ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್. ಮೆಕ್ ಮಾಸ್ಟರ್ ಅವರ ಹೇಳಿಕೆ
ಪಾಕಿಸ್ತಾನವು ಚೀನಾದ ಕೈಗೊಂಬೆ ಎಂಬ ಗಂಭೀರ ಆರೋಪ !

ವಾಷಿಂಗ್ಟನ್ (ಅಮೆರಿಕ) – ಪಾಕಿಸ್ತಾನವನ್ನು ಚೀನಾದ ಕಮ್ಯುನಿಸ್ಟ್ ಪಕ್ಷದ ಆಪ್ತ ಮಿತ್ರ ಎಂದು ನೋಡಬೇಕು. ಇರಾನ್ ನಲ್ಲಿರುವ ಪ್ರಸ್ತುತ ಸರಕಾರವನ್ನು ಉಳಿಸಿಕೊಳ್ಳುವಲ್ಲಿ ಚೀನಾಕ್ಕೆ ಆಸಕ್ತಿಯಿದೆ; ಏಕೆಂದರೆ ಚೀನಾ ಇರಾನ್ ನಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತದೆ. ಇದೇ ಕಾರಣಕ್ಕಾಗಿ ಚೀನಾವು ಇರಾನ್ ಅನ್ನು ಆರ್ಥಿಕವಾಗಿ ಬಲಿಷ್ಠವಾಗಿರಿಸುತ್ತದೆ. ಈ ಕಾರಣದಿಂದಾಗಿ, ಪಾಕಿಸ್ತಾನದ ಮಧ್ಯಸ್ಥಿಕೆಯ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ನಿಷ್ಪಕ್ಷಪಾತ ಎಂದು ಪರಿಗಣಿಸಲು ಸಾಧ್ಯವಿಲ್ಲ ಮತ್ತು ಅದರ ಹಿಂದೆ ಪಾಕಿಸ್ತಾನದ ಕೆಲವು ಗುಪ್ತ ಉದ್ದೇಶಗಳಿರಬಹುದು. ಈ ಎಲ್ಲಾ ಅಂಶಗಳ ಆಧಾರದ ಮೇಲೆ, ಪಾಕಿಸ್ತಾನದ ಪಾತ್ರವನ್ನು ಚೀನಾದ ಕಾರ್ಯತಂತ್ರದ ನೀತಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್. ಮೆಕ್ ಮಾಸ್ಟರ್ ಅವರು ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅವರು ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿರುವುದರಿಂದ ಪಾಕಿಸ್ತಾನದ ಉದ್ದೇಶದ ಮೇಲೆ ಮತ್ತೆ ಸಂಶಯ ವ್ಯಕ್ತವಾಗಿದೆ.
ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳನ್ನು ವಿದೇಶಾಂಗ ನೀತಿಯ ಭಾಗವಾಗಿ ಬಳಸಿಕೊಳ್ಳುತ್ತದೆ !
ಈ ಸಂದರ್ಶನದಲ್ಲಿ ಮೆಕ್ ಮಾಸ್ಟರ್ ಅವರು ಮಾತನಾಡುತ್ತಾ, ಪಾಕಿಸ್ತಾನವು ಒಂದು ಕಡೆ ಭಯೋತ್ಪಾದನಾ ವಿರೋಧಿ ಸಹಕಾರದ ಬಗ್ಗೆ ಮಾತನಾಡುತ್ತದೆ, ಆದರೆ ಇನ್ನೊಂದು ಕಡೆ ಅಮೆರಿಕದ ವಿರುದ್ಧ ಕೆಲಸ ಮಾಡುವ ಕೆಲವು ಗುಂಪುಗಳಿಗೆ ಬೆಂಬಲ ನೀಡುತ್ತದೆ. 1940 ರ ದಶಕದ ಉತ್ತರಾರ್ಧದಿಂದಲೂ ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳನ್ನು ತನ್ನ ವಿದೇಶಾಂಗ ನೀತಿಯ ಒಂದು ಭಾಗವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
‘ಲವ್ ಜಿಹಾದ್’ನ ಅಂತರರಾಷ್ಟ್ರೀಯ ಪಿತೂರಿ ಪ್ರಕರಣ: 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!