ಇರಾನ್‌ನಿಂದ ಅಮೆರಿಕಕ್ಕೆ ಶಾಂತಿ ಪ್ರಸ್ತಾವನೆ!
(ಜಲಸಂಧಿ ಎಂದರೆ ಎರಡು ದೊಡ್ಡ ಜಲರಾಶಿಗಳನ್ನು (ಉದಾಹರಣೆಗೆ ಸಮುದ್ರ, ಮಹಾಸಾಗರ) ಸಂಪರ್ಕಿಸುವ ಕಿರಿದಾದ ಜಲಮಾರ್ಗ)

ತೆಹ್ರಾನ್ (ಇರಾನ್) – ಅಮೆರಿಕ ನಮ್ಮ ಅಣು ಕಾರ್ಯಕ್ರಮದ ಮೇಲೆ ನಿರ್ಬಂಧ ಹೇರುವ ಹಠವನ್ನು ಬಿಟ್ಟರೆ, ನಾವು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುತ್ತೇವೆ ಎಂಬ ಪ್ರಸ್ತಾವನೆಯನ್ನು ಇರಾನ್ ಪಾಕಿಸ್ತಾನದ ಮೂಲಕ ಅಮೆರಿಕದ ಮುಂದಿಟ್ಟಿದೆ. ಈ ಶಾಂತಿ ಪ್ರಸ್ತಾವನೆಯಲ್ಲಿ ಪ್ರಮುಖವಾಗಿ ಮೂರು ಸೂತ್ರಗಳಿವೆ: ಅಣು ಕಾರ್ಯಕ್ರಮದ ನಿರ್ಬಂಧದ ಹಠವನ್ನು ಬಿಡುವುದು. ಸಂಪೂರ್ಣ ಕದನ ವಿರಾಮ ಮತ್ತು ಭವಿಷ್ಯದಲ್ಲಿ ಅಮೆರಿಕ-ಇಸ್ರೇಲ್‌ನಿಂದ ಯಾವುದೇ ಮಿಲಿಟರಿ ಕ್ರಮ ಕೈಗೊಳ್ಳದಂತೆ ಭರವಸೆ ನೀಡುವುದು. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಸೈನ್ಯ ಮಾಡಿರುವ ದಿಗ್ಬಂಧನವನ್ನು ಕೊನೆಗೊಳಿಸುವುದು. ಈ ಮೂರು ಸೂತ್ರಗಳ ಮೇಲೆ ಹಂತ ಹಂತವಾಗಿ ಕೆಲಸವಾಗಬೇಕೆಂಬ ನಿರೀಕ್ಷೆಯನ್ನು ಇರಾನ್ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, “ಇರಾನ್ ಖುದ್ದಾಗಿ ಮುಚ್ಚಿರುವ ಹಾರ್ಮುಜ್ ಜಲಸಂಧಿಯನ್ನು ಮೊದಲು ಮುಕ್ತಗೊಳಿಸಬೇಕು” ಎಂದು ಹೇಳಿದ್ದಾರೆ.
ಇರಾನ್ ವಿದೇಶಾಂಗ ಸಚಿವರಿಂದ ಪುಟಿನ್ ಭೇಟಿ!
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಏಪ್ರಿಲ್ 27 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದರು. ಈ ಭೇಟಿಯಲ್ಲಿ ರಷ್ಯಾ ಇರಾನ್‌ಗೆ ತನ್ನ ದೃಢ ಬೆಂಬಲವನ್ನು ವ್ಯಕ್ತಪಡಿಸಿದೆ. ರಷ್ಯಾದ ಮಾಧ್ಯಮಗಳ ಪ್ರಕಾರ, “ಇರಾನ್ ಜನರು ಧೈರ್ಯ ಮತ್ತು ಶೌರ್ಯದಿಂದ ಸ್ವಾತಂತ್ರ್ಯ ಹಾಗೂ ಸಾರ್ವಭೌಮತ್ವಕ್ಕಾಗಿ ಹೋರಾಡುತ್ತಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರಿಂದ ನನಗೆ ಸಂದೇಶ ಬಂದಿದೆ,” ಎಂದು ಪುಟಿನ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಡೊನಾಲ್ಡ್ ಟ್ರಂಪ್ ಸಭೆ!
ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಶೀಘ್ರದಲ್ಲೇ ತಮ್ಮ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಇರಾನ್ ಜೊತೆಗಿನ ಪ್ರಸ್ತುತ ಉದ್ವಿಗ್ನತೆ, ಸ್ಥಗಿತಗೊಂಡಿರುವ ಮಾತುಕತೆಗಳು ಮತ್ತು ಭವಿಷ್ಯದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗುವುದು. ಈ ಸಭೆಯಲ್ಲಿ ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ ನಡೆಸುವ ಆಯ್ಕೆಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation