'ಮಹಾಭಾರತ' ಧಾರಾವಾಹಿಯ ಕಲಾವಿದರಿಂದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿಗಳ ಸಭೆಯಲ್ಲಿ ಗರ್ಜನೆ

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) – ಇಲ್ಲಿ ಆಯೋಜಿಸಲಾಗಿದ್ದ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿಗಳ ಪ್ರವಚನ ಸಭೆಯಲ್ಲಿ ಬಿ.ಆರ್. ಚೋಪ್ರಾ ಅವರ ಸುಪ್ರಸಿದ್ಧ ‘ಮಹಾಭಾರತ’ ಧಾರಾವಾಹಿಯ ಕಲಾವಿದರು ಉಪಸ್ಥಿತರಿದ್ದರು. ವೇದಿಕೆಯ ಮೇಲಿಂದ ಹಿಂದೂ ಧರ್ಮದ ರಕ್ಷಣೆ ಮತ್ತು ದೇಶವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡುವ ಬಗ್ಗೆ ಅವರು ಒತ್ತಿ ಹೇಳಿದರು. ಅವರ ಈ ಆಕ್ರಮಣಕಾರಿ ಹೇಳಿಕೆಗಳು ಎಲ್ಲರ ಗಮನ ಸೆಳೆದಿವೆ.
ಮತಾಂತರದ ಬಗ್ಗೆ ಜಾಗರೂಕರಾಗಿರಿ! – ಪುನೀತ್ ಇಸ್ಸಾರ್ (ದುರ್ಯೋಧನ)
‘ಮಹಾಭಾರತ’ ಧಾರಾವಾಹಿಯಲ್ಲಿ ‘ದುರ್ಯೋಧನ’ನ ಪಾತ್ರ ನಿರ್ವಹಿಸಿದ್ದ ನಟ ಪುನೀತ್ ಇಸ್ಸಾರ್ ಮಾತನಾಡಿ, “ಇಂತಹ ಸಭೆಗಳನ್ನು ನೋಡಿದಾಗ ನಮ್ಮ ಹಿಂದೂ ಸಮಾಜ ಈಗ ಜಾಗೃತವಾಗಿದೆ ಮತ್ತು ಹಿಂದೂ ರಾಷ್ಟ್ರ ಖಂಡಿತವಾಗಿಯೂ ನಿರ್ಮಾಣವಾಗಲಿದೆ ಎನಿಸುತ್ತದೆ. ನಾನು ನನ್ನ ತಾಯಿ-ಸಹೋದರಿಯರಿಗೆ ಮತ್ತು ಸಹೋದರರಿಗೆ ಖಂಡಿತವಾಗಿ ಹೇಳಬಯಸುವುದೇನೆಂದರೆ, ಅವರು ತಮ್ಮ ಮಕ್ಕಳಿಗೆ ಧರ್ಮದ ಮಾಹಿತಿ ನೀಡಬೇಕು. ಸುತ್ತಮುತ್ತಲಿನ ಜನರ ಬಗ್ಗೆ ಎಚ್ಚರದಿಂದಿರಿ. ಯಾವ ರೀತಿಯಲ್ಲಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆಯೋ, ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸಿ ಮತಾಂತರಿಸಲಾಗುತ್ತಿದೆಯೋ, ಅದರ ಬಗ್ಗೆ ಜಾಗರೂಕರಾಗಿರಿ. ಯಾವುದೇ ಪರಿಸ್ಥಿತಿಯಲ್ಲಿ ಇದು ನಡೆಯಬಾರದು,” ಎಂದು ಹೇಳಿದರು. ಅಲ್ಲದೆ, ಪುನೀತ್ ಇಸ್ಸರ್ ಇವರು ಶಾಸ್ತ್ರದ ಜೊತೆಗೆ ‘ಶಸ್ತ್ರ’ ವಿದ್ಯೆಯೂ ಅಗತ್ಯವೆಂದು ಹೇಳುತ್ತಾ ಎಲ್ಲರೂ ವ್ಯಾಯಾಮದ ಕಡೆಗೆ ಗಮನಹರಿಸಲು ಕರೆ ನೀಡಿದರು.
ಧರ್ಮದ ವಿರುದ್ಧ ಕೆಲಸ ಮಾಡುವವರ ವಿನಾಶ ಅನಿವಾರ್ಯ! – ಗಜೇಂದ್ರ ಚೌಹಾಣ್ (ಯುಧಿಷ್ಠಿರ)
ಮಹಾಭಾರತ ಧಾರಾವಾಹಿಯ ‘ಯುಧಿಷ್ಠಿರ’ ಅಂದರೆ ಗಜೇಂದ್ರ ಚೌಹಾಣ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, “ಮಹಾಭಾರತ ಧಾರಾವಾಹಿಯನ್ನು ಎಲ್ಲರೂ ನೋಡಿದ್ದಾರೆ; ಆದರೆ ನಾವು ಅದನ್ನು (ಅಭಿನಯದ ಮೂಲಕ) ಬದುಕಿದ್ದೇವೆ. ಧರ್ಮದ ವಿರುದ್ಧವಾಗಿದ್ದ ಆ ಪಾಪಿಗಳನ್ನು ನಾವು ನಾಶಮಾಡಿದೆವು. ಧರ್ಮದ ವಿರುದ್ಧ ಕೆಲಸ ಮಾಡುವವರ ವಿನಾಶ ಅನಿವಾರ್ಯ. ನಮಗೆ ರಾಷ್ಟ್ರಕ್ಕಿಂತ ದೊಡ್ಡದು ಯಾವುದೂ ಇಲ್ಲ,” ಎಂದರು.
ಧರ್ಮದ ಮೇಲೆ ಸಂಕಷ್ಟ ಬಂದಾಗ ತಟಸ್ಥರಾಗಿರದೆ ಅದರ ರಕ್ಷಣೆಗೆ ನಿಲ್ಲಿ! – ನಿತೀಶ್ ಭಾರದ್ವಾಜ್ (ಶ್ರೀಕೃಷ್ಣ)

ಧಾರಾವಾಹಿಯಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ್ದ ನಿತೀಶ್ ಭಾರದ್ವಾಜ್ ಅವರು ಭಗವದ್ಗೀತೆಯ ಶ್ಲೋಕಗಳ ಆಧಾರದ ಮೇಲೆ ಧರ್ಮ ರಕ್ಷಣೆಯ ಬಗ್ಗೆ ಮಾತನಾಡಿದರು. ಅವರು ಸಮಾಜಕ್ಕೆ ಪ್ರೀತಿ ಮತ್ತು ಏಕತೆಯ ಸಂದೇಶ ನೀಡಿದರು; ಆದರೆ ಅದರ ಜೊತೆಗೆ ಧರ್ಮದ ಮೇಲೆ ಸಂಕಷ್ಟ ಬಂದಾಗ ತಟಸ್ಥರಾಗಿರದೆ (ಮೌನವಾಗಿರದೆ) ಧರ್ಮದ ರಕ್ಷಣೆಗಾಗಿ ಎದ್ದು ನಿಲ್ಲುವಂತೆ ಅವರು ಕರೆ ನೀಡಿದರು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram