ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯ ಅಪಹರಣ: ಬಲವಂತ ಮತಾಂತರ ಮಾಡಿ ವಿವಾಹ!

​ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯೊಬ್ಬಳನ್ನು ಅಪಹರಣ ಮಾಡಿ ಬಲವಂತವಾಗಿ ಮತಾಂತರ ಮಾಡಲಾಗಿದೆ. ನಂತರ ಆಕೆಯನ್ನು ಮುಸ್ಲಿಂ ಯುವಕನೊಬ್ಬನೊಂದಿಗೆ ವಿವಾಹ ಮಾಡಿಕೊಡಲಾಗಿದೆ. ‘ವಾಯ್ಸ್ ಆಫ್ ಪಾಕಿಸ್ತಾನ್ ಮೈನಾರಿಟಿ’ ಎಂಬ ಸಂಘಟನೆಯು ಈ ಘಟನೆಯನ್ನು ಖಂಡಿಸಿದೆ. ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರೊಂದಿಗೆ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಅದನ್ನು ತಡೆಯುವುದು ಅವಶ್ಯಕ ಎಂದು ಸಂಘಟನೆ ಹೇಳಿದೆ.

​೧. ಸಂಘಟನೆಯು ನೀಡಿರುವ ಮಾಹಿತಿಯ ಪ್ರಕಾರ, ೯ನೇ ತರಗತಿಯಲ್ಲಿ ಕಲಿಯುತ್ತಿರುವ ಪೂಜಾ ಎಂಬ ಹಿಂದೂ ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಲಾಗಿದೆ. ಆಕೆಯ ಹೆಸರನ್ನು ‘ದುವಾ ಫಾತಿಮಾ’ ಎಂದು ಬದಲಾಯಿಸಿ ಇಮ್ರಾನ್ ಅಲಿ
ಎಂಬವನೊಂದಿಗೆ ವಿವಾಹ ಮಾಡಲಾಗಿದೆ.

​೨. ಪಾಕಿಸ್ತಾನದಲ್ಲಿ ನಡೆಯುವ ಬಲವಂತದ ಮತಾಂತರದ ಘಟನೆಗಳು ಸಾಮಾನ್ಯವಲ್ಲ ಎಂದು ‘ವಾಯ್ಸ್ ಆಫ್ ಪಾಕಿಸ್ತಾನ್ ಮೈನಾರಿಟಿ’ ಸಂಘಟನೆಯು ಹೇಳಿದೆ. ಸಿಂಧ್‌ನಲ್ಲಿ ಹಿಂದೂ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ರಕ್ಷಣೆಗಾಗಿ ಯಾವಾಗಲೂ ಭಯದ ಒತ್ತಡದಲ್ಲಿ ಬದುಕುತ್ತಿದ್ದಾರೆ.

​೩. ಈ ಪ್ರಕರಣದ ಕುರಿತು ಪೊಲೀಸ್ ಅಥವಾ ನ್ಯಾಯಾಲಯದಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

​೪. ಸಿಂಧ್‌ನಲ್ಲಿ ಹೆಚ್ಚುತ್ತಿರುವ ಅಪಹರಣ, ಬಾಲ್ಯವಿವಾಹ ಮತ್ತು ಬಲವಂತದ ಮತಾಂತರವು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ. ಈ ಪ್ರಕರಣದ ಪಾರದರ್ಶಕ ತನಿಖೆಯಾಗಬೇಕು, ಸಂತ್ರಸ್ತರಿಗೆ ಕಠಿಣ ಭದ್ರತೆಯನ್ನು ಒದಗಿಸಬೇಕು ಮತ್ತು ಇಂತಹ ಘಟನೆಗಳನ್ನು ತಡೆಯಲು ದೃಢವಾದ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯು ಆಗ್ರಹಿಸಿದೆ.

ಸಂಪಾದಕೀಯ ನಿಲುವು

  • ಇಸ್ಲಾಮಿ ಪಾಕಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತ!
  • ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ರಕ್ಷಿಸುವುದು ಭಾರತ ಸರಕಾರದ ಜವಾಬ್ದಾರಿಯಾಗಿದೆ. ಸರಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ!