗಿರುವುದರಿಂದ ಪರಸ್ಪರ ಸಂಬಂಧ ಹೊಂದಿದ್ದಾರೆ ಮತ್ತು ಅವರಲ್ಲಿ ಏಕತೆ ಇದೆ; ಆದರೆ ಇದುವರೆಗೂ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲಾಗಿಲ್ಲ. ವಾಸ್ತವದಲ್ಲಿ ಈ ಕಾಲದಲ್ಲಿ ಸರ್ವಧರ್ಮಸಮಭಾವದ ಅನಗತ್ಯವಾದ ಡಂಗುರ ಸಾರುತ್ತಿರುವುದರಿಂದ ಇಲ್ಲಿನ ಬಹುಸಂಖ್ಯಾತ ಜನರೂ ‘ನಾವು ಹಿಂದೂಗಳಿದ್ದೇವೆ’, ಎಂಬುದನ್ನೇ ಮರೆತಿದ್ದಾರೆ. ಹೀಗಾಗಿ, ಯಾರೂ ತಮ್ಮನ್ನು ಹಾಗೆ ಉಲ್ಲೇಖಿಸುವುದಿಲ್ಲ.

ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರು ೨೦೧೨ ರಲ್ಲಿ ಮೊದಲು ‘ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ ಏಕೆ ಇದೆ ?’ ಎಂದು ಹೇಳಿದರು. ಅವರು ‘ಹಿಂದೂ ರಾಷ್ಟ್ರ’ ಎಂದರೆ ಕೇವಲ ಹಿಂದೂಗಳ ರಾಷ್ಟ್ರವಲ್ಲ, ಆದರೆ ‘ಧರ್ಮಾಚರಣೆಯ, ನೀತಿವಂತ ಮತ್ತು ರಾಷ್ಟ್ರದ ಹಿತವನ್ನು ಕಾಪಾಡುವ ಪ್ರಜೆಗಳು ಮತ್ತು ಆಡಳಿತಗಾರರನ್ನು ಹೊಂದಿರುವ ರಾಜ್ಯ’ ಎಂಬ ಕಲ್ಪನೆಯನ್ನು ಮಂಡಿಸಿದರು. ಸಂಕ್ಷಿಪ್ತವಾಗಿ, ‘ಹಿಂದೂ ರಾಷ್ಟ್ರವು ರಾಮರಾಜ್ಯದಂತೆಯೇ ಇರುತ್ತದೆ’ ಎಂದು ಹೇಳಿದರು. ನಂತರ ೨೦೨೨ ರಲ್ಲಿ, ಹಿಂದುತ್ವವಾದಿ ನಾಯಕರು ಮತ್ತು ಭವಿಷ್ಯಜ್ಞಾನಿಗಳು ‘೨೦೩೦ ರಲ್ಲಿ ಹಿಂದೂ ರಾಷ್ಟ್ರ ಬರಲಿದೆ’ ಎಂದು ಹೇಳುತ್ತಿದ್ದರು; ಆದರೆ ‘ಹಿಂದೂ ರಾಷ್ಟ್ರ ಬರಲು ಏನು ಮಾಡಬೇಕು ?’ ಎಂಬುದನ್ನು ಯಾರೂ ಹೇಳುತ್ತಿರಲಿಲ್ಲ. ಬದಲಾಗಿ ಪರಾತ್ಪರ ಗುರು ಡಾ. ಆಠವಲೆಯವರು ೨೦೧೨ ರಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಕೇವಲ ಹೇಳದೇ ಅವರು ‘ಅದಕ್ಕಾಗಿ ಏನು ಪ್ರಯತ್ನ ಮಾಡಬೇಕು ?’, ಎಂಬುದನ್ನೂ ಹೇಳಿದರು ಮತ್ತು ಆ ಪ್ರಯತ್ನಗಳನ್ನು ಅವರು ಕೆಳಗೆ ಕೊಟ್ಟಂತೆ ಮಾಡಿಸಿಕೊಳ್ಳುತ್ತಿದ್ದಾರೆ.
೧. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಭಾರತದಾದ್ಯಂತ ನೂರಾರು ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಗಳು ನಡೆದು ಜನರು ಜಾಗೃತ ಮತ್ತು ಸಂಘಟಿತರಾದರು.
೨. ೨೦೧೨ ರಿಂದ ಪ್ರತಿವರ್ಷ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ನಡೆಸಲಾಗುತ್ತಿದೆ. ಅನಂತರ ಅನೇಕ ಸ್ಥಳಗಳಲ್ಲಿ ಪ್ರಾಂತೀಯ ಹಿಂದೂ ಅಧಿವೇಶನಗಳೂ ನಡೆಯುತ್ತಿವೆ.
೩. ಅವರು ಸಂತ-ಮಹಂತರು, ಹಿಂದುತ್ವನಿಷ್ಠರು, ನ್ಯಾಯವಾದಿಗಳು,

ಉದ್ಯಮಿಗಳು ಹೀಗೆ ಎಲ್ಲರನ್ನೂ ಸಂಘಟಿಸಿದರು ಮತ್ತು ಅವರನ್ನು ಒಂದೇ ದಿಕ್ಕಿನಲ್ಲಿ ಪ್ರಯತ್ನಿಸಲು ಪ್ರೋತ್ಸಾಹಿಸಿದರು.
೪. ‘ಶಕ್ತಿಯ ಬಲದಿಂದಲ್ಲ, ದೈವೀ ಸಾಮರ್ಥ್ಯದ ಬಲದಿಂದಲೇ ಧರ್ಮಸಂಸ್ಥಾಪನೆ ಮಾಡಲು ಸಾಧ್ಯ’, ಎಂದು ಒಗ್ಗೂಡಿದವರಿಗೆ ಮನವರಿಕೆ ಮಾಡಿಕೊಟ್ಟು ಅವರನ್ನು ಧರ್ಮಾಚರಣೆ ಮತ್ತು ಸಾಧನೆ ಮಾಡಲು ಉತ್ತೇಜಿಸಿದರು.
೫. ಜನರಿಗೆ ಸುಲಭವಾಗಿ ಅರ್ಥವಾಗಲು ಮತ್ತು ಓದಲು ಸುಲಭವಾಗಿರುವ ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮ ಈ ವಿಷಯಗಳ ಕುರಿತಾದ ಗ್ರಂಥಗಳನ್ನು ಪ್ರಕಟಿಸಿದರು.
೬. ಅಷ್ಟೇ ಅಲ್ಲದೇ, ಅವರು ೮-೧೦ ವರ್ಷ ವಯಸ್ಸಿನ ಬಾಲಸಾಧಕರನ್ನೂ ಹಿಂದೂ ರಾಷ್ಟ್ರದ ಸ್ಥಾಪನೆಯ ದೃಷ್ಟಿಯಿಂದ ರೂಪಿಸಲು ಆರಂಭಿಸಿದ್ದಾರೆ. ಇದೇ ಪೀಳಿಗೆಯು ಮುಂದೆ ಹಿಂದೂ ರಾಷ್ಟ್ರವನ್ನು ಮುನ್ನಡೆಸಿಕೊಂಡು ಹೋಗಲಿದೆ.
೭. ಅವರು ಅಧ್ಯಾತ್ಮದ ಪ್ರಸಾರವನ್ನು ಕೇವಲ ಭಾರತದಲ್ಲಷ್ಟೇ ಅಲ್ಲ, ಆದರೆ ಜಗತ್ತಿನಾದ್ಯಂತ ಮಾಡಿದರು. ಆದ್ದರಿಂದ ಇಡೀ ಜಗತ್ತಿನಾದ್ಯಂತದ ವಿವಿಧ ಜಾತಿಧರ್ಮಗಳ ಜಿಜ್ಞಾಸುಗಳು ಸಾಧನೆಯನ್ನು ಆರಂಭಿಸಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆಯವರು, ‘ಹಿಂದೂ ರಾಷ್ಟ್ರ ಬರಲಿದೆ, ಇದು ಈಶ್ವರನ ಆಯೋಜನೆಯೇ ಆಗಿದೆ ಮತ್ತು ಆ ಈಶ್ವರನೇ ಅದಕ್ಕಾಗಿ ಪ್ರಯತ್ನಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ !’ ಎಂದು ಹೇಳುತ್ತಾರೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ