ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ್ ಪುನಾಳೇಕರ್ ಅವರ ಹೇಳಿಕೆ
ಖಟ್ಟರ್ ಸಹೋದರರ ಬಂಧನವನ್ನು ವಿರೋಧಿಸಿ ಮಹಾರಾಷ್ಟ್ರದ ಹಿಂದುತ್ವವಾದಿಗಳಿಂದ ಪ್ರತಿಭಟನೆ!
‘ಗೋವಾ ಹಿಂದೂ ರಕ್ಷಾ ಮಂಚ್’ ವತಿಯಿಂದ ಕಾರ್ಯಕ್ರಮ ಆಯೋಜನೆ!

ಮುಂಬಯಿ, ಏಪ್ರಿಲ್ 26 (ವಾರ್ತೆ) – ಫ್ರಾನ್ಸಿಸ್ ಕ್ಸೇವಿಯರ್‌ನನ್ನು ನೀವು ಸಂತನೆಂದು ಪರಿಗಣಿಸಬಹುದು, ಅದಕ್ಕೆ ನಮ್ಮ ಅಭ್ಯಂತರವಿಲ್ಲ; ಆದರೆ ಅದರಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ನಿಮ್ಮ ಇತಿಹಾಸವು ನಾಚಿಕೆಗೇಡಿನದ್ದಾಗಿದ್ದರೆ, ಅದರ ಬಗ್ಗೆ ನೀವು ನಾಚಿಕೆಪಡಬೇಕು. ಫ್ರಾನ್ಸಿಸ್ ಕ್ಸೇವಿಯರ್ ನಡೆಸಿದ ದೌರ್ಜನ್ಯಗಳ ನಿಜವಾದ ಇತಿಹಾಸವನ್ನು ಜಗತ್ತಿನ ಮುಂದೆ ತರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಅದಕ್ಕಾಗಿ ನಾವು ಗೋವಾದಲ್ಲಿ ಕಾನೂನುಬದ್ಧ ಹೋರಾಟವನ್ನೂ ಮಾಡುತ್ತೇವೆ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೇಕರ್ ದೃಢವಾಗಿ ಹೇಳಿದರು.
ಗೋವಾದಲ್ಲಿ ಖಟ್ಟರ್ ಸಹೋದರರ ಬಂಧನವನ್ನು ಪ್ರತಿಭಟಿಸಿ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದಲ್ಲಿ ಏಪ್ರಿಲ್ 26 ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷರಾದ ಶ್ರೀ. ರಣಜಿತ್ ಸಾವರ್ಕರ್ ಮತ್ತು ಪ್ರಖರ ಹಿಂದುತ್ವವಾದಿ ಶ್ರೀ. ಸಮೀರ ಕುಲಕರ್ಣಿ ಉಪಸ್ಥಿತರಿದ್ದರು. ‘ಗೋವಾ ಹಿಂದೂ ರಕ್ಷಾ ಮಂಚ್’ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನ್ಯಾಯವಾದಿ ಸಂಜೀವ ಪುನಾಳೇಕರ್ ಮಾತನಾಡುತ್ತಾ, “ಗೋವಾದ ‘ಹಾತ್ ಕಾತರೊ’ ಕಂಬದಲ್ಲಿ ಸಾವಿರಾರು ಹಿಂದೂಗಳ ಕೈಗಳನ್ನು ಕತ್ತರಿಸಿದ್ದಿರಲಿ ಅಥವಾ ಸಾರಸ್ವತ ಬ್ರಾಹ್ಮಣರ ಮೇಲೆ ನಡೆಸಿದ ದೌರ್ಜನ್ಯಗಳಿರಲಿ, ಫ್ರಾನ್ಸಿಸ್ ಕ್ಸೇವಿಯರ್ ಹಿಂದೂಗಳ ಮೇಲೆ ನಡೆಸಿದ ಈ ದೌರ್ಜನ್ಯಗಳನ್ನು ಮುಚ್ಚಿ ಹಾಕಲು ಖಟ್ಟರ್ ಸಹೋದರರನ್ನು ಬಂಧಿಸಲಾಗಿದೆ. ಫ್ರಾನ್ಸಿಸ್ ಕ್ಸೇವಿಯರ್‌ನ ನಿಜವಾದ ಇತಿಹಾಸವು ಜನರ ಮುಂದೆ ಬರಬಾರದು ಎಂಬ ಕಾರಣಕ್ಕೆ ಈ ಒತ್ತಡ ತಂತ್ರವನ್ನು ಬಳಸಲಾಗುತ್ತಿದೆ. ಫ್ರಾನ್ಸಿಸ್ ಕ್ಸೇವಿಯರ್‌ನ ದೌರ್ಜನ್ಯಗಳ ಬಗ್ಗೆ ಪತ್ರಗಳು ಭಾರತ ಮತ್ತು ಪೋರ್ಚುಗಲ್ ಸರಕಾರಗಳ ಬಳಿ ಲಭ್ಯವಿವೆ. ಜರ್ಮನಿಯು ಹಿಟ್ಲರನ ದೌರ್ಜನ್ಯಗಳಿಗಾಗಿ ಕ್ಷಮೆಯಾಚಿಸಿತು, ಹಾಗಿದ್ದಾಗ ಫ್ರಾನ್ಸಿಸ್ ಕ್ಸೇವಿಯರ್‌ನ ದೌರ್ಜನ್ಯದ ಇತಿಹಾಸವು ಏಕೆ ಹೊರಬರಬಾರದು?” ಎಂದು ಪ್ರಶ್ನಿಸಿದರು.
ಏನಿದು ಪ್ರಕರಣ?
ಕೆಲವು ದಿನಗಳ ಹಿಂದೆ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಪ್ರಖರ ಹಿಂದುತ್ವವಾದಿ ಶ್ರೀ. ಗೌತಮ ಖಟ್ಟರ್ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಶ್ರೀ. ಗೌತಮ ಖಟ್ಟರ್ ಮನೆಯಲ್ಲಿ ಸಿಗದಿದ್ದಾಗ, ಗೋವಾ ಪೊಲೀಸರು ಅವರ 18 ವರ್ಷದ ಕಿರಿಯ ಸಹೋದರ ಶ್ರೀ. ಮಾಧವ ಖಟ್ಟರ್ ಅವರನ್ನು ಬಂಧಿಸಿದರು. ಶ್ರೀ. ಗೌತಮ ಖಟ್ಟರ್ ಅವರಿಗೆ ಭಾಷಣ ಬರೆದುಕೊಟ್ಟಿದ್ದಾರೆ ಎಂಬ ಸುಳ್ಳು ಕಾರಣ ನೀಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 24 ರಂದು ಹಿಮಾಚಲ ಪ್ರದೇಶದಿಂದ ಪೊಲೀಸರು ಶ್ರೀ. ಗೌತಮ ಖಟ್ಟರ್ ಅವರನ್ನು ವಶಕ್ಕೆ ಪಡೆದಿದ್ದಾರೆ. |
ಗೋವಾ ಸರಕಾರವು ಕ್ಸೇವಿಯರ್ ಕುರಿತಾದ ದಾಖಲೆಗಳನ್ನು ಬಹಿರಂಗಪಡಿಸಲಿ!
ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದ ಫ್ರಾನ್ಸಿಸ್ ಕ್ಸೇವಿಯರ್ ಕ್ರಿಶ್ಚಿಯನ್ನರಿಗೆ ಬೇಕಾಗಿದ್ದಾರೆ; ಆದರೆ ಗೋವಾ ವಿಮೋಚನೆಗಾಗಿ ದೊಡ್ಡ ಕೊಡುಗೆ ನೀಡಿದ ಪೀಟರ್ ಅಲ್ವಾರೆಸ್ ಬೇಡವಾಗಿದ್ದಾರೆ. ಈ ದೇಶದಲ್ಲಿ ಮನುಸ್ಮೃತಿಯನ್ನು ಸುಡಬಹುದಾದರೆ, ಫ್ರಾನ್ಸಿಸ್ ಕ್ಸೇವಿಯರ್‌ನ ದೌರ್ಜನ್ಯಗಳ ಬಗ್ಗೆ ಮಾತನಾಡುವ ಹಕ್ಕು ನಮಗೂ ಇದೆ. ಗೋವಾ ಸರಕಾರವು ತಜ್ಞರ ಸಮಿತಿಯನ್ನು ನೇಮಿಸಿ 1-2 ತಿಂಗಳಲ್ಲಿ ಫ್ರಾನ್ಸಿಸ್ ಕ್ಸೇವಿಯರ್‌ನ ಕೃತ್ಯಗಳ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು. ಆ ಬಗ್ಗೆ ನಾಗರಿಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡಬೇಕು ಎಂದು ನ್ಯಾಯವಾದಿ ಸಂಜೀವ ಪುನಾಳೇಕರ್ ಕರೆ ನೀಡಿದರು.
ಗೋವಾ ಸರಕಾರವನ್ನು ಮಣಿಸಿ ಹಿಂದೂಗಳ ಮೇಲೆ ಒತ್ತಡ!
ಝಾಕಿರ್ ನಾಯ್ಕ್ ಶ್ರೀ ಗಣೇಶನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರೂ ಆತನನ್ನು ಬಂಧಿಸಲಾಗಿಲ್ಲ. ಎಂ.ಎಫ್. ಹುಸೇನ್ ಹಿಂದೂ ದೇವತೆಗಳ ನಗ್ನ ಚಿತ್ರಗಳನ್ನು ಬಿಡಿಸಿದರು, ಮಹಾರಾಷ್ಟ್ರದಲ್ಲಿ ಸರಸ್ವತಿ ದೇವಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಯಿತು, ಪುರುಷೋತ್ತಮ ಖೇಡೇಕರ್ ಅವರು ಬ್ರಾಹ್ಮಣ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರು, ಹೀಗೆ ಹಿಂದೂಗಳನ್ನು ಅವಮಾನಿಸುವವರಿಗೆ ಶಿಕ್ಷೆಯಾಗುತ್ತಿಲ್ಲ. ಹಿಂದುತ್ವವಾದಿ ಸರಕಾರವಿರುವ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆದಾಗ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ. ಕ್ರಿಶ್ಚಿಯನ್ನರು ಗೋವಾ ಸರಕಾರವನ್ನು ಮಣಿಸಿ ಹಿಂದೂಗಳ ಮೇಲೆ ಒತ್ತಡ ಹೇರಿದ್ದಾರೆ. ಅನ್ಯ ಧರ್ಮೀಯರಿಗೆ ಒಂದು ನ್ಯಾಯ ಮತ್ತು ಹಿಂದೂಗಳಿಗೆ ಮತ್ತೊಂದು ನ್ಯಾಯ ಏಕೆ? ಎಂದು ನ್ಯಾಯವಾದಿ ಸಂಜೀವ್ ಪುನಾಳೇಕರ್ ಪ್ರಶ್ನಿಸಿದರು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath