
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಭದ್ರತಾ ಪಡೆಗಳು ದೊಡ್ಡ ಭಯೋತ್ಪಾದನಾ ಸಂಚನ್ನು ಹತ್ತಿಕ್ಕಿವೆ. ಬಾಂಗ್ಲಾದೇಶ ಪೊಲೀಸ್ ಪ್ರಧಾನ ಕಚೇರಿಯು ಹೊರಡಿಸಿದ ಗುಪ್ತಚರ ಸುತ್ತೋಲೆಯಿಂದ ಈ ಮಾಹಿತಿ ಹೊರಬಂದಿದೆ. ಈ ಸಂಚಿನ ಗುರಿ ದೇಶದ ಪ್ರಮುಖ ಸಂಸ್ಥೆಗಳಾಗಿದ್ದವು, ಇದರಲ್ಲಿ ಸಂಸತ್ತು, ಸೈನ್ಯ ಮತ್ತು ಪೊಲೀಸ್ ಕಚೇರಿಗಳು, ಧಾರ್ಮಿಕ ಸ್ಥಳಗಳು, ಮನರಂಜನಾ ಕೇಂದ್ರಗಳು ಮತ್ತು ಢಾಕಾದ ಪ್ರಸಿದ್ಧ ಶಹಾಬಾಗ್ ಪ್ರದೇಶ ಸೇರಿದ್ದವು.
ಸೈನ್ಯದಿಂದ ವಜಾಗೊಂಡ ಸೈನಿಕರೊಂದಿಗೆ ಸಂಪರ್ಕ
ನಿಷೇಧಿತ ಭಯೋತ್ಪಾದನಾ ಸಂಘಟನೆಯ ಇಶ್ಟಿಯಾಕ್ ಅಹ್ಮದ್ ಮತ್ತು ಅಬು ಮಹಮ್ಮದ್ ಎಂಬ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ ನಂತರ ಈ ಸಂಚು ಬಹಿರಂಗಗೊಂಡಿತು. ವಿಚಾರಣೆಯ ವೇಳೆ, ಈ ಇಬ್ಬರೂ ಸೈನ್ಯದಿಂದ ಹೊರಹಾಕಲ್ಪಟ್ಟ ೨ ಸೈನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ತಿಳಿದುಬಂದಿದೆ. ಆರೋಪಿಗಳು ಸ್ಫೋಟಕಗಳು, ನಾಡಬಾಂಬ್‌ಗಳು ಮತ್ತು ಹರಿತವಾದ ಆಯುಧಗಳನ್ನು ಬಳಸಿ ದೇಶಾದ್ಯಂತದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಲು ಯೋಜಿಸಿದ್ದರು.
ಬಾಂಗ್ಲಾದೇಶ ವಾಯುಪಡೆಯಲ್ಲೂ ಭಯೋತ್ಪಾದಕರ ಪ್ರವೇಶ
ಕೆಲವು ದಿನಗಳ ಹಿಂದಷ್ಟೇ ಬಾಂಗ್ಲಾದೇಶ ವಾಯುಪಡೆಯ ಗುಪ್ತಚರ ವಿಭಾಗವು ವಾಯುಪಡೆಯ ಅಧಿಕಾರಿಗಳು ಮತ್ತು ಸೈನಿಕರಿಗೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂಬ ಭಯೋತ್ಪಾದನಾ ಸಂಘಟನೆಯೊಂದಿಗೆ ಸಂಪರ್ಕ ಇರುವುದನ್ನು ಬಹಿರಂಗಪಡಿಸಿತ್ತು. ನಂತರ ಈ ವಿಭಾಗವು ವಾಯುಪಡೆಯ ೩ ಪ್ರಮುಖ ನೆಲೆಗಳ ಮೇಲೆ ದಾಳಿ ನಡೆಸಿ ೨ ಅಧಿಕಾರಿಗಳು ಮತ್ತು ೧೦ ಸೈನಿಕರನ್ನು ಬಂಧಿಸಿತು. ಈ ಕ್ರಮಕ್ಕೆ ಮುನ್ನವೇ ೧೦ ರಿಂದ ೧೨ ಸೈನಿಕರು ತಲೆಮರೆಸಿಕೊಂಡಿದ್ದರು, ಅವರಲ್ಲಿ ಕೆಲವರು ಪಾಕಿಸ್ತಾನ, ಟರ್ಕಿ, ನ್ಯೂಜಿಲೆಂಡ್ ಮತ್ತು ಪೋರ್ಚುಗಲ್ ದೇಶಗಳನ್ನು ತಲುಪಿದ್ದಾರೆ. ಪದಾತಿದಳ ಮತ್ತು ನೌಕಾಪಡೆಯ ಸೈನಿಕರಿಗೂ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕವಿದೆಯೇ? ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಈಗ ನಡೆಯುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ