ಉತ್ತರ ಪ್ರದೇಶದ ಭಯೋತ್ಪಾದನಾ ನಿರೋಧಕ ದಳದಿಂದ (ATS) ಬಂಧನ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಭಯೋತ್ಪಾದನಾ ನಿರೋಧಕ ದಳವು (ATS) ಹಿಜ್ಬುಲ್ಲಾ ಅಲಿ ಖಾನ್ (ತುಷಾರ್ ಚೌಹಾಣ್) ಮತ್ತು ಸಮೀರ್ ಖಾನ್ ಎಂಬ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಈ ಇಬ್ಬರೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ISI) ಮತ್ತು ಪಾಕಿಸ್ತಾನಿ ಗೂಂಡಾಗಳ ಸಂಪರ್ಕದಲ್ಲಿದ್ದರು ಹಾಗೂ ದೇಶದ ಸೂಕ್ಷ್ಮ ಪ್ರದೇಶಗಳನ್ನು ಗುರಿಯಾಗಿಸಲು ಸಂಚು ರೂಪಿಸುತ್ತಿದ್ದರು. ಇಬ್ಬರೂ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ‘ಹ್ಯಾಂಡ್ಲರ್’ಗಳೊಂದಿಗೆ ಸಂಪರ್ಕದಲ್ಲಿದ್ದರು. ಅವರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ‘ಸ್ಲೀಪರ್ ಸೆಲ್’ಗಳನ್ನು (ಗೌಪ್ಯವಾಗಿ ಭಯೋತ್ಪಾದಕರಿಗೆ ನೆರವಾಗುವ ಸ್ಥಳೀಯ ಗುಂಪುಗಳು) ಸಿದ್ಧಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಹಿಂದೂ ಯುವಕನಾಗಿದ್ದ ತುಷಾರ್ ಮತಾಂತರಗೊಂಡು ಮುಸಲ್ಮಾನನಾಗಿದ್ದನು.
೧. ಈ ಇಬ್ಬರೂ ಭಯೋತ್ಪಾದಕರು ‘ಇನ್‌ಸ್ಟಾಗ್ರಾಮ್’, ‘ಟೆಲಿಗ್ರಾಮ್’ ಮತ್ತು ‘VOIP’ ಮೂಲಕ ಪಾಕಿಸ್ತಾನಿ ಗೂಂಡಾ ಶಹಜಾದ್ ಭಟ್ಟಿ ಮತ್ತು ಅವನ ಸಹಚರರ ಸಂಪರ್ಕಕ್ಕೆ ಬಂದಿದ್ದರು. ವಿಚಾರಣೆಯ ವೇಳೆ ಹಿಜ್ಬುಲ್ಲಾ ತಾನು ಸಾಮಾಜಿಕ ಜಾಲತಾಣಗಳಲ್ಲಿ ನಿಧಾನವಾಗಿ ಕಟ್ಟರವಾದಿ ವಿಚಾರಗಳಿಂದ ಪ್ರಭಾವಿತನಾಗಿ ಇಸ್ಲಾಂ ಧರ್ಮವನ್ನು ಅನುಸರಿಸಲು ಪ್ರಾರಂಭಿಸಿದೆ ಎಂದು ಹೇಳಿದ್ದಾನೆ.
೨. ಶಹಜಾದ್ ಭಟ್ಟಿ ನಕಲಿ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಆತನನ್ನು ಸಂಪರ್ಕಿಸಿದ್ದನು. ಹಿಜ್ಬುಲ್ಲಾನಿಗೆ ಕೆಲವು ಜನರ ಮನೆಗಳ ಮೇಲೆ ಗ್ರೆನೇಡ್ ಎಸೆಯಲು ಮತ್ತು ಅವರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲು ಕೆಲಸ ನೀಡಲಾಗಿತ್ತು. ಇದಕ್ಕಾಗಿ ಅವನಿಗೆ ಮೊದಲೇ ೫೦ ಸಾವಿರ ರೂಪಾಯಿ ಮತ್ತು ಕೆಲಸ ಮುಗಿದ ನಂತರ ಎರಡೂವರೆ ಲಕ್ಷ ರೂಪಾಯಿ ನೀಡುವ ಆಮಿಷ ತೋರಿಸಲಾಗಿತ್ತು. ಅವನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮತ್ತು ದುಬೈ ಮೂಲಕ ಪಾಕಿಸ್ತಾನಕ್ಕೆ ಕರೆಸಿಕೊಳ್ಳುವ ಭರವಸೆಯನ್ನೂ ನೀಡಲಾಗಿತ್ತು.
೩. ಇನ್ನೊಂದೆಡೆ, ಸಮೀರ್ ಖಾನ್‌ಗೆ ‘ತೆಹ್ರಿಕ್-ಎ-ತಾಲಿಬಾನ್ ಹಿಂದೂಸ್ತಾನ್’ ಸಂಘಟನೆಯೊಂದಿಗೆ ಸೇರಿ ಗೋಡೆಗಳ ಮೇಲೆ ಸಂಘಟನೆಯ ಹೆಸರುಗಳನ್ನು ಬರೆಯಲು ಮತ್ತು ಹೊಸ ಜನರನ್ನು ಭಯೋತ್ಪಾದಕ ಜಾಲಕ್ಕೆ ಸೇರಿಸಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿತ್ತು. ಇಬ್ಬರೂ ಸೇರಿ ಸಂಭವನೀಯ ದಾಳಿಯ ಸ್ಥಳಗಳ ಪರಿಶೀಲನೆಯನ್ನೂ ಆರಂಭಿಸಿದ್ದರು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram